ಎಜುಕೇಶನ್ ಲೋನ್ ನ ಲಾಭವನ್ನು ಪಡೆದುಕೊಳ್ಳಿ.
ಎಜುಕೇಶನ್ ಲೋನ್ : ಸಮಸ್ತ ಕರ್ನಾಟಕ ಜನತೆಗೆ ನನ್ನ ನಮಸ್ಕಾರಗಳು, ಈಗಿನ ಕಾಲಘಟ್ಟದಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾ ರ್ಥಿಗಳು ತಮ್ಮ ವಿದ್ಯಾಭ್ಯಾಸಗಳನ್ನು ನಿಲ್ಲಿಸುತ್ತಿದ್ದಾರೆ,ಇದಕ್ಕೆ ಪ್ರಮುಖ ಕಾರಣವೆಂದರೆ ಕುಟುಂಬದ ಆರ್ಥಿಕ ಪರಿಸ್ಥಿತಿ. ಹೀಗಾಗಿ ಇದನ್ನು ಗಮನದಲ್ಲಿರಿಸಿಕೊಂಡು ಅನೇಕ ಸರ್ಕಾರಿ ಸಂಸ್ಥೆಗಳು ಹಾಗು ಬ್ಯಾಂಕೂಗಳು ಅಥವಾ ಹಣಕಾಸಿನ ಸಂಸ್ಥೆಗಳು ಬಡ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ಗಳನ್ನು ನೀಡುತ್ತಿವೆ. ಇದರ ಫಲನುಭವಿಗಳಾದ ಬಡ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ಒಂದು ಸುಸ್ತಿರ ಮಟ್ಟದಲ್ಲಿ ರೂಪಿಸಿಕೊಳ್ಳಬಹುದಾಗಿದೆ.
ಎಜುಕೇಶನ್ ಲೋನ್ ನಿಂದ ಆಗುವ ಉಪಯೋಗಗಳು.
ಈ ಲೋನ್ ಗಳು ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಶುಲ್ಕ, ಪುಸ್ತಕಗಳ ಖರ್ಚು ಹಾಗೂ ಅವರ ಜೀವನದ ವೆಚ್ಚವನ್ನು ನಿರ್ವಹಿಸಲು ಸಹಕಾರಿಯಾಗಿದೆ. ಹೀಗಾಗಿ ಯಾವುದೇ ಬಡ ವಿದ್ಯಾರ್ಥಿಯೂ ಸಹ ತನ್ನ ಕುಟುಂಬಕ್ಕೆ ಹೊರೆಯಾಗದೆ ತನ್ನ ವಿದ್ಯಾಭ್ಯಾಸವನ್ನು ತನ್ನ ಖರ್ಚಿನಲ್ಲಿಯೇ ಮುಂದುವರೆಸಲು ಈ ಎಜುಕೇಶನ್ ಲೋನ್ ಯೋಜನೆಯು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಕುಟುಂಬಕ್ಕಿರುವ ತನ್ನ ಎಜುಕೇಶನ್ ಖರ್ಚುನ್ನು ತೆರವುಗೋಳಿಸಬಹುದಾಗಿದೆ.
ಇದರಿಂದ ಪ್ರತಿಯೊಬ್ಬ ಬಡ ವಿದ್ಯಾರ್ಥಿಯು ಸಹ ತನ್ನ ಗುರಿಯನ್ನು ಸಾಧಿಸಿ ತನ್ನಿಷ್ಟವಾದ ಸಂತೋಷದಾಯಕ ಬದುಕನ್ನು ಕಟ್ಟುಕೊಳ್ಳಬಹುದಾಗಿದೆ. ಇದರಿಂದ ತನ್ನ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ತನ್ನ ಕುಟುಂಬವನ್ನು ಬಡತನದಿಂದ ನಿರ್ಮೂಲನೆ ಮಾಡಬಹುದುದಾಗಿದೆ.
ಎಜುಕೇಶನ್ ಲೋನ್ ಪಡೆದುಕೊಳ್ಳಲುವುದು ಹೇಗೆ ?
ಯಾವುದೇ ವಿದ್ಯಾರ್ಥಿಯು ಕೂಡ ಸಾಲವನ್ನು ಪಡೆಯಲು ಮುಂದಾದಾಗ ಸೂಕ್ತವಾದ ಬ್ಯಾಂಕ್ ಅಥವಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಂಸ್ಥೆಗಳಲ್ಲಿ ದೊರೆಯುವ ಸಾಲ ಸೌಲಭ್ಯಗಳು, ಬಡ್ಡಿದರ ಹಾಗೂ ಮುಂತಾದ ಅನುಕೂಲ ಮತ್ತು ಅನಾನುಕೂಲಗಳನ್ನು ಗಮನದಲ್ಲಿರಿಸಿಕೊಂಡು ಸಾಲಪಡೆಯಬೇಕು ಇಲ್ಲದಿದ್ದಲ್ಲಿ ಮುಂದಿನ ಭವಿಷ್ಯದ ಶಿಕ್ಷಣಕ್ಕೆ ಅಡ್ಡಿಯಾಗಬಹುದು.
ಶೈಕ್ಷಣಿಕ ಸಾಲಗಳನ್ನು ಅನೇಕ ಹಣಕಾಸಿನ ಸಂಸ್ಥೆಗಳು ಹಾಗೂ ಎಲ್ಲಾ ರೀತೀಯ ವಾಣಿಜ್ಯ ಬ್ಯಾಂಕೂಗಳು ನೀಡುತ್ತವೆ.ಹಾಗಾಗಿ ಪ್ರತಿಯೊಬ್ಬ ಬಡ ವಿದ್ಯಾರ್ಥಿಯು ಸಹ ಕೂಡಲೆ ಸಮೀಪವಿರುವ ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗೆ ಭೇಟಿ ನೀಡಿ ಎಜುಕೇಶನ್ ಲೋನಿನ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : ಇನ್ಸ್ಪೈರ್ ಸ್ಕಾಲರ್ಶಿಪ್ : 10 ಸಾವಿರದವರೆಗೆ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಿರಿ.
ಎಜುಕೇಶನ್ ಲೋನ್ ಪಡೆಯಲು ಬೇಕಾಗುವ ಅರ್ಹತೆಗಳು:
ಲೋನ್ ಪಡೆಯಲು ಬಯಸುವ ವಿದ್ಯಾರ್ಥಿಯು ಮಾನ್ಯ ಪಡೆದ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತೀರಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಸಂಸ್ಥೆಗಳು ಕಾಲೇಜಿನ ಶುಲ್ಕವನ್ನು ಪಾವತಿ ಮಾಡುತ್ತವೆ ಹಾಗೂ ವಿದ್ಯಾರ್ಥಿಯ ಎಜುಕೇಶನ್ ಖರ್ಚುನ್ನು ನಿಭಾಯಿಸುತ್ತದೆ. ಈ ಮೂಲಕ ಕಾಲೇಜಿನಲ್ಲಿ ಓದುತ್ತಿರುವ ದಾಖಲೆಗಳನ್ನು ಎಜುಕೇಶನ್ ಲೋನ್ ನೀಡುತ್ತಿರುವ ನಿರ್ದಿಷ್ಟ ಬ್ಯಾಂಕಿಗೆ ಹಾಜರೂಪಡಿಸತಕ್ಕದ್ದು. ಈ ಎಲ್ಲಾ ದಾಖಲೆಗಳನ್ನು ಒದಗಿಸಿದ ಮೇಲೆ ನಿರ್ದಿಷ್ಟ ಹಣಕಾಸು ಸಂಸ್ಥೆಯು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಎಜುಕೇಶನ್ ಲೋನ್ ನೀಡಲಾಗುತ್ತದೆ.
ಎಜುಕೇಶನ್ ಲೋನ್ ಪಡೆಯಲು ಬೇಕಾಗುವ ವಿದ್ಯಾರ್ಹತೆ
ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಯು ಉನ್ನತ ವಿದ್ಯಾಭ್ಯಾಸ ನಡೆಸುತ್ತಿರಬೇಕು, ಉದಾಹರಣೆಗೆ 12ನೇ ತರಗತಿ ಅಥವಾ ಯಾವುದೇ ಪದವಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಹಾಗಾಗಿ ಅ ಹಂತಕ್ಕೆ ಬೇಕಾದ ಅಗತ್ಯ ಮೊತ್ತದ ಹಣವನ್ನು ಸಂಸ್ಥೆಯೇ ಪಾವತಿ ಮಾಡುತ್ತದೆ. ಇದರಿಂದಾಗಿ ವಿದ್ಯಾರ್ಥಿಗೆ ತುಂಬಾ ಅನುಕೂಲವಾಗುತ್ತದೆ. ತನ್ನ ನಿರ್ದಿಷ್ಟ ಗುರಿಯನ್ನು ಯಾವುದೇ ಅಡ್ಡಿಯಿಲ್ಲದೇ ಸಾಕಾರಗೋಳಿಸಿಕೊಳ್ಳಬಹುದು. ಸರ್ಕಾರದ ಇಂತಹ ಒಂದು ಯೋಜನೆಯು ನಿಜವಾಗಿಯೂ ತುಂಬಾ ಉತ್ತಮವಾದದ್ದು ಎಂಬುದೇ ನನ್ನ ಅಭಿಮಾತವಾಗಿದೆ.
ಎಜುಕೇಶನ್ ಲೋನ್ ಬಗ್ಗೆ ಹೆಚ್ಚು ಮಾಹಿತಿ
ಆರ್ಥಿಕ ಪರಿಸ್ಥಿತಿ:-ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿಯು ತುಂಬಾ ಕಠಿಣವಾಗಿದ್ದಾರೆ ಬ್ಯಾಂಕೂಗಳು ಲೋನ್ ನೀಡಲು ಒಳ್ಳೆಯ ಕಾರಣವಾಗಬಹುದು. ಹಲವಾರು ವಿದ್ಯಾರ್ಥಿಗಳು ಮನೆಗಳ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ತಮ್ಮ ವಿದ್ಯಾಭ್ಯಾಸದ ಕನಸನ್ನು ಕನಸಾಗಿಯೇ ಉಳಿಸಿಕೊಳ್ಳುತ್ತಾರೆ, ಆದರೆ ಈ ಒಂದು ಯೋಜನೆಯು ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿಯುಳ್ಳ ಹಲವಾರು ವಿದ್ಯಾರ್ಥಿಗಳಿಗೆ ಆತ್ಮೀಯ ಮಿತ್ರನೇ…
ಜಾತಿ ಮತ್ತು ಇತರ ಅಂಕಿ ಅಂಶಗಳು:-ವಿದ್ಯಾರ್ಥಿಯು ಕೆಳ ಶ್ರೇಣಿಯ ವಿದ್ಯಾರ್ಥಿಯಾಗಿದ್ದಾರೆ ಅಂತಹವರಿಗೆ ಸುಲಭವಾಗಿ ಲೋನ್ ದೊರಕುತ್ತದೆ.ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ತಾನು ಎಜುಕೇಶನ್ ಲೋನ್ ಪಡೆಯುವ ಸಂದರ್ಭದಲ್ಲಿ ತನ್ನ ಜಾತಿಯನ್ನು ತಿಳಿಸತಕ್ಕದ್ದು ಇದರಿಂದಾಗಿ ಸಾಲದ ಸೌಲಭ್ಯ ಶೀಘ್ರವಾಗಿ ದೊರಕುವುದು.
ಅರ್ಜಿಯನ್ನು ಸಲ್ಲಿಸುವ ಕಾಲವಧಿ:-ಆರ್ಥಿಕ ಬಿಕ್ಕತ್ತಿನ ವಿದ್ಯಾರ್ಥಿಯು ತಾನು ಸಾಕಾಲದಲ್ಲೇ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ತಾನು ವ್ಯಾಸಂಗ ಪ್ರಾರಂಭಿಸುವಾಗಲೇ ಎಜುಕೇಶನ್ ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸಿದರೆ ಕಾಲೇಜುಗಳು ಪ್ರಾರಂಭವಾಗುವಷ್ಟರಲ್ಲಿ ಕಾಲೇಜಿನ ಶುಲ್ಕ, ಪುಸ್ತಕದ ಖರ್ಚು ಎಲ್ಲವು ಸಕಾಲದಲ್ಲೇ ಒದಗುತ್ತದೆ.
ಬ್ಯಾಂಕುಗಳು ಅಥವಾ ನಿಖರಣ ಸಂಸ್ಥೆಯ ವಿವರಗಳು:- ಯಾವುದೇ ವಿದ್ಯಾರ್ಥಿಯೂ ಕೂಡ ಲೋನ್ ಪಡೆಯಲು ಅರ್ಜಿ ಸಲ್ಲಿಸುವಾಗ ತಾನು ಅರ್ಜಿ ಸಲ್ಲಿಸುವ ಬ್ಯಾಂಕಿನ ನಿಯಮಗಳನ್ನು ತಿಳಿದುಕೊಳ್ಳತಕ್ಕದ್ದು, ಏಕೆಂದರೆ ವಿವಿಧ ಬ್ಯಾಂಕುಗಳಲ್ಲಿ ಅಥವಾ ಸಾಲದು ಸಂಸ್ಥೆಗಳಲ್ಲಿ ವಿವಿಧ ರೀತಿಯ ನಿಯಮಗಳನ್ನು ಹೊಂದಿರಬಹುದು ಉದಾಹರಣೆಗೆ ಸಾಲಸೌಲಭ್ಯಗಳ ಅವಧಿ ಅಥವಾ ಬಡ್ಡಿದರ ಮುಂತಾದವುಗಳು . ಹೀಗಾಗಿ ಅರ್ಜಿ ಸಲ್ಲಿಸುವ ಮುಖೇನ ಸೂಕ್ಷ್ಮವಾಗಿ ಪರಿಶೀಲಿಸಿ ಲೋನ್ ಪಡೆಯತಕ್ಕದ್ದು.
ಹೀಗಾಗಿ ಅರ್ಹರಿರುವ ವಿದ್ಯಾರ್ಥಿಗಳು ಲೋನ್ ಅನ್ನು 2 ರೀತಿಯಲ್ಲಿ ಪಡೆಯಬಹುದು ಅವುಗಳೇದರೆ:
a)ಫೇಡರಲ್ ಸಾಲಗಳು:-ಈ ಸಾಲಗಳು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕಡಿಮೆ ಬಡ್ಡಿದರದಲ್ಲಿ ಹಾಗೂ ಧೀರ್ಘವದಿಯ ಮರುಪಾವತಿಗೆ ಸಹಕಾರಿಯಾಗಿದೆ.
b)ಖಾಸಗಿ ಸಾಲಗಳು:- ಈ ಸಾಲಗಳನ್ನು ಹಲವಾರು ವಾಣಿಜ್ಯ ಬ್ಯಾಂಕ್ ಗಳು ಅಥವಾ ಹಣಕಾಸಿನ ಸಂಸ್ಥೆಗಳು ಒದಗಿಸುತ್ತವೆ. ಇಲ್ಲಿ ಬಡ್ಡಿದರ ಮರುಪಾವತಿ ಎಲ್ಲವೂ ವಿವಿಧ ಬ್ಯಾಂಕ್ಗಳಿಗೆ ಬದಲಾಗಬಹುದು.
ಎಜುಕೇಶನ್ ಲೋನ್ ಪಡೆಯಲು ಬೇಕಾಗಿರುವ ಅಗತ್ಯ ಮಾಹಿತಿಗಳು:-
1. ವಿದ್ಯಾರ್ಥಿಯು ಲೋನ್ ನ ವಿವರವನ್ನು ಅರ್ಜಿಯನ್ನು ಮುಖೇನ ಬ್ಯಾಂಕಿಗೆ ಹಾಜರೂಪಡಿಸಬೇಕು. ಇದರಲ್ಲಿ ವಿದ್ಯಾರ್ಥಿಯ ವಿಳಾಸ, ತಂದೆಯ ಹೆಸರು ಮುಂತಾದ ಅಗತ್ಯ ವಿವರಗಳನ್ನು ನೀಡಬೇಕಾಗುತ್ತದೆ. ಹಾಗೂ ಸಾಲದ ಬಗ್ಗೆ ಸಂಪೂರ್ಣವಾಗಿ ಭರ್ತಿ ಮಾಡಿರಬೇಕಾದ ತಕ್ಕದ್ದು.
2. ವಿದ್ಯಾರ್ಥಿಯು ತನ್ನ ಅಗತ್ಯ ದಾಖಲೆಗಳನ್ನು ಅಂದರೆ ಆಧಾರ್ ಕಾರ್ಡ್ ಇನ್ನಿತರೇ ಗುರುತಿನ ಪ್ರಮಾಣ ಪಾತ್ರಗಳನ್ನು ಅರ್ಜಿಯ ಜೊತೆಗೆ ಸಲ್ಲಿಸತಕ್ಕದ್ದು.
3. ವಿದ್ಯಾರ್ಥಿಯು ತಾನು ವಾಸಿಸುತ್ತಿರುವ ಸ್ಥಳದ ಪ್ರಮಾಣ ಪತ್ರವನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ಯುಟಿಲಿಟಿ ಬಿಲ್ ಅಥವಾ ಅಂತ ನಿರ್ದಿಷ್ಟ ಊರಿನಲ್ಲಿ ತನ್ನ ಮನೆಯ ಜಾಗದ ಒಪ್ಪಂದದ ಪತ್ರ ಅಥವಾ ಸರ್ಕಾರಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
4. ವಿದ್ಯಾರ್ಥಿಯು ತನ್ನ ಇತ್ತೀಚಿನ ಪಾಸ್ಪೋರ್ಟ್ ಪ್ರಾಮಾಣಿಕೃತ ಫೋಟೋ ಗಳನ್ನು ನೀಡಬೇಕು.
ಎಜುಕೇಶನ್ ಲೋನ್ ಪಡೆಯಲು ಬೇಕಾಗಿರುವ ಶೈಕ್ಷಣಿಕ ದಾಖಲೆಗಳು:-
- ಲೋನ್ ನಾ ಫಲನುಭವಿಯಾದ ವಿದ್ಯಾರ್ಥಿಯು ತಾನು ವ್ಯಾಸಂಗ ಮಾಡುತ್ತಿರುವ ಪ್ರಸ್ತುತ ಕಾಲೇಜಿನ ಪ್ರವೇಶಾತಿ ಪತ್ರವನ್ನು ನಿರ್ದಿಷ್ಟ ಶಿಕ್ಷಣ ಸಂಸ್ಥೆಯಿಂದ ಪ್ರಾಮಾಣಿಕೃತಗೋಳಿಸಿದ ಪತ್ರವನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.
2. ಲೋನ್ ಪಡೆದುಕೊಳ್ಳುವ ವಿದ್ಯಾರ್ಥಿಯು ತಾನು ಹಿಂದಿನ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಯಿಂದ ಪಡೆದ ಅಥವಾ ಕೂಡಿಸಿಟ್ಟ ಪ್ರಾಮಾಣಿಕೃತ ಪತ್ರವನ್ನು ಹಾಗೂ ಮಾರ್ಕ್ ಕಾರ್ಡ್ ನ್ನು ಹಾಜರುಪಡಿಸಬೇಕಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಯು ಓದುತ್ತಿರುವ ಕಾಲೇಜಿನ ವಿವರ ಪಡೆದು ಬ್ಯಾಂಕೂಗಳು ಅಥವಾ ಹಣಕಾಸಿನ ಸಂಸ್ಥೆಗಳು ಶೈಕ್ಷಣಿಕ ಶುಲ್ಕವನ್ನು ಪಾವತಿಮಾಡುತ್ತವೆ.
3. ತನ್ನ ಜೀವನವನ್ನು ಕಟ್ಟುಕೊಳ್ಳ ಬಯಸಿ ಸಾಲದ ಸೌಲಭ್ಯ ಪಡೆಯಲು ಮುಂದಾದ ವಿದ್ಯಾರ್ಥಿಯು ತಾನು ಕಾಲೇಜಿನಲ್ಲಿ ತೆಗೆದುಕೊಳ್ಳುವ ಕೋರ್ಸ್ ಹಾಗೂ ಕೋರ್ಸ್ ಮಾಡಲು ತೆಗೆದುಕೊಳ್ಳುವ ಅವಧಿ ಹಾಗೂ ಪಾವತಿಸಬೇಕಾದ ಶುಲ್ಕದ ಮಾಹಿತಿಗಳ ವಿವರಗಳನ್ನು ಬ್ಯಾಂಕಿಗೆ ನೀಡಿ ಎಜುಕೇಶನ್ ಲೋನ್ ನ ಸೌಲಭ್ಯವನ್ನು ತನ್ನ ಶೈಕ್ಷಣಿಕ ಅವಧಿಯ ಪೂರ್ತಿ ಪಡೆದುಕೊಳ್ಳಬಹುದಾಗಿದೆ.
ಎಜುಕೇಶನ್ ಲೋನ್ ಪಡೆಯಲು ಬೇಕಾಗಿರುವ ಆರ್ಥಿಕ ದಾಖಲೆಗಳು:-
1.ತನ್ನ ಕುಟುಂಬದ ಆದಾಯದ ವಿವರವನ್ನು ತಿಳಿಸಬೇಕಾದ ವಿದ್ಯಾರ್ಥಿಯು ತನ್ನ ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ಆದಾಯ ತೆರಿಗೆ ಪ್ರಸ್ತಾವನೆ ಹಾಗೂ ಕಾರ್ಮಿಕರ ವಿತರಣೆ ಮುಂತಾದ ಆದಾಯ ಸಂಬಂಧಿ ಮಾಹಿತಿಗಳನ್ನು ನೀಡತಕ್ಕದ್ದು.
2. ವಿದ್ಯಾರ್ಥಿಯು ತನ್ನ 6 ತಿಂಗಳುಗಳ ಬ್ಯಾಂಕಿನ ವಿವರಗಳನ್ನು ಲೋನ್ ಒದಗಿಸುವ ಸಂಸ್ಥೆಯ ಗೆ ನೀಡಬೇಕು. ಏಕೆಂದರೆ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿಯನ್ನು ಹಾಗೂ ಬ್ಯಾಂಕಿನ ವಿವರಗಳನ್ನು ಕಲೆಹಾಕಲು ಈ ಮಾಹಿತಿಗಳು ಅಗತ್ಯವಾಗಿದೆ.
3. ಅಗತ್ಯವಿದ್ದಲ್ಲಿ ವಿದ್ಯಾರ್ಥಿಯು ತನ್ನ ಆಸ್ತಿಯ ವಿವರಗಳನ್ನು ಅಥವಾ ಇತರೆ ವಿವರಗಳನ್ನು ಬ್ಯಾಂಕಿಗೆ ಹಾಜರೂಪಡಿಸತಕ್ಕದ್ದು.
ಎಜುಕೇಶನ್ ಲೋನ್ ಪಡೆಯಲು ಬೇಕಾಗಿರುವ ಇತರೆ ದಾಖಲೆಗಳು :
1.ವಿದ್ಯಾರ್ಥಿಗಳು ತಮ್ಮನ್ನು ಸಾಕುತ್ತಿರುವ (ಪೋಷಕರ) ವಿವರಗಳನ್ನು ನೀಡಬೇಕಾಗುತ್ತದೆ. ವಿದ್ಯಾರ್ಥಿಯ ಸಹಾಯಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಲೋನ್ ಗಳನ್ನು ಬ್ಯಾಂಕ್ ಗಳು ಒದಗಿಸುತ್ತವೆ.
2. ಲೋನ್ ಪಡೆಯುವ ವಿದ್ಯಾರ್ಥಿಯು ತನಗೋದಗುವ ಸಾಲದ ಹಣವನ್ನು ಹೇಗೆ ಬಳಸುತ್ತಾನೆ ಎಂಬ ವಿವರಗಳನ್ನು ನೀಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಹಣವನ್ನು ಮಿತವ್ಯಯಿಯಾಗಿ ಬಳಸುವುದು ರೂಢಿಯಾಗಬೇಕು ಎಂಬುದೇ ನನ್ನ ಅಭಿಪ್ರಾಯವಾಗಿದೆ.
ಎಜುಕೇಶನ್ ಲೋನ್ ಪಡೆಯುವ ವಿದ್ಯಾರ್ಥಿಗಳ ಗಮನಕ್ಕೆ:-
ಯಾವುದೇ ವಿದ್ಯಾರ್ಥಿಯು ಸಹ ತಾನು ಎಜುಕೇಶನ್ ಲೋನ್ ಪಡೆಯುವ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಯ ಪೂರ್ತಿ ವಿವರಗಳನ್ನು ಪರಿಶೀಲನೆ ಮಾಡತಕ್ಕದ್ದು, ಇದರಿಂದಾಗಿ ಮುಂದಾಗುವ ಅಡೆ -ತಡೆಗಳಿಂದ ಸುರಕ್ಷಿತವಾಗಿರಬಹುದು.
ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದಕ್ಕೂ ಮುಂಚೆ ಒದಗಿಸುವ ಎಲ್ಲಾ ದಾಖಲೆಗಳು ಇತ್ತೀಚಿನವೆಯೇ ಎಂದು ಪರಿಶೀಲಿಸುವುದು ಉತ್ತಮ. ಇದು ಮುಂದಿನ ಹಂತಕ್ಕೆ ಸುಲಭವಾಗುತ್ತದೆ.ಇಂತಹ ಮುಂಜಾಗ್ರತ ಕ್ರಮಗಳು ವಿದ್ಯಾರ್ಥಿಯ ಎಜುಕೇಶನ್ ಲೋನ್ ಪಡೆಯಲು ಸಹಕಾರಿಯಾಗಿದೆ.
ಎಜುಕೇಶನ್ ಲೋನ್ ನೀಡುವಂತಹ ಬ್ಯಾಂಕ್ ಹಾಗೂ ಹಣಕಾಸಿನ ಸಂಸ್ಥೆಗಳ ವಿವರ.
ನಮಗೆ ತಿಳಿದಿರುವ ಕೆಲವು ಶೈಕ್ಷಣಿಕ ಸಾಲಗಳನ್ನು ಒದಗಿಸುವ ಬ್ಯಾಂಕ್ ಗಳು ಹಾಗೂ ಹಣಕಾಸಿನ ಸಂಸ್ಥೆಗಳನ್ನು ಕೆಳಗಡೆ ನೀದಿದ್ದೇವೆ.
ವಾಣಿಜ್ಯ ಬ್ಯಾಂಕ್ ಗಳೆಂದರೆ:-
1.ಬ್ಯಾಂಕ್ ಆಫ್ ಇಂಡಿಯಾ
2.ಹಿಂದೊಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಹಣಕಾಸು
3.ಐಸಿಐಸಿ ಬ್ಯಾಂಕ್
4.ಕೆನರಾ ಬ್ಯಾಂಕ್
5.ಪೂಣಾ ಬ್ಯಾಂಕ್
6.ಸ್ಟೇಟ್ ಬ್ಯಾಂಕ್ ಆ ಇಂಡಿಯಾ
7.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಕೆಲವು ಹಣಕಾಸಿನ ಸಂಸ್ಥೆಗಳೆಂದರೆ
1.ಬಹುಮಾನ ಮುಂಬರುವ ಸಂಸ್ಥೆಗಳು
2.ಕ್ವಿಕ್ ಸಾಲ್
3.ಫಿನಡಿಸ್ಕೊವರ್
ಮೇಲಿನ ಹಲವಾರು ಬ್ಯಾಂಕ್ ಹಾಗೂ ಹಣಕಾಡಿನ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಹಾಗೂ ಅವರ ವಿದ್ಯಾಭ್ಯಾಸದ ಶ್ರೇಣಿಗೆ ತಕ್ಕಂತೆ ಹಾಗೂ ಅವರ ಬುದ್ದಿವಂತಿಕೆಗೆ ವಿದ್ಯಾಭ್ಯಾಸ ಮಾಡುವ ಅವಧಿಗೆ ತಕ್ಕಂತೆ ಸೂಕ್ತವಾದ ಬ್ಯಾಂಕನ್ನು ಆಯ್ಕೆ ಮಾಡಿಕೊಂಡು ಮುಂದಿನ ವಿದ್ಯಾಭ್ಯಾಸ ಮುಂದುವರಿಸುವುದು ಉತ್ತಮ ಎಂಬುದೇ ನನ್ನ ಅಭಿಮಾತವಾಗಿದೆ.
Conclusion
ನಮಗೆ ತಿಳಿದಷ್ಟು ಮಾಹಿತಿಗಳನ್ನು ತಲುಪಿಸಿದ್ದೇವೆ. ನಮ್ಮ ಈ ಚಿಕ್ಕ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬಹುದು ಎಬುದು ನನ್ನ ಆಶಯವಾಗಿದೆ. ನಮ್ಮ ದೇಶ ಮುಂದುವರೆಯುತ್ತಿರುವ ಒಂದು ದೇಶ ಇಲ್ಲಿ ಎಲ್ಲಾ ರೀತಿಯ ಕುಟುಂಬಗಳು ಇವೆ. ಹೀಗಾಗಿ ಎಲ್ಲರ ಪರಿಸ್ಥಿತಿಯು ಒಂದೇ ರೀತಿ ಇರುವುದಿಲ್ಲ. ಕೆಲವರು ಮನೆಯವರಿಗೋಸ್ಕರ ತಮ್ಮ ಕನಸನ್ನೆ ತ್ಯಾಗ ಮಾಡಬೇಕಾಗುತ್ತದೆ. ಆದರೆ ಈ ಒಂದು ಯೋಚನೆಯು ಹಲವಾರು ಬಡ ವಿದ್ಯಾರ್ಥಿಗಳ ಕನಸಿಗೆ ಹಣತೆಯನ್ನು ಹಚ್ಚಿದೆ. ಹೀಗಾಗಿ ಈಗಿನ ಬಡ ವಿದ್ಯಾರ್ಥಿಗಳು ಎಜುಕೇಶನ್ ಲೋನ್ ಸಹಾಯ ಪಡೆದು ತಮ್ಮ ಮುಂದಿನ ಬದುಕಿನಲ್ಲಿ ಬಡತನದಿಂದ ನಿರ್ಮೂಲನೆ ಹೊಂದಿ ಒಂದು ಸುಸ್ಥಿರ ಬದುಕನ್ನು ಕಟ್ಟುಕೊಳ್ಳಬಹುದು. ಇದೆ ರೀತಿ ಮುಂದೊಂದು ದಿನ ನಮ್ಮ ದೇಶ ಬಡತನ ನಿರ್ಮೂಲನ ದೇಶ ಎಂದಾಗಲಿ ಎಂಬುದೇ ನನ್ನ ಆಶಯವಾಗಿದೆ.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು