ಕಡಿಮೆ ಬಡ್ಡಿದರದಲ್ಲಿ 3 ಲಕ್ಷದ ವರೆಗೆ ಸಾಲ ಸೌಲಭ್ಯ! Panjab National Bank ಮುದ್ರಾ ಸಾಲ ಯೋಜನೆ.

ಮುದ್ರಾ ಸಾಲ ಯೋಜನೆ

ನಮಸ್ಕಾರ ಸ್ನೇಹಿತರೆ, ಸಮಸ್ತ ಕರ್ನಾಟಕ ಜನತೆಗೆ ಈ ಆರ್ಟಿಕಲ್ ನಲ್ಲಿ ಮುದ್ರಾ ಸಾಲ ಯೋಜನೆಯ ಬಗ್ಗೆ ತಿಳಿಸಿ ಕೊಡುತ್ತೇವೆ. ಮುದ್ರಾ ಸಾಲವು ಭಾರತದಲ್ಲಿ ಹೊಸದಾಗಿ ಉದ್ಯಮಗಳನ್ನು ಆರಂಭಿಸುವವರಿಗೆ ಲೋನ್ ಸೌಲಭ್ಯವನ್ನು ನೀಡಲು ಬಯಸಿದೆ. ಇದು ನವೀನ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಇದು ನವ ಬಿಸಿನೆಸ್ ರವರಿಗೆ ಆತ್ಮೀಯ ಮಿತ್ರನೇ ಆಗಿದೆ. ಹೀಗಾಗಿ ಉದ್ಯಮವನ್ನು ವಿಸ್ತಾರಗೋಳಿಸಬಯಸುವವರು ಈ ಮುದ್ರಾ ಸಾಲ ಯೋಜನೆಯ ಲಾಭವನ್ನು ಪಡೆದುಕೊಂಡು ತಮ್ಮ ಉದ್ಯಮದ ಕನಸನ್ನು ನನಸುಮಾಡಿಕೊಳ್ಳಬೇಕು ಎಂಬುದೇ ನನ್ನ ಅಭಿಮಾತವಾಗಿದೆ. ಈ ಮುದ್ರಾ ಸಾಲ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ತಿಳಿಸಿಕೊಡುತ್ತೇವೆ. ಈ ಮುದ್ರಾ ಸಾಲ ಲೋನ್ ನ ಮೇಲೆ ಆಸಕ್ತಿ ಇರುವವರು ಕೊನೆಯ ವರೆಗೂ ಓದಿ.

ಭಾರತದ ಪ್ರಮುಖ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ “ಪಂಜಾಬ್ ನ್ಯಾಷನಲ್ ಬ್ಯಾಂಕ್” ವತಿಯಿಂದ ವ್ಯಾಪಾರ ಹಾಗೂ ಸಣ್ಣ ಉದ್ಯಮಿಗಳಿಗೆ 3 ಲಕ್ಷದಿಂದ 10 ಲಕ್ಷದ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. PNB ಬ್ಯಾಂಕುಗಳಲ್ಲಿ ತಮ್ಮ ಖಾತೆಯನ್ನು ತೆರೆದು ನಂತರ ಈ ಮುದ್ರಾ ಸಾಲ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.ವ್ಯಕ್ತಿಯೂ ತಾನು ತನ್ನ ಸ್ವಂತ ಉದ್ಯಮವನ್ನು ತುಂಬಾ ಬುದ್ದಿವಂತಿಕೆಯಿಂದ ಹಾಗೂ ಲಾಭದಾಯಕವಾಗಿ ಸ್ವತಂತ್ರವಾಗಿ ಉದ್ಯಮವನ್ನು ನಡೆಸುತ್ತಿರುವ ಅಭ್ಯರ್ಥಿಯೂ ಈ ಲೋನ್ ಗೆ ಅರ್ಜಿ ಸಲ್ಲಿಸಬಹುದು.ಈ ಯೋಜನೆಯೂ ಅಭ್ಯರ್ಥಿಗಳಿಗೆ ಅನೇಕ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಮುದ್ರಾ ಯೋಜನೆಯೂ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 3 ಶ್ರೇಣಿಗಳಲ್ಲಿ ಲೋನ್ ಅನ್ನು ಪಾವತಿಸುತ್ತದೆ. ಈ ಶ್ರೇಣಿಯ ಹಂತವು ವ್ಯವಹಾರವು ನಡೆಯುತ್ತಿರುವ ಹಂತ ಹಾಗೂ ಸಾಲದ ಬೇಡಿಕೆ ಮತ್ತು ಉದ್ಯಮದ ಅಗತ್ಯತೆಯ ಆಧಾರದ ಮೇಲೆ ಲೋನ್ ಅನ್ನು ಪಾವತಿಸುತ್ತದೆ. ಈ ಶ್ರೇಣಿಗಳೆಂದರೆ:-

1.ಶಿಷು (shishu)

ಈ ಹಂತದ ಯೋಜನೆಯಲ್ಲಿ ₹50000 ವರೆಗೆ ಸಾಲ ಸೌಭಾಯವನ್ನು ನೀಡಲಾಗುತ್ತದೆ. ಈ ಶ್ರೇಣಿಯ ಸಾಲವು ಸಾಮಾನ್ಯವಾಗಿ ಉದ್ಯಮದ ಪ್ರಾರಂಭ ಅಥವಾ ಸಣ್ಣ ಉದ್ಯಮಗಳಿಗೆ ನೀಡಲಾಗುತ್ತದೆ.

2.ಕಿಶೋರ್(Kishore)

ಈ ಶ್ರೇಣಿಯ ಹಂತದಲ್ಲಿ ₹50000 ದಿಂದ ₹5 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಹಂತವು ಮಾಧ್ಯಮ ವರ್ಗದ ಉದ್ಯಮಿಗಳಿಗೆ ಅವರ ವ್ಯಾಪಾರವನ್ನು ವಿಸ್ತಾರಗೊಳಿಸಲು ಹಾಗೂ ತಮ್ಮ ವ್ಯಾಪಾರದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಈ ಕಿಶೋರ್ ಹಂತದ ಸಾಲ ಸೌಲಭ್ಯ.

3.ತರುಣ (tarun)

ಈ ಶ್ರೇಣಿಯ ಹಂತದಲ್ಲಿ ಮುದ್ರಾ ಬ್ಯಾಂಕ್ ಉದ್ಯಮಿಗಳಿಗೆ 5 ಲಕ್ಷದಿಂದ 10 ಲಕ್ಷದ ವರೆಗೆ ಲೋನ್ ಅನ್ನು ಪಾವತಿಸುತ್ತದೆ. ಈ ಹಂತದ ಲೋನ್ ಅನ್ನು ವ್ಯಾಪಾರ ವಿಸ್ತಾರಾ ಹಂತದಲ್ಲಿರುವ ಅಥವಾ ಉದ್ಯಮವನ್ನು ಯಶಸ್ವಿಯಾಗಿ ನಡೆಸಿ ವಿಸ್ತಾರಗೊಳಿಸಬೇಕು ಎಂಬ ದೊಡ್ಡ ಉದ್ಯಮಿಗಳಿಗೆ ನೀಡಲಾಗುತ್ತದೆ.

ಈ ಮೇಲಿನ ಎಲ್ಲಾ ಹಂತಗಳನ್ನು ಸೋತಕವಾಗಿ ಗಮನಿಸಿ  ಲೋನ್ ಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯೂ ತನ್ನ ಹಂತದ ವ್ಯಾಪಾರಕ್ಕೆ ಹೋಲಿಕೆಯಾಗುವ ಲೋನ್ ಅನ್ನು ಪಡೆದುಕೊಳ್ಳಬಹುದು.

ಮುದ್ರಾ ಸಾಲದ ಮುಖ್ಯ ಲಕ್ಷಣಗಳೆಂದರೆ :-

ಉದ್ದೇಶಗಳು:-ಮುದ್ರಾ ಲೋನ್ ಅನ್ನು ಪಾವತಿಸುವುದು ಉದ್ಯಮಿಯೂ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು, ಅಂದರೆ ಉದ್ಯಮಿಯ ದಿನನಿತ್ಯದ ವ್ಯಾಪಾರ ವಹಿವಾತುಗಳನ್ನು ಕೈಗೊಳ್ಳಲು ಈ ಯೋಜನೆಯೂ ಲೋನ್ ಅನ್ನು ನೀಡುತ್ತದೆ. ಇದು ಉದ್ಯಮವನ್ನು ಆರಂಬಿಸಲು ಲೋನ್ ಅನ್ನು ಪಾವತಿಸುವುದಿಲ್ಲ ಕೇವಲ ಉದ್ಯಮದ ವಿಸ್ತಾರ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಲೋನ್ ಅನ್ನು ಪಾವತಿ ಮಾಡಲಾಗುತ್ತದೆ.

ಬಡ್ಡಿದರ:- ಮುದ್ರಾ ಸಾಲದಲ್ಲಿ ಲೋನ್ ತೆಗೆದುಕೊಳ್ಳುವ ಅಭ್ಯರ್ಥಿಗೆ ಆತ ತೆಗೆದುಕೊಂಡ ಲೋನ್ ನ ಮೊತ್ತದ ಆಧಾರದ ಮೇಲೆ ಬಡ್ಡಿದಾರವನ್ನು ಹೇರಲಾಗುತ್ತದೆ.ಹಾಗೂ ಅವನು ಲೋನ್ ತೆಗೆದುಕೊಳ್ಳುವ ಬಿಸಿನೆಸ್ ನ ರಿಸ್ಕ್ ಆಧಾರದ ಮೇಲು ಕೂಡ ಬಡ್ಡಿದಾರೆವನ್ನು ಹಾಕಲಾಗುತ್ತದೆ.

ಅಪೇಕ್ಷಕತೆ:-ಅಂದರೆ ಯಾವುದೇ ವ್ಯಾಪಾರಿಯೂ ಸಹ ಅಂದರೆ ಪುರುಷ ಅಥವಾ ಮಹಿಳೆ ಈಗಾಗಲೇ ನವೀನವಾಗಿ ತನ್ನ ಬಿಸಿನೆಸ್ ಅನ್ನು ಆರಂಭಿಸಿದ್ದಾರೆ ಅಥವಾ ಬಿಸಿನೆಸ್ ಇದ್ದು ಅದನ್ನು ವಿಸ್ತಾರಗೊಳಿಸಬಯಸುತ್ತಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸೂಕ್ತ ರೀರಿಯಲ್ಲಿ ಲೋನ್ ಅನ್ನು ಪಡೆಯಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯಮಿಗಳಿಗೆ ಮುದ್ರಾ ಸಾಲದ ನವ ಯೋಜನೆಯನ್ನು ತಡಿರುವ ಉದ್ದೇಶಗಳೇನು?

ಈ ಮುದ್ರಾ ಸಾಲವು ನಮ್ಮ ಭಾರತ ದೇಶದಲ್ಲಿರುವ ಸಣ್ಣ ಹಾಗೂ ಮಧ್ಯಮ ವ್ಯಾಪಾರ ನಡೆಸುತ್ತಿರುವ ಉದ್ಯಮಿಗಳಿಗೆ ಸಹಾಯವಾಗಲಿ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ನಮ್ಮ ದೇಶ ಪ್ರಗತಿ ಸಾಗಿಸಾಲಿ ಎಂಬ ಧ್ಯೇಯದೊಂದಿಗೆ ಈ ಯೋಜನೆಯನ್ನು ಪಂಬ ಅಂಗಿಕರಿಸಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳು ಕೆಳಕಂಡಂತಿವೆ:-

1.ಸ್ವಯಂ ಸಾಲ ಮತ್ತು ಉದ್ಯಮಶೀಲತೆಗೆ ಉತ್ತೇಜನ :-

ಈ ಯೋಜನೆಯೂ ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳನ್ನು ಬೆಂಬಲಿಸುತ್ತದೆ ಹೀಗಾಗಿ ಪ್ರತಿಯೊಬ್ಬ ಸಣ್ಣ ಉದ್ಯಮಿಯೂ ಕೂಡ ತನ್ನ ಸ್ವಯಂ ಪ್ರೇರಪಣೆಯಿಂದ ತನ್ನ ಉದ್ಯಮವನ್ನು ಯಶಸ್ವಿಯಾಗಿ ಮುಂಚೂಣಿಗೆ ತರಬೇಕು ಎಂಬ ಕನಸನ್ನು ಹೊಂದಿರುತ್ತಾನೆ. ಹಾಗಾಗಿಯೇ ಇಂತಹ ಸಣ್ಣ ಉದ್ಯಮಿಗಳ ಕನಸಿಗೆ ನಂದಾದೀಪ ಹಚ್ಚುವಂತೆ PNB ಈ ಮುದ್ರಾ ಯೋಜನೆಯನ್ನು ಪ್ರಸ್ತುತಪಡಿಸಿದೆ.

2.ಉದ್ಯಮದ ವಿಸ್ತರಣೆ:-

ಪ್ರತಿಯೊಬ್ಬ ನವ ಉದ್ಯಮಿಯ ಕನಸು ತನ್ನ ಉದ್ಯಮವನ್ನು ಹೆಚ್ಚಾಗಿ ವಿಸ್ತಾರ ಗೊಳಿಸಬೇಕು ಎಂಬುದು ಆದರೆ ಕೆಲಸ ಆರ್ಥಿಕ ಕಾರಣಗಳಿಂದ ತನ್ನ ಉದ್ಯಮವನ್ನು ತನ್ನಿಚ್ಚಿಸಿದ ರೀತಿಯಲ್ಲಿ ಸಾಕಾರಗೋಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಸಣ್ಣ ಉದ್ಯಮಿಗೂ ನೇರವಾಗಲಿ ಎಂಬುದಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಉದ್ಯಮದ ವಿಸ್ತರಣೆಯೂ ವ್ಯಾಪಾರದ ಶಾಖೆಗಳನ್ನು ವಿವಿಧ ಕಡೆ ಸ್ಥಾಪೀಸುವುದು, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಕೆಲಸಗಾರರ ಹೆಚ್ಚಳ ಮತ್ತು ಸಮಾಜ ಸೇವೆ ಮುಂತಾದ ವಿಚಾರಗಳನ್ನು ಒಳಗೊಂಡಿರುತ್ತದೆ.

3.ಮಹಿಳಾ ಉದ್ಯಮಿಗಳಿಗೆ ಪ್ರೊತ್ಸಾಹ:-

ನಮ್ಮ ಸಮಾಜದಲ್ಲಿ ಮಹಿಳೆಯರು ಅನೇಕ ವರ್ಷಗಳಿಂದ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾರೆ. ಹೀಗಾಗಿ ಇಂತಹ ಹೀನಾಯ ಸಮಾಜದಲ್ಲಿ ಮಹಿಳೆಯರು ಸ್ವಂತವಾಗಿ ಉದ್ಯಮವನ್ನು ಆರಂಭಿಸುವುದಕ್ಕೆ ಬಲು ಕಷ್ಟಕರ. ಹೀಗಾಗಿ ಈ ಮುದ್ರಾ ಯೋಜನೆಯು ಮಹಿಳೆಯರಿಗೆ ವಿಶೇಷ ಮೀಸಲಾತಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಲೋನ್ ಅನ್ನು ಪಾವತಿ ಮಾಡಲಾಗುತ್ತದೆ. ಮಹಿಳೆಯರ ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸಲು ಬಹಳ ಸಹಕಾರಿಯಾಗಿದೆ.

4.ಮಾಹಿತಿ ಮತ್ತು ತಂತ್ರಜ್ಞಾನ:-

ನಮ್ಮ ಭಾರತ ದೇಶ ಪ್ರಗಳಿಶೀಲಾ ರಾಷ್ಟ್ರ ಹೀಗಾಗಿ ಮುಂದೊಂದು ದಿನ ನಮ್ಮ ದೇಶ ಅಭಿವೃದ್ಧಿ ರಾಷ್ಟ್ರ ಆಗಬೇಕಾದರೆ ನಮ್ಮ ದೇಶದ ವಿವಿದೆಡೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಪ್ರಮುಖವಾಗಿ ಉದ್ಯಮಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಹೀಗಾಗಿ ತಂತ್ರಜ್ಞಾನ ಮತ್ತು ಆಧಿಕಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರೆ ಅದಕ್ಕೆ ಆರ್ಥಿಕ ಬೆಂಬಲದ ಅಗತ್ಯವಿದೆ. ಹೀಗಾಗಿ ಈ ಮುದ್ರಾ ಯೋಜನೆಯೂ ಇದನ್ನರಿತು ಲೋನ್ ಅನ್ನು ಉದ್ಯಮಿಗಳಗೆ ನೀಡಲು ಆರಂಭಿಸಿದೆ.

ಇದನ್ನು ಓದಿ : ಸರ್ವೇಯರ್ ಹುದ್ದೆಗಳ ನೇಮಕಾತಿ: ADLR ಹುದ್ದೆಗಳ ಅರ್ಜಿ ಆಹ್ವಾನ!

5.ಆರ್ಥಿಕ ಪ್ರಗತಿ ಮತ್ತು ಬಡತನ ನಿವಾರಣೆ :-

ನಮ್ಮ ದೇಶದಲ್ಲಿ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ಬಡತನ ಹಾಗೂ ನಿರುದ್ಯೋಗಗಳನ್ನು ಉದ್ಯಮಿಗಳು ನಿವಾರಣೆ ಮಾಡಬಹುದು. ಹೇಗೆಂದರೆ ನಮ್ಮ ದೇಶದ ಉದ್ಯಮಿಗಳು ಮುದ್ರಾ ಯೋಜನೆಯ ಮುಖಾಂತರ ಲೋನ್ ಪಡೆದು ತಮ್ಮ ಉದ್ಯಮವನ್ನು ವಿಸ್ತರಿಸಿ, ತಮ್ಮ ಶಾಖೆಗಳನ್ನು ಬಡವರಿರುವ ಕಡೆ ತೆರೆದು ಅವರಿಗೆ ಉದ್ಯೋಗ ಕಲ್ಪಿಸಿ ಆ ಭಾಗದ ಜನರ ಬಡತನವನ್ನು ನಿರ್ಮೂಲನ ಮಾಡಬಹುದು ಹಾಗೂ ಅನೇಕ ನಿರುದ್ಯೋಗಿಗಳಿಗೆ ಕೆಲಸನೀಡಿ ಅವರ ಬದುಕನ್ನು ಸಾಕರಾಗೊಳಿಸಬಹುದು.

ಮುದ್ರಾಸಾಲ ಪಡೆದುಕೊಳ್ಳಲು ಅಭ್ಯರ್ಥಿಯೂ ಕೆಲವು ಅರ್ಹತೆಗಳನ್ನು ಪೂರೈಸಬೇಕು. ಅವುಗಳೆಂದರೆ:-

1.ಉದ್ಯಮದ ಸ್ವರೂಪ:-

ಸಣ್ಣ ಮತ್ತು ಮಧ್ಯಮ ವಾಣಿಜ್ಯ ಉದ್ಯಮಿಗಳು ಹಾಗೂ ಸೀವ ಕೇಂದ್ರಗಳು ಹಾಗೂ ಬುಟಿಕ್, ವಿಶ್ವಕರ್ಮ ಸೀವ ಕೇಂದ್ರಗಳು, ತೋಟಗಾರಿಕೆ, ಬೆಳೆಗಾರಿಕೆ, ಗೋಶಾಲೆಗಳು,ಫಾರ್ಮಸಿ, ಕಾರ್ಮಿಕರು, ಹೋಟೆಲಗಳು, ರೆಸ್ಟೋರೆಂಟ್ ಗಳು,ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಉಧ್ಯಮಗಳು, ರಿಟೇಲ್ ವ್ಯಾಪಾರಗಳು ಮತ್ತು ಸ್ವಯಂ ಉದ್ಯೋಗ ಇದ್ದವರು ಹಾಗೂ ಇನ್ನಿತರ ಸಣ್ಣ ವ್ಯಾಪಾರ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಮೇಲಿನ ಎಲ್ಲಾ ಉದ್ಯಮಗಳನ್ನು ಗಮನಿಸಿ ಅಭ್ಯರ್ಥಿಯು ತನ್ನ ಉದ್ಯಮವು ಇದಕ್ಕೆ ಸೂಕ್ತವಾದಲ್ಲಿ ಕೂಡಲೇ ಲೋನ್ ಗೆ ಅರ್ಜಿ ಸಲ್ಲಿಸಬಹುದು.

2.ವಯೋಮಿತಿ:-

ಉದ್ಯಮ ಸಾಲಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷವಾಗಿರಬೇಕು ಏಕೆಂದರೆ ಉದ್ಯಮವನ್ನು ಪ್ರಾರಂಭಿಸಲು ಹಾಗೂ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಭ್ಯರ್ಥಿಗೆ ನಿರ್ದಿಷ್ಟ ಹಂತದ ವಯಸ್ಸಗಿರಬೇಕು. ಹಾಗೂ ಗರಿಷ್ಠ 65 ರ ಒಳಗಿರಬೇಕು. ಅಭ್ಯರ್ಥಿಯೂ ಉದ್ಯಾವನ್ನು ನಡೆಸಲು ದೈಹಿಕವಾಗಿ ಹೊಂದಿಕೆಹಾಗಬೇಕು.

3.ವ್ಯವಸ್ಥಿತ ವ್ಯವಹಾರ:-

ಅಭ್ಯರ್ಥಿಯೂ ತಾನು ವ್ಯವಹಾರ ಚಟುವಟಿಕೆಗೆ ಲೋನ್ ಪಡೆದುಕೊಳ್ಳುತ್ತಿದ್ದೇನೆ ಎಂಬುದಕ್ಕಾಗಿ ಆತ ತಾನು ತನ್ನ ವ್ಯವಹಾರವನ್ನು ನಡೆಸುವ ಪ್ಲಾನ್ ಅನ್ನು ವಿವರಿಸಬೇಕು ಆತನ ವ್ಯವಹಾರ ಪ್ಲಾನ್ ಸುಸ್ತಿರವಾಗಿದ್ದರೆ ಆತನಿಗೆ ಲೋನ್ ಅನ್ನು ನೀಡಲಾಗುತ್ತದೆ. ಹೊಸದಾಗಿ ಉದ್ಯಮ ಅಥವಾ ಉದ್ಯಮವನ್ನು ವಿಸ್ತಾರಗೊಳಿಸಬಯಸುವ ಅಭ್ಯರ್ಥಿಯು ಈ ಯೋಜನೆಯಡಿಯಲ್ಲಿ ಲೋನ್ ಅನ್ನು ಪಡೆದುಕೊಳ್ಳಬಹುದು.

4.ಗ್ರಾಹಕಾರ ಗುರುತುಗಳು:-

ಅಭ್ಯರ್ಥಿಯೂ ಬ್ಯಾಂಕಿನಲ್ಲಿ ಲೋನ್ ಪಡೆದುಕೊಳ್ಳಲು ನಿರ್ದಿಷ್ಟ ದಾಖಲೆಗಳನ್ನು ಒದಗಿಸಬೇಕು ಅಂದರೆ ವೈಯಕ್ತಿಕ ದಾಖಲೆಗಳು ಅವುಗಳೆಂದರೆ ಆಧಾರ ಕಾರ್ಡ್, ಪಾನ್ ಕಾರ್ಡ್, ಫೋಟೋ ಇನ್ನು ಮುಂತಾದ ದಾಖಲೆಗಳನ್ನು ಒದಗಿಸಬೇಕು.

5. ಚೆಕ್ ಬೌನ್ಸ್ ಇತಿಹಾಸ:-

ಅಭ್ಯರ್ಥಿಯೂ ತಾನು ಲೋನ್ ಅನ್ನು ಎಷ್ಟನೇ ಅವಧಿಗೆ ಪಾವತಿಸುತ್ತೇನೆ, ಎಷ್ಟು ಕಾಲ ಲೋನ್ ಬೇಕು ಹಾಗೂ ಲೋನ್ ಗೆ ಸಂಬಂಧಪಟ್ಟ ತಾಂತ್ರಿಕ ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು.

6.ಉದ್ದೇಶಪೂರ್ವಕ ಯೋಜನೆಗಳು:-

ಅಭ್ಯರ್ಥಿಯೂ ತಾನು ಪಡೆದುಕೊಂಡ ಲೋನ್ ಅನ್ನು ವ್ಯವಹಾರದ ಯಾವ ಯಾವ ಚಟುವಟಿಕೆಗೆ ಬಳಸುತ್ತೇನೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು ಹಾಗೂ ಅದಕ್ಕೆ ಸಂಬಂಧ ಪಟ್ಟ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹಾಗೂ ಶರತ್ತುಗಳನ್ನು ಅಭ್ಯರ್ಥಿಯೂ ಪೂರ್ಣಗೋಳಿಸಿದ್ದಲ್ಲಿ ಕೂಡಲೇ ಹತ್ತಿರವಿರುವ PNB ಬ್ಯಾಂಕಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಮುಖಾಂತರ ಲೋನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು :-

1.ವೈಯಕ್ತಿಕ ದಾಖಲೆಗಳು

ಮುದ್ರಾಸಾಲಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯೂ ತನ್ನ ವೈಯಕ್ತಿಕ ದಾಖಲೆಗಳನ್ನು ಒದಗಿಸಬೇಕು ಅವುಗಳೆಂದರೆ ಆಧಾರ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ, ಹಾಗೂ ಫೋಟೋ ಗಳು ಮತ್ತು ಡ್ರೈವಿಂಗ್ ಲೈಸನ್ಸ್ ಅನ್ನು ಒದಗಿಸಬೇಕು.ಹಾಗೂ ಅಭ್ಯರ್ಥಿಯೂ ತನ್ನ ವಿಳಾಸದ ದಾಖಲೆಗಳನ್ನು ಒದಗಿಸಬೇಕು.

2.ವ್ಯಾಪಾರದ ದಾಖಲೆಗಳು:-

ಅಭ್ಯರ್ಥಿಯೂ ತಮ್ಮ ವ್ಯಾಪಾರದ ನೊಂದಣಿ ಪ್ರಮಾಣ ಪತ್ರ, GST ನೋಂದಣಿ ಪ್ರಮಾಣ ಪತ್ರ ಹಾಗೂ ಯಾವುದೇ ಇನ್ನಿತರ ಕಾಣುನಾತ್ಮಕ ಪ್ರಮಾಣ ಪಾತ್ರಗಳು.

*ಅಭ್ಯರ್ಥಿಯೂ ತಾನು ಲೋನ್ ಪಡೆಯುತ್ತಿರುವ ಉದ್ದೇಶಗಳು ಹಾಗೂ ಲೋನ್ ನ ಹಣವನ್ನು ವ್ಯವಹಾರದ ಚಟುವಟಿಕೆಗಳಲ್ಲಿ ಬಳಸುವ ಕ್ರಮವನ್ನು ಒಳಗೊಂಡ ದಾಖಲೆಗಳನ್ನು ಸಲ್ಲಿಸಬೇಕು.

*ಅಭ್ಯರ್ಥಿಯು ತಾನು ಪ್ರಸ್ತುತ ವ್ಯಾಪ್ಪರ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಆಧಾಯದ ತೆರಿಗೆ ಕಟ್ಟಿದ ಪ್ರಮಾಣ ಪತ್ರ ಹಾಗೂ ಯಾವುದೇ ಇನ್ನಿತರ ಶಿಫ್ಫಾರಸ್ಸು ಪಡೆದಿದ್ದರೆ ಅದರ ಪತ್ರಗಳನ್ನು ಸಲ್ಲಿಸಬೇಕು.

ಈ ಮೇಲಿನ ಎಲ್ಲಾ ದಾಖಲೆಗಳನ್ನು ಅಭ್ಯರ್ಥಿಯು ಒದಗಿಸಿದ ಕೂಡಲೇ ಲೋನ್ ಕೊಡುವ ಪ್ರಕ್ರಿಯೆಯೂ ಶೀಘ್ರವಾಗಿ ನಡೆಯುತ್ತದೆ. ಮತ್ತು ಲೋನ್ ಅನ್ನು ನಿಮ್ಮ ದಾಖಲೆಗಳು ಹಾಗೂ ಅರ್ಹತೆಗಳನ್ನು ಗಮನಿಸಿ ಅಭ್ಯರ್ಥಿಯ ಉದ್ಯಮ ಮತ್ತು ಶಿಫ್ಫಾರಸ್ಸು ಮಾಡಿರುವ ಲೋನ್ ನ ಮೊತ್ತ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ.

CONCLUSION

ಈ PNB ರೂಪಿಸಿರುವ ಈ ಮುದ್ರಾ ಯೋಜನೆಯೂ ಸಣ್ಣ ಮತ್ತು ಮಾಧ್ಯಮ ವರ್ಗದ ಉದ್ಯಮಿಗಳಿಗೆ ಬಹು ಉಪಯೋಗವಾಗುತ್ತದೆ. ಹಾಗೆಯೇ ನಮ್ಮ ದೇಶದಲ್ಲಿರುವ ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೆಯೇ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ. ಮತ್ತು ಇದೆಲ್ಲಾದರಿಂದ ನಮ್ಮ ದೇಶ ಅಭಿವೃದ್ಧಿಯ ಕಡೆ ಸಾಗುವುದರಲ್ಲಿ ಅನುಮಾನವೇ ಇರುವುದಿಲ್ಲ. ಯಾವುದೇ ಒಂದು ಸರ್ಕಾರದ ಯೋಜನೆಯೂ ಸ್ಥಾಪೀತವಾಗಬೇಕಾದರೆ ಅದರಲ್ಲಿ ಅನೇಕ ಉಪಯೋಗಗಳಿರುತ್ತವೆ. ಈ ಯೋಜನೆಯೂ ಅನೇಕ ಉಪಯೋಗಗಳನ್ನು ಹೊಂದಿದೆ ನಮ್ಮ ದೇಶದಲ್ಲಿರುವ ಸಣ್ಣ ಮಾತ್ತು ಮಧ್ಯಮ ವರ್ಗದ ಉದ್ಯಮಿಗಳು ಲೋನ್ ಪಡೆದುಕೊಳ್ಳಬೇಕಾದರೆ ಇದೊಂದು ಸೂಕ್ತವಾದ ಯೋಜನೆ ಎಂದು ಹೇಳುವುದಕ್ಕೆ ಇಚ್ಚಿಸುತ್ತೇನೆ.ಮಹಿಳೆಯರಿಗೆ ವಿಶೇಷ ಮೀಸಲಾತಿ ಒದಗಿಸುವುದರಿಂದ ಪ್ರತಿಯೊಬ್ಬರೂ ಕೂಡ ಈ ಲೋನ್ ನ ಉಪಯೋಗವನ್ನು ಪಡೆದುಕೊಳ್ಳಬೇಕು ಎಂಬುದೇ ನನ್ನ ಮತ್ತು ಈ ಲೇಖನದ ಉದ್ದೇಶ ಮತ್ತು ಅಭಿಮಾತವಾಗಿದೆ.

ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.

ಧನ್ಯವಾದಗಳು

WhatsApp Group Join Now
Telegram Group Join Now
Instagram Group Join Now

Hello friends, my name is Sanju, I am the Writer and Founder of this blog and I will share all the information related to Government Scemes, Blogging, SEO, Internet Review, WordPress, Make Money Online, News and Technology through this website.🔁

1 thought on “ಕಡಿಮೆ ಬಡ್ಡಿದರದಲ್ಲಿ 3 ಲಕ್ಷದ ವರೆಗೆ ಸಾಲ ಸೌಲಭ್ಯ! Panjab National Bank ಮುದ್ರಾ ಸಾಲ ಯೋಜನೆ.”

Leave a comment