ಗೂಗಲ್ ಪೇ ಮೂಲಕ ಸಾಲ : 1 ಲಕ್ಷದವರೆಗೆ ಸಾಲ ಪಡೆಯಿರಿ.

ಗೂಗಲ್ ಪೇ ಮೂಲಕ ಸಾಲ : 1 ಲಕ್ಷದವರೆಗೆ ಸಾಲ ಪಡೆಯಿರಿ.

ಗೂಗಲ್ ಪೇ ಮೂಲಕ ಸಾಲ : ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಈ ಆರ್ಟಿಕಲ್ ನ ಮುಖಾಂತರ ಗೂಗಲ್ ಪೇ  ಮೂಲಕ ಸಾಲ ಪಡೆಯುವುದು ಹೇಗೆ ಎಂದು ತಿಳಿಸಿಕೊಡುತ್ತೇನೆ. ನಮ್ಮ ಈ ಆಧುನಿಕ ಜಗತ್ತಿನಲ್ಲಿ ಬಿಡುವಿಲ್ಲದ ಜೀವನ ಸಾಗಿಸುತ್ತಿರುವ ಜನಗಳಿಗೆ ಈ ಒಂದು ಯೋಜನೆಯು ಬಹಳಷ್ಟು ಸಹಕಾರಿಯಾಗಿದೆ. ಏಕೆಂದರೆ ಈ ಯೋಜನೆಯ ಮೂಲಕ ಬ್ಯಾಂಕಿಗೆ ಅಲೆದಾಡದೆ ಸುಲಭವಾಗಿ ಲೋನ್ ದೊರಕಿಸಿಕೊಳ್ಳಬಹುದು.ಹೀಗಾಗಿ ಪ್ರತಿಯೊಬ್ಬರಿಗೂ ಈ ಯೋಜನೆಯು ಬಹಳ ಸಹಕಾರಿಯಾಗಿದೆ. ಬ್ಯಾಂಕುಗಳಿಂದ ನಿರ್ದಿಷ್ಟ ಕಾರಣಗಳಿಂದ ಅನೇಕ ಜನಗಳಿಗೆ ಲೋನ್ ದೊರಕುವುದಿಲ್ಲ ಹೀಗಾಗಿ ಇದನ್ನು ಗಮನದಲ್ಲಿರಿಸಿಕೊಂಡು ಫೋನ್ ಮೂಲಕ ಒಂದು ಅಧಿಕೃತ ವೆಬ್ಸೈಟ್ ನಿಂದ ಜಾರಿಯಾದ ಲೋನ್ ಕೊಡುವ ಒಂದು ಆಪ್ ಗೂಗಲ್ ಪೇ.

ಇದು ಒಂದು ಸುಲಭವಾಗಿ ಪಡೆದುಕೊಳ್ಳುವ ಲೋನ್ ಆಗಿದ್ದು ಇದನ್ನು ಮನೆಯಲ್ಲಿದ್ದುಕೊಂಡೆ ಈ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ತ್ವರಿತವಾದ ಸಮಯದಲ್ಲಿ ಲೋನ್ ದೊರಕಲು ಈ ಒಂದು ಯೋಜನೆ ಬಹಳ ಸಹಕಾರಿಯಾಗಿದೆ.

ಗೂಗಲ್ ಪೇ ಮೂಲಕ ಸಾಲ ಪಡೆಯಲು ಬೇಕಾದ ಅರ್ಹತೆಗಳು:

*ಗೂಗಲ್ ಪೆನಲ್ಲಿ ಸಾಲ ಪಡೆಯುವ ಅಭ್ಯರ್ಥಿಯು ಗೂಗಲ್ ಪೆ ಆಪ್ ಅನ್ನು ಸಕ್ರಿಯವಾಗಿ ಬಳಸುತ್ತಿರಬೇಕು. ಇದರಿಂದಾಗಿ ಗ್ರಾಹಕರಿಂದ ಗೂಗಲ್ ಪೇ ಗೆ ಫ್ರಾಡ್ ಆಗುವುದು ತಪ್ಪುತ್ತದೆ. ವ್ಯಕ್ತಿಯೂ ಗೂಗಲ್ ಪೇ ಅನ್ನು ಸಕ್ರಿಯವಾಗಿ ಬಳಕೆ ಮಾಡುತ್ತಿದ್ದಲ್ಲಿ ಆತ ಅದರಿಂದ 1 ಲಕ್ಷದ ವರೆಗೆ ಲೋನ್ ಅನ್ನು ಪಡೆಯಬಹುದು.

*ಕ್ರೆಡಿಟ್ ಸ್ಕೋರ್:-

ಗೂಗಲ್ ಪೇ ಲೋನ್ ತೆಗೆದುಕೊಳ್ಳುವವನ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆಯೇ ಗೂಗಲ್ ಪೆ ಲೋನ್ ಅನ್ನು ನೀಡುತ್ತದೆ. ವ್ಯಕ್ತಿಯು ಪಡೆದ ಸಾಲವನ್ನು ಮರುಪಾವತಿಸಲು ಅರ್ಹನೆ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ಮರುಪಾವತಿಸಲು ಸೂಕ್ತನೇ ಎಂಬುದನ್ನು ಗಮನದಲ್ಲಿರಿಸಿಕೊಂಡಿರಬೇಕು. ವ್ಯಕ್ತಿಯೂ ತೆಗೆದುಕೊಂಡ ಲೋನ್ ಗೆ ಬಡ್ಡಿದರವನ್ನು ಆತನ ಕ್ರೆಡಿಟ್ ಸ್ಕೋರ್ ಪ್ರಕಾರ ನೀಡಲಾಗುತ್ತದೆ. ಹೀಗಾಗಿ ವ್ಯಕ್ತಿಯ ಹೆಚ್ಚಿನ ಕ್ರೆಡಿಟ್ ಸ್ಕೋರ್ ಆತನು ಲೋನ್ ತೆಗೆದುಕೊಳ್ಳುವುದಕ್ಕೆ ಉತ್ತಮವಾಗುತ್ತದೆ.

*”ಹಾಸಿಗೆ ಇದ್ದಷ್ಟು ಕಾಲು ಚಾಚು”ಎಂಬಂತೆ ಲೋನ್ ತೆಗೆದುಕೊಳ್ಳುವ ವ್ಯಕ್ತಿಯ ಆಧಾಯದ ಆಧಾರದ ಮೇಲೆ ಲೋನ್ ಅನ್ನು ನೀಡಲಾಗುತ್ತದೆ. ಏಕೆಂದರೆ ವ್ಯಕ್ತಿಯ ಆದಾಯ ಕನಿಷ್ಠ ಇದ್ದರೆ ಆತ ಲೋನ್ ಪಾವತಿ ಮಾಡಲು ಸಾಧ್ಯವಿಲ್ಲ ಹೀಗಾಗಿ ವ್ಯಕ್ತಿಯ ಆದಾಯವನ್ನು ಗಮನದಲ್ಲಿರಿಸಿಕೊಂಡು ಲೋನ್ ಅನ್ನು ನೀಡಲಾಗುತ್ತದೆ.

ಈ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದ್ದರೆ ನೀವು ಗೂಗಲ್ ಪೆ ನಲ್ಲಿ ಸಾಲ ಪಡೆಯಲು ಅರ್ಹರಾಗಿರುತ್ತಿರಿ. ಆದಷ್ಟು ನಿಮ್ಮ ಆದಾಯದ ಮಟ್ಟಿಗೆ ಲೋನ್ ಸೌಲಭ್ಯ ತೆಗೆದುಕೊಳ್ಳುವುದು ಕೂಡ ಉತ್ತಮ್ಮ. ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿ ಮಾಡಿಕೊಂಡರೆ ಲೋನ್ ತೆಗೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.

ಗೂಗಲ್ ಪೇ ಮೂಲಕ ಸಾಲ  ಪಡೆಯಬೇಕಾದರೆ ಬೇಕಾಗುವ ದಾಖಲೆಗಳು:-

ಗೂಗಲ್ ಪೆ ನಲ್ಲಿ ಲೋನ್ ಪಡೆಯಲು ಹೆಚ್ಚಿನ ದಾಖಲೆಗಳು ಹಾಗೂ ಅಲೆದಾಟದ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲಿ ಕುಳಿತುಕೊಂಡೆ ಅಗತ್ಯ ಮಾಹಿತಿಗಳೊಂದಿಗೆ ಲೋನ್ ಸೌಲಭ್ಯ ಪಡೆದುಕೊಳ್ಳಬಹುದು. ಇದರಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಈ ಕೆಳಗಿನ ಮಾಹಿತಿಗಳನ್ನು ನೀಡಿ ನೀವು ಗೂಗಲ್ ಪೆನಲ್ಲಿ ಲೋನ್ ನ ಸೌಲಭ್ಯ ಪಡೆಯಬಹುದಾಗಿದೆ. ಅಗತ್ಯ ಮಾಹಿತಿಗಳು ಕೆಳಕಂಡಂತಿವೆ:-

*ವ್ಯಕ್ತಿಯ ಪುರಾವೆಯನ್ನು ಗುರುತಿಸುವಂತಹ ಆಧಾರ್ ಕಾರ್ಡ್ ಅನ್ನು ಸಲ್ಲಿಸಬೇಕು.

*ವ್ಯಕ್ತಿಗೆ ಆನ್ಲೈನ್ ಮೂಲಕ ಸಾಲ ಸೌಲಭ್ಯ ದೊರಕುವುದರಿಂದ ವ್ಯಕ್ತಿಯೂ ತನ್ನ ಪಾನ್ ಕಾರ್ಡ್ ಅನ್ನು ನೀಡಬೇಕು.

*ಗೂಗಲ್ ಪೆ ಸಾಲ ನೀಡಬೇಕಾದರೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಆದಾಯ ಹಾಗೂ ಬ್ಯಾಂಕಿನಲ್ಲಿ ವಿವರಗಳನ್ನು ಗಮನದಲ್ಲಿರಿಸಿಕೊಂಡು ಆ ವ್ಯಕ್ತಿ ಸೂಕ್ತ ಲೋನ್ ಅನ್ನು ಪಡೆಯಲು ಅರ್ಹನೆ ಎಂಬುದನ್ನು ನಿರ್ಧರಿಸಿದ ಮೇಲೆ ವ್ಯಕ್ತಿಗೆ ಲೋನ್ ಅನ್ನು ನೀಡುತ್ತದೆ.

ಮೇಲೆ ಕಂಡಂತೆ ವ್ಯಕ್ತಿಯೂ ಪ್ರತಿಯೊಂದು ದಾಖಲೆಗಳನ್ನು ಗೂಗಲ್ ಪೆ ಗೆ ಒದಗಿಸಬೇಕಾಗಿದೆ. ಇದರಿಂದಾಗಿ ಎಲ್ಲಾ ಮೇಲ್ಕಂಡ ಅರ್ಹತೆಗಳು ಹಾಗೂ ದಾಖಲೆಗಳನ್ನು ಒದಗಿಸಿದಮೇಲೆ ಪ್ರತಿಯೊಬ್ಬರೂ ಕೂಡ 1 ಲಕ್ಷದ ವರೆಗಿನ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಕಾನ್ಸ್ಟೇಬಲ್ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ, 39,481 ಹುದ್ದೆಯ ನೇಮಕಾತಿ ಪ್ರಾರಂಭ.

ಆದರೆ ಇದು ಆನ್ಲೈನ್ ಮೂಲಕ ಪಡೆಯುವ ಲೋನ್ ಅಗಿದುದ್ದರಿಂದ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ನಾಗರಿಕನೂ ಕೂಡ ಇದರ ಬಗ್ಗೆ ತಿಳಿದುಕೊಂಡು ಅವರಿಗಾಗುವ ಫ್ರಾಡ್ ನಿಂದ ಸುರಕ್ಷಿಕವಾಗಿ ಇರಬಹುದಾಗಿದೆ. ನಮ್ಮ ಸಮಾಜದಲ್ಲಿ ಆನ್ಲೈನ್ ಮೂಲಕ ಅನೇಕ ಮುಗ್ದ ಜನರಿಗೆ ಹಾನಿಯಾಗಿದೆ. ಹಾಗಾಗಿ ಎಲ್ಲಾ ಅನುಸೂಚನೆಗಳನ್ನು ಸರಿಯಾಗಿ ಗಮನಿಸಿ ಲೋನ್ ಗೆ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.

ಗೂಗಲ್ ಪೇ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಪೆ ಮೂಲಕ ಲೋನ್ ಪಡೆಯಬೇಕಾದರೆ ಪ್ರಥಮವಾಗಿ ಲೋನ್ ಪಡೆಯುವವರು ಈ ಕೆಳಕಂಡ ಸೂಚನಗಳನ್ನು ಪಾಲಿಸಬೇಕು:

*ಗೂಗಲ್ ಪೆ ಮೂಲಕ ಸಾಲ ಪಡೆಯುವುದರಿಂದ ಸಾಲ ಪಡೆಯುವವರು ತನ್ನ ಮೊಬೈಲ್ ನಲ್ಲಿ ಗೂಗಲ್ ಪೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ಏಕೆಂದರೆ ಈ ಲೋನ್ ಆನ್ಲೈನ್ ಮೂಲಕ ಪಡೆಯುವುದರಿಂದ  ಇದಕ್ಕಾಗಿ ಮೊಬೈಲ್ ನ ಅವಶ್ಯಕತೆ ಇದ್ದೆ ಇದೆ ಹಾಗೂ ಗೂಗಲ್ ಪೇ ಅನ್ನು ಉಪಯೋಗಿಸುತ್ತಿರಬೇಕು ಇದರ ಪರಿಣಾಮದಿಂದಾಗಿ ಕ್ರೆಡಿಟ್ ಸ್ಕೋರ್ ಹೆಚ್ಚಾಗುವುದರಿಂದ ಸುಲಭವಾಗಿ ಲೋನ್ ದೊರೆಯುತ್ತದೆ.

*ನಂತರ ಗೂಗಲ್ ಪೇ ನಲ್ಲಿ ಬರುವ  ವ್ಯಾಪಾರ (ಅಂದರೆ ವ್ಯವಹಾರ ಚಟುವಟಿಕೆಗಳಿಗೆ ಹಣವನ್ನು ಪಾವತಿ  ಮಾಡಲು ಇರುವ ಆಯ್ಕೆಯಾಗಿದೆ)ಹಾಗೂ ಪಾವತಿ ವಿಭಾಗದಲ್ಲಿ ಸಾಲದ ವಿಭಾಗಕ್ಕೆ ಹೋಗಿ ಸಾಲ ಪಡೆಯಬಹುದು. ಇದರಿಂದ ತಿಳುಯುವುದೇನೆಂದರೆ ಗೂಗಲ್ ಪೆ ಅನೇಕ ಸೇವೆಗಳನ್ನು ಒದಗಿಸುತ್ತದೆ ಹೀಗಾಗಿ ಪ್ರತಿಯೊಬ್ಬರೂ ಕೂಡ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅನಂತರ ಪ್ರತಿಯೊಬ್ಬರೂ ಕೂಡ ಪರಿಶೀಲಿಸಬಹುದು, ಅವರು ಲೋನ್ ಗೆ ಅರ್ಹರೇನು ಅಥವಾ ಇಲ್ಲವೋ ಎಂಬುದನ್ನು ಗೂಗಲ್ ಲೋನ್ ತಿಳಿಸಿಕೊಡುತ್ತದೆ.  ಇದರ ನಂತರ ನೀವು ಗೂಗಲ್ ಲೋನ್ ಗೆ ಅರ್ಹರಾಗಿದ್ದರೆ ಅಗತ್ಯವಾದ ಮಾಹಿತಿಗಳನ್ನು ಭರ್ತಿ ಮಾಡಿ ಅನಂತರ ಎಲ್ಲಾ ಹಂತಗಳನ್ನು ಮುಗಿಸಿದಮೇಲೆ ಮೊಬೈಲ್ ಗೆ ಬರುವ ಒಟಿಪಿ ಯನ್ನು ಗೂಗಲ್ ನಲ್ಲಿ ನಮೋದಿಸಿದರೆ ಲೋನ್ ಗೆ ಅರ್ಜಿ ಸಲ್ಲಿಸಿದವರು ಲೋನ್ ಗೆ ಅರ್ಹರಾಗಿದ್ದರೆ ಅವರಿಗೆ ಗೂಗಲ್ ಪೆನ ಲೋನ್ ಅನ್ನು ಅವರ ಖಾತೆಗೆ ಜಮಾ ಮಾಡಲಾಗುವುದು.

ಗೂಗಲ್ ಪೆ ಮೂಲಕ ಪ್ರತಿಯೊಬ್ಬರೂ ಕೂಡ 1 ಲಕ್ಷದ ವರೆಗಿನ ಸಾಲ ಸೌಲಭ್ಯವನ್ನು ಮೇಲಿನ ಎಲ್ಲಾ ಅರ್ಹತೆಗಳು ಹಾಗೂ ದಾಖಲೆಗಳನ್ನು ಪೂರೈಸಿದರೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಕೂಡ ತಮ್ಮ ಆರ್ಥಿಕ ಕಷ್ಟದಿಂದ ಈ ಮುಖಾಂತರ ಮುಕ್ತವಾಗಲೂ ದಾರಿದೀಪವಾಗುತ್ತದೆ. ಪ್ರತಿಯೊಬ್ಬ ನಾಗರಿಕನೂ ಕೂಡ ತನ್ನ ಬದುಕನ್ನು ಸದೃಢವಾದ ರೀತಿಯಲ್ಲಿ ಕಟ್ಟುಕೊಳ್ಳಬಹುದು.

CONCLUSION

ಪ್ರತಿಯೊಬ್ಬ ಪ್ರಜೆಯು ಕೂಡ ತಮ್ಮ ಮೊಬೈಲ್ನಲ್ಲಿರುವ ಗೂಗಲ್ ಪೆ ಆಪ್ ಮೂಲಕ ತಮ್ಮ ಬದುಕಿನ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಯಾರಾದರೂ ಕೂಡ ತಮ್ಮ ತಮ್ಮ ಕಷ್ಟಗಳಾದ ಎಜುಕೇಶನ್,ಮದುವೆ,ಮನೆ ಕಟ್ಟುವುದು ಹಾಗೂ ಮುಂತಾದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ತ್ವರಿತವಾಗಿ ಲೋನ್ ಪಡೆದುಕೊಳ್ಳಬಹುದು. ಈಗಿನ ಪರಿಸ್ಥಿತಿಯಲ್ಲಿ ಅನೇಕ ಸಮಸ್ಯೆಗಳಿರುವುದರಿಂದ ಬ್ಯಾಂಕಿನಲ್ಲಿ ಅಲೆದಾಡಲು ಕಷ್ಟಕರವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿದ್ದುಕೊಂಡೆ ಕಡಿಮೆ ದಾಖಲೆಗಳು ಹಾಗೂ ತ್ವರಿತವಾಗಿ ಲೋನ್ ಅನ್ನು ಪಡೆದುಕೊಳ್ಳಬಹುದು.

ಹೀಗೆ ಸುಲಭವಾಗಿ ಲೋನ್ ದೊರಕುವುದರಿಂದ ಎಲ್ಲರಿಗೂ ತಮ್ಮ ಆರ್ಥಿಕ ಸಂಕಷ್ಟದಿಂದ ದೂರವಾಗಿ ಒಂದು ಸುಸ್ಥಿರವಾದ ಜೀವನ ಕಟ್ಟುಕೊಳ್ಳಬಹುದು. ಈ ಒಂದು ಯೋಜನೆಯೂ ಅನೇಕ ಬಡವರಿಗೆ ಆಪ್ತ ಮಿತ್ರನೇ ಆಗಿದೆ. ಆದರೆ ಈಗಿನ ಕಾಲದಲ್ಲಿ ಮೊಬೈಲ್ನಲ್ಲಿ ಅನೇಕ ಮೋಸಗಳು ಆಗುತ್ತಿರುವುದರಿಂದ ಪ್ರತಿಯೊಬ್ಬರೂ ಕೂಡ ಸೂಕ್ಷ್ಮವಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಹುಷರಾಗಿ ತಿಳಿಸಬೇಕು ಎಂಬುದೇ ನನ್ನ ಅಭಿಮತವಾಗಿದೆ.

ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.

         ಧನ್ಯವಾದಗಳು.

WhatsApp Group Join Now
Telegram Group Join Now
Instagram Group Join Now

Hello friends, my name is Sanju, I am the Writer and Founder of this blog and I will share all the information related to Government Scemes, Blogging, SEO, Internet Review, WordPress, Make Money Online, News and Technology through this website.🔁

Leave a comment