ರಾಜ್ಯದಲ್ಲಿ 5267 ಶಿಕ್ಷಕರ ಭರ್ತಿಗೆ ಶೀಕ್ಷಣ ಇಲಾಖೆ ಆದೇಶ!

ಎಲ್ಲರಿಗೂ ನಮಸ್ಕಾರ, ನಮ್ಮ ಸಮಸ್ತ ಕರ್ನಾಟಕ ಜನತೆಗೆ ತಿಳಿಸುವ ವಿಷಯವೇನೆಂದರೆ ನಮ್ಮ ರಾಜ್ಯದ ಶಿಕ್ಷಣ ಇಲಾಖೆಯು ರಾಜ್ಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಕಲ್ಯಾಣ ಕರ್ನಾಟಕವು ರಾಜ್ಯದ್ಯಂತ ಶೀಕ್ಷಕರ ನೇರ ನೇಮಕಾತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ನಮ್ಮ ರಾಜ್ಯದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಮುಂದುವರಿಯಬೇಕು ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಬೇಕು. ಹೀಗಾಗಿ ಚುರುಕಾದ ವಿದ್ಯಾರ್ಥಿಗಳಿಗೆ ಪ್ರತಿಭಾನ್ವಿತ ಶಿಕ್ಷಕರ ಅವಶ್ಯಕತೆಯಿದೆ. ನಮ್ಮ ರಾಜ್ಯದ ಅನೇಕ ಕಡೆ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಹೀಗಾಗಿ ಇದನ್ನರಿತ ರಾಜ್ಯ ಸರ್ಕಾರವು ಪ್ರತಿಭಾನ್ವಿತ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೂ ಕೆಲ ಕಡೆಯ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಏಕೋಪಾಧ್ಯಾಯ ಶಾಲೆಗಳಿವೆ ಹೀಗಾಗಿ ವಿದ್ಯಾರ್ಥಿಗಳ ವಿಚಾರದಾರೆ ವೃದ್ಧಿಸುವುದಿಲ್ಲ. ಇದರಿಂದಾಗಿ ಈ ಮೇಲಿನ ಕೊರತೆಯನ್ನು ನಿವಾರಿಸಲು ಸರ್ಕಾರವು ಶಿಕ್ಷಕರ ನೇಮಕಾತಿಗೆ ಅನುವು ಮಾಡಿಕೊಟ್ಟಿದೆ.

ನಮ್ಮ ಕಲ್ಯಾಣ ಕರ್ನಾಟಕ ಸರ್ಕಾರವು ಪ್ರಸ್ತುತ 2024-25ರ ಸಾಲಿನಲ್ಲಿ 5267 ಪೋಸ್ಟ್ ಗಳನ್ನು ಬಿಡುಗಡೆಗೋಳಿಸಿದೆ. ಇದರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾಗಳಿಗೆ ಶಿಕ್ಷಕ ನೇಮಕಾತಿ ನಿರ್ದಿಷ್ಟ ಸಂಖ್ಯೆಯಲ್ಲಿ ಆಗಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರರು ಅಂದರೆ ಒಂದನೇ ತರಗತಿಯಿಂದ ಐದನೇ ತರಗತಿಗೆ ಉಪನ್ಯಾಸ ಮಾಡುವ ಶಿಕ್ಷಕರ ಸಂಖ್ಯೆ 4424 ಹುದ್ದೆಗಳು ಖಾಲಿ ಇದೆ. ಹಾಗೂ ಪದವಿಧರ ಪ್ರಾಥಮಿಕ ಶಿಕ್ಷಕರ ಅಂದರೆ ಆರನೆಯ ತರಗತಿಯಿಂದ ಎಂಟನೇ ತರಗತಿಯವರೆಗೆ ಉಪನ್ಯಾಸ ಮಾಡುವ ಶಿಕ್ಷಕರ ಸಂಖ್ಯೆಯು 78 ಖಾಲಿ ಇದೆ. ಹಾಗೂ ದೈಹಿಕ ಶಿಕ್ಷಕರ ಸಂಖ್ಯೆಯೂ ಗ್ರೇಡ್-2 380 ಪೋಸ್ಟ್ ಖಾಲಿ ಇದೆ.ಇದನ್ನೆಲ್ಲಾ ಗಮನಿಸಿದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ  ಶಿಕ್ಷಕರ ಕೊರತೆ ಬಹಳವಾಗಿದೆ. ಇದಕ್ಕೆಲ್ಲಾ ನಮ್ಮ ಸಮಾಜದಲ್ಲಿರುವ ಅವ್ಯವಸ್ಥೆಯೇ ಕಾರಣ ಇದರಿಂದ ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳ ಭವಿಷ್ಯದ ಮೇಲೆ ಪರಿಣಾಮಬೀರಬಹುದು. ಇದರಿಂದಾಗಿ ಸರ್ಕಾರವು ಸೂಕ್ತವಾದ ಕ್ರಮದಲ್ಲಿ ಉತ್ತಮ ಗುಣಮಟ್ಟದ ಹಾಗೂ ಪ್ರತಿಭಾನ್ವಿತ ಶಿಕ್ಷಕರ ನೇಮಕ ನಡೆಸಿಕೊಳ್ಳಬೇಕು. ಇದರಿಂದಾಗಿ ನಮ್ಮ ಸಮಾಜದಲ್ಲಿರುವ ಬಡ ಮಕ್ಕಳ ಭವಿಷ್ಯವು ಉತ್ತಮವಾದ ರೀತಿಯಲ್ಲಿ ರೂಪುಗೋಳ್ಳುತ್ತದೆ.

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬಂತೆ ನಮ್ಮ ಸಮಾಜದಲ್ಲಿರುವ ಮಕ್ಕಳ ಭವಿಷ್ಯದ ಕಡೆಗೆ ಹೆಚ್ಚು ಹೆಚ್ಚು ಗಮನ ನೀಡಬೇಕಾಗುತ್ತದೆ. ಈಗಿನ ಮಕ್ಕಳಿಗೆ ಪ್ರತಿಭಾನ್ವಿತ ಶಿಕ್ಷಕರರಿಂದ ವಿದ್ಯಾಭ್ಯಾಸ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪರಿಣಿತಿಯನ್ನು ರೂಪಿಸಬೇಕು. ಇದರಿಂದಾಗಿ ಮಕ್ಕಳ ಉತ್ತಮ ಬೆಳವಣಿಗೆಯೊಂದಿಗೆ ನಮ್ಮ ದೇಶವೂ ಕೂಡ ಒಂದು ಉತ್ತಮವಾದ ರೀತಿಯಲ್ಲಿ ಅಭಿವೃದ್ಧಿಸಾಧಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ನಮ್ಮ ದೇಶ ಹಾಗೂ ರಾಜ್ಯ ವಿದ್ಯಾಭ್ಯಾಸದಲ್ಲಿ ಪ್ರಾಥಮಿಕವಾಗಿರಬೇಕು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.

Table of Contents

ಶಾಲಾ ಶಿಕ್ಷಕರ ನೇಮಕಾತಿಗೆ ಶಿಕ್ಷಕರನ್ನು ನೇಮಕಮಾಡಿಕೊಳ್ಳುವ ಉದ್ದೇಶಗಳೇನು?

ನಮ್ಮ ರಾಜ್ಯದಲ್ಲಿ ಅನೇಕ ಶಿಕ್ಷರನ್ನು ನೇಮಕಮಾಡಿಕೊಳ್ಳುವ ಉದ್ದೇಶ ಬಹಳವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾರ್ಯಪರಿನಿಂತಿಯನ್ನು ಹೊಂದಬೇಕು ಹಾಗೂ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂಬುದೇ ಈ ನೇಮಕಾತಿಯ ಉದ್ದೇಶವಾಗಿದೆ. ಹಾಗೂ ನಮ್ಮ ರಾಜ್ಯದಲ್ಲಿರುವ ಶಿಕ್ಷಣ ಪಡೆದುಕೊಂಡು ನಿರುದ್ಯೋಗಿಯಾಗಿರುವ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಉತ್ತಮವಾದ ಉದ್ಯೋಗಗಳನ್ನು ಒದಗಿಸಬೇಕು ಎಂಬುದೇ ಈ ನೇಮಕಾತಿಯ ಉದ್ದೇಶವಾಗಿದೆ. ಇದರಿಂದಾಗಿ ಎರಡೂಕಡೆಯೂ ಕೂಡ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎಂಬುದೇ ಉದ್ದೇಶವಾಗಿದೆ. ಇನ್ನ ಅನೇಕ ಉದ್ದೇಶಗಳು ಕೆಳಕಂಡಂತಿವೆ:-

1.ಗುಣಮಟ್ಟದ ಶಿಕ್ಷಣವನ್ನು ಒದಗಿಸಲು:-

ನಮ್ಮ ರಾಜ್ಯದಲ್ಲಿ ಖಾಸಗಿ ವಲಯದ ವಿದ್ಯಾರ್ಥಿಗಳ ಹಾಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದೇ ಗುಣಮಟ್ಟದ ವಿದ್ಯಾಭ್ಯಾಸ ದೊರಕಬೇಕು ಎಂಬುದಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಾಗೂ ನಮ್ಮ ರಾಜ್ಯದ ಅನೇಕ ಭಾಗದ ಶಾಲಾವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ಬೆಳವಣಿಗೆ ಯಾಗರ್ಬ್ರಕು ಎಂಬುದರಿಂದ ನಮ್ಮ ಸರ್ಕಾರವು ಉತ್ತಮ ಗುಣಮಟ್ಟದ, ಕೌಶಲ್ಯಯುತ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬುದೇ ನಮ್ಮ ಸರ್ಕಾರದ ದ್ಯೇಯವಾಗಿದೆ.

2.ಸಮಾಜದಲ್ಲಿ ಶಿಕ್ಷಣದ ಸವಲತ್ತುಗಳನ್ನು ವಿಸ್ತರಿಸಲು:-

ನಮ್ಮ ವಿದ್ಯಾರ್ಥಿಗಳ ಸಾಮಾನ್ಯ ಪ್ರಜ್ಞೆ ಹಾಗೂ ಜ್ಞಾನ ಹೆಚ್ಚಾಗಿ ಎಲ್ಲಾ ಕಡೆಯ ವಿದ್ಯಾರ್ಥಿಗಳಲ್ಲೂ ಒಂದೇ ರೀತಿಯಾಗಿ ಹೊಂದಿಕೆಯಗಬೇಕು. ಇದರಿಂದಾಗಿ ನಮ್ಮ ರಾಜ್ಯದೆಲ್ಲೆಡೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾನ ವಿದ್ಯಾಭ್ಯಾಸ ಹೊಂದಿಕೆಯಗಬೇಕು ಆದುದರಿಂದ ಉತ್ತಮ ಗುಣಮಟ್ಟದ ಶಿಕ್ಷಕರನ್ನು ಎಲ್ಲಾ ಕಡೆಯಲ್ಲೂ ನೇಮಕಾತಿ ಮಾಡಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಹಾಗೂ ವಿದ್ಯಾರ್ಥಿಗಳಿಗೆ ದೊರಕಬೇಕಾದ ಶಿಕ್ಷಣದ ಮೌಲ್ಯವನ್ನು ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೂ ತಲುಪಬೇಕು ಹೀಗಾಗಿ ಈ ಕೆಲಸವು ಉತ್ತಮ ಗುಣಮಟ್ಟದ ಶಿಕ್ಷರನ್ನು ನೇಮಕಾತಿ ಮಾಡಿಕೊಳ್ಳುವ ಕೆಲಸದಿಂದ ಮಾತ್ರ ಸಾಧ್ಯ.

3.ಶಿಕ್ಷಕರ ಕೊರತೆಯನ್ನು ನಿವಾರಿಸಲು:-

ರಾಜ್ಯದ ಅನೇಕ ಕಡೆಗಳಲ್ಲಿ ತುಂಬಾ ಶಾಲೆಯ ವಿದ್ಯಾರ್ಥಿಗಳು ಎದುರಿಸುತ್ತಿವ ಪ್ರಮುಖ ಸಮಸ್ಯೆ ಎಂದರೆ ಸೂಕ್ತವಾದ ವಿಷಯಕ್ಕೆ ಸೂಕ್ತವಾದ ಶಿಕ್ಷಕರ ಕೊರತೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿಷಯದ ಮೇಲೆ ಇರಬೇಕಾದ ಅಗತ್ಯವಾದ ಜ್ಞಾನದ ಕೊರತೆ ಉಂಟಾಗುತ್ತದೆ. ಇದರಿ ದಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಷವಾರು ಪರಿಣಿತಿಯನ್ನು ಕಳೆದುಕೊಂಡು ಕಷ್ಟಪಡುತ್ತಾರೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಎಲ್ಲಾ ವಿಷಯಕ್ಕೂ ಪ್ರತಿಭಾನ್ವಿತ ಶಿಕ್ಷಕರು ಒದಗಬೇಕು ಎಂಬುದೇ ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಯಶಸನ್ನು ಸಾಧಿಸಲು ಅವರಿಗೆ ತಳಹಂತದಿಂದಲೇ ಸೂಕ್ತವಾದ ಹಾಗೂ ವ್ಯವಸ್ಥಿತವಾದ ಶಿಕ್ಷಣವನ್ನು ಒದಗಿಸಬೇಕು.

4.ಆಡಳಿತ ಸುಧಾರಣೆ:-

ಸರ್ಕಾರದಲ್ಲಿರುವ ಶಾಲೆಗಳಲ್ಲಿ ಇರ್ವ ಅನೇಕ ನಿಯಮನುಸಾರ ಶಿಕ್ಷಕರ ನೇಮಕಾತಿ ನಿರ್ದಿಷ್ಟ ಸಂಖ್ಯೆಯಲ್ಲಿ ಇರಬೇಕು. ಇದರಿಂದಾಗಿ ರಾಜ್ಯದಲ್ಲಿರುವ ಮಕ್ಕಳಿಗನುಸಾರವಾಗಿ ಶಿಕ್ಷಕರ ಸಂಖ್ಯೆ ಅಗತ್ಯ ಇಲ್ಲದಿದ್ದರೆ ಶಿಕ್ಷಕರ ಕೊರತೆ ಉಂಟಾಗಿ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಇದರಿಂದಾಗಿ ಸರ್ಕಾರದಲ್ಲಿ ಉಲ್ಲೇಖಿಸಿರುವ ನಿಯಮನುಸಾರವಾಗಿ ಪ್ರತಿಯೊಬ್ಬ ಶಿಕ್ಷಕರನ್ನು ನೇಮಕಗೋಳಿಸಿಕೊಂಡು ಮಕ್ಕಳ ಭವಿಷ್ಯಕ್ಕೆ ಬೆಳಕಾಗಬೇಕು ಎಂಬುದೇ ಇದರ ಪ್ರಾಥಮಿಕ ಉದ್ದೇಶವಾಗಿದೆ.

5.ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು:-

ನಮ್ಮ ದೇಶ ಪ್ರಗತಿಶೀಲಾ ರಾಷ್ಟ್ರವಾಗಿದೆ. ಭಾರತ ಅಭಿವೃದ್ಧಿಯಗಬೇಕಾದರೆ ಅನೇಕ ಪ್ರತಿಭೆಗಳ ಅಗತ್ಯ ಮಹತ್ವದ್ದಾಗಿದೆ. ಹೀಗಾಗಿ ಈ ಮುಂದಿನ ಪ್ರತಿಭೆಗಳು ತುಂಬಾ ಸುಂದರವಾಗಿ ಹಾಗೂ ಕೌಶಲ್ಯ ಪೂರ್ವಕವಾಗಿ ರೂಪುಗೊಳ್ಳಬೇಕಾದರೆ ಪ್ರಸ್ತುತ ಮಕ್ಕಳಿಗೆ ಮಹತ್ತರವಾದ ಶಿಕ್ಷಣದ ಅವಶ್ಯಕತೆಯಿದೆ. ಹೀಗಾಗಿ ಶಿಕ್ಷಕರ ನೇಮಕಾತಿ ಬಹಳ ಮಹತ್ತರವಾದ ಪಾತ್ರವಹಿಸುತ್ತದೆ. ಹೀಗಾಗಿ ಶಿಕ್ಷಕರ ನೇಮಕಾತಿಯನ್ನು ಹಾಗೂ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ಪ್ರತಿಭಾನ್ವಿತರಾಗಿರಬೇಕು ಇದರಿಂದಲೇ ನಮ್ಮ ರಾಷ್ಟ್ರದೇಲ್ಲೆಡೆ ವಿದ್ಯಾಭ್ಯಾಸದ ಮಟ್ಟ ಬಹಳ ಉತ್ತುಂಗ್ದ ಮಟ್ಟಕ್ಕೆ ಏರಲಾಗುತ್ತದೆ.

6.ನ್ಯಾಯಸಂಗತ ಅವಕಾಶ:-

ನಮ್ಮ ಸಮಾಜದ ಪ್ರಮುಖ ಪಿಡುಗಾಗಿರುವ ಭ್ರಷ್ಟಾಚಾರ ಇದನ್ನು ಹೋಗಲಾಡಿಸಬೇಕು. ಭ್ರಷ್ಟಚಾರ ಹೆಚ್ಚದರೆ ಅದರಿಂದ ವಿದ್ಯಾರ್ಥಿಗಳಿಗೂ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಲೂ ಬಹಳ ತೊಂದರೆಯಾಲಿದೆ. ಹೀಗಾಗಿ ಅರ್ಹತೆ ಅಭ್ಯರ್ಥಿಗಳಿಗೆ ಮಾತ್ರ ನ್ಯಾಯಸಂಗತವಾಗಿ ಉದ್ಯೋಗ ದೊರೆಯಬೇಕು ಎಂಬುದೇ ನಮ್ಮ ಅಭಿಮಾತವಾಗಿದೆ.

ಈ ಮೇಲಿನ ಎಲ್ಲಾ ಉದ್ದೇಶಗಳು ಕೇವಲ ಪ್ರಾಥಮಿಕ ಹಂತದ ಶಿಕ್ಷಕರನ್ನು ನೇಮಕಮಾಡಿಕೊಳ್ಳುವುದರಲ್ಲಿ ಮಾತ್ರವಲ್ಲದೆ ಎಲ್ಲಾ ಹಂತದ ಶಿಕ್ಷಣದ ಶಿಕ್ಷಕರ ನೇಮಕಾತಿಯಲ್ಲಿ ಇದೆ ಉದ್ದೇಶಗಳು ಪ್ರತಿಬಿಂಬಿಸುತ್ತವೆ.

ಶಿಕ್ಷಕರ ನೇಮಕಾತೀಯಾಗಲು ಬೇಕಾದ ಅರ್ಹತೆಗಳು:-

ನಮ್ಮ ರಾಜ್ಯ ಸರ್ಕಾರವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನೇಮಕಾಮಾಡಿಕೊಳ್ಳಲು ಹಲವಾರು ಮಾನದಂಡಗಳನ್ನು ಬಳಸುತ್ತದೆ. ಅಭ್ಯರ್ಥಿಯ ಕೌಶಲ್ಯ, ಅಂಕ, ಹಾಗೂ ಪ್ರಾವಿಣ್ಯತೆ ಮುಂತಾದ ವಿಚಾರಗಳನ್ನು ಗಮನಿಸಿ ಸರ್ಕಾರವು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಈ ಕೆಳಕಂಡ ನೇಮಕಾತಿಯ ಅರ್ಹತೆಗಳು ರಾಜ್ಯನುಸಾರ ಬದಲಾಗಬಹುದು:-

1.ಶೈಕ್ಷಣಿಕ ಅರ್ಹತೆ:-

*ಪ್ರಾಥಮಿಕ ಶಾಲಾ ಶಿಕ್ಷಕರು(ಕ್ಲಾಸ್ 1-7):-

ಅಭ್ಯರ್ಥಿಯೂ ತಾನು ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ತೆಗೆದುಕೊಳ್ಳಬೇಕಾದರೆ ಅಗತ್ಯವಾದ ವಿದ್ಯಾರ್ಹತೆಯನ್ನು ಪೂರೈಸಬೇಕು. ಅಭ್ಯರ್ಥಿಯೂ ತಾನು ಕೆಲಸ ಪಡೆದುಕೊಳ್ಳಬೇಕಾದರೆ ತಾನು ದ್ವಿತೀಯ PUC ಉತ್ತೀರ್ಣನಾಗಿ D. EI. ED(diploma in elementary education) ಅಥವಾ B. EI. ED(Bachelor of elementory education) ಅನ್ನು ಮುಗಿಸಿರಬೇಕು.

ಸರ್ಕಾರವು ನಡೆಸುವ TEC( teachers ability test) ಅಥವಾ CTEC(central teacher ability test) ಪರೀಕ್ಷೆಗಳನ್ನು ಉತ್ತಿರ್ಣನಾಗಿರಬೇಕು.

*ಮಾಧ್ಯಮಿಕ ಶಾಲಾ ಶಿಕ್ಷಕರು:-

ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಶಿಕ್ಷಕರು ಆ ಹಂತಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡುವ ಅಗತ್ಯವಿದೆ. ಹೀಗಾಗಿ ಮಾಧ್ಯಮಿಕ ಶಾಲಾ ಶಿಕ್ಷಕರು ಯಾವುದೇ ಸ್ನಾನಕೋತ್ತರ ಪದವಿ ಅಥವಾ B. Ed(bachelor of education) ಪದವಿ ಅಥವಾ ಸಮಾನ ಪದವಿಯನ್ನು ಹೊಂದಿರಬೇಕು.

*ಉನ್ನತ ಪ್ರಾಥಮಿಕ ಶಾಲಾ ಶಿಕ್ಷಕರು:-

ಈ ಹಂತದಲ್ಲಿ ಬೋಧನೆ ಮಾಡುವ ಅಧ್ಯಾಪಕರು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಬೋಧನೆ ನೀಡುವ ವಿಷಯಗಳಲ್ಲೂ ಕೂಡ ಪರಿನಿಂತಿಯನ್ನು ಹೊಂದಿರಬೇಕು. ಹಾಗೂ ಅಭ್ಯರ್ಥಿಯೂ ಯಾವುದೇ ಸ್ನಾನಕೋತ್ತರ ಪದವಿಯನ್ನು (masters) ಪಡೆದುಕೊಂಡಿರಬೇಕು. ಹಾಗೂ B. Ed(bachelor of education )ಅನ್ನು ಪಡೆದುಕೊಂಡಿರಬೇಕು.

*ವಯೋಮಿತಿಗಳು:-

ಅಭ್ಯರ್ಥಿಯೂ ತಾನು ಶಾಲೆಯ ಮಕ್ಕಳಿಗೆ ಉಪನ್ಯಾಸ ನೀಡಲು ನಿರ್ದಿಷ್ಟ ವಯಸ್ಸಿನ ಅಗತ್ಯವಿದೆ.ಹೀಗಾಗಿ ಉದ್ಯೋಗಕ್ಕೆ ನೇಮಕಾವಾಗುವ ಅಭ್ಯರ್ಥಿಯ ವಯಸ್ಸು ಸಾಮಾನ್ಯವಾಗಿ 21 ರಿಂದ 40 ವರ್ಷಗಳ ನಡುವೆ ಇರುತ್ತದೆ. ಆದರೆ ಪರಿಶಿಷ್ಟ ವರ್ಗಗಳು ಹಾಗೂ ಪಂಗಡಗಳಿಗೆ (SC/ST) ವಯಸ್ಸಿನಲ್ಲಿ ಕೆಲವು ಸಡಿಲಿಕೆಯನ್ನು ನೀಡಬಹುದು.

*ಅನುಭವ:-

ಅಭ್ಯರ್ಥಿಯೂ ಈ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ ಹೆಚ್ಚಿನ ಮೀಸಲಾತಿಯನ್ನು ಪಡೆಯಬಹುದು ಹಾಗೂ ಮಾಧ್ಯಮಿಕ ಶಾಲೆಗಳಗೆ ಕೇಳಾಕಡೆಗಳಲ್ಲಿ ಅನುಭವವನ್ನು ಕೇಳಲಾಗುತ್ತದೆ ಹಾಗೂ ಪ್ರಾಥಮಿಕ ಹಂತಕ್ಕೆ ಅನುಭವದ ಅಗತ್ಯವಿರುವುದಿಲ್ಲ.

*ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ:-

ಅಭ್ಯರ್ಥಿಯೂ ತಾನು ಶಿಕ್ಷಕರ ಹುದ್ದೆಗೆ ಅರ್ಹತೆ ಎನಿಸಿಕೊಳ್ಳಲು ಆಟ ತಾನು ತನ್ನ ಶಿಕ್ಷಕರ ಹುದ್ದೆ ಗೆ ಅಗತ್ಯವಾದ ಕೋರ್ಸ್ ಅನ್ನು ಕಂಪ್ಲೀಟ್ ಮಾಡಿರಬೇಕು. ಹಾಗೂ ಅಭ್ಯರ್ಥಿಯೂ TEC(teacher ability test) ಹಾಗೂ CTEC(central teacher ability test)ಅನ್ನು ಪೂರ್ಣಗೋಳಿಸಿರಬೇಕು ಹಾಗೂ ಈ ಹುದ್ದೆಗೆ ಆಯ್ಕೆಯಾಗಲು ಇವುಗಳ ಫಲಿತಾಂಶ ಅನಿವಾರ್ಯವಾಗಿದೆ.

ಶಿಕ್ಷಕರ ಹುದ್ದೆಗೆ ನೇಮಕಮಾಡಿಕೊಳ್ಳಲು ಲಿಖಿತ ರೂಪದ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಇದನ್ನು ಅಭ್ಯರ್ಥಿಯೂ ಕೈಗೊಂಡು ಉತ್ತಮ ಫಲಿತಾಂಶ ಹೋಂದಬೇಕು. ಇದರಿಂದಲೇ ಅಭ್ಯರ್ಥಿಯ ಲಿಖಿಕ ಸಾಮರ್ಥ್ಯವನ್ನು ಗಮನಿಸಿ ಉದ್ಯೋಗಕ್ಕೆ ಅರ್ಹನೇ ಎಂದು ತೀರ್ಮಾನ ಮಾಡಲಾಗುತ್ತದೆ.

ನಂತರ ಅಭ್ಯರ್ಥಿಯ ಕೆಲಸವು ಮಕ್ಕಳಿಗೆ ಬೋಧನೆ ಮಾಡುವುದಾಗಿರುವುದರಿಂದ ಅಭ್ಯರ್ಥಿಯ ಕಮ್ಯುನಿಕೇಷನ್ ಸ್ಕಿಲ್ ಅನ್ನು ಪರಿಶೀಲಿಸಲು ಅಭ್ಯರ್ಥಿಯನ್ನು ಇಂಟರ್ವ್ಯೂ ಮಾಡಲಾಗುತ್ತದೆ. ಹಾಗೂ ತರಗತಿಯಲ್ಲಿ ಡೆಮೋ ನೀಡಲಾಗುತ್ತದೆ. ಇದಾದ ನಂತರ ಈ ಮೇಲಿನ ಎಲ್ಲಾ ಪರೀಕ್ಷೆಗಳನ್ನು ಮುಗಿಸಿದ ಅಂತ ಅಭ್ಯರ್ಥಿಯೂ ಈ ಕೆಲಸಕ್ಕೆ ಅರ್ಹತೆ ಎಂದು ತೀರ್ಮಾನಿಸಲಾಗುತ್ತದೆ.

*ಭಾಷಾ ಪ್ರಾವಿಣ್ಯತೆ:-

ಅಭ್ಯರ್ಥಿಯೂ ತಾನು ಇರುವ ಸ್ಥಳೀಯ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಆಯಾ ಭಾಷೆಯನ್ನು ಕಲಿತು ಪ್ರಾವಿಣ್ಯತೆಯನ್ನು ಪಡೆದುಕೊಂಡಿರಬೇಕು. ಏಕೆಂದರೆ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲೇ ಬೋಧನೆ ಮಾಡಬೇಕಾಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ತನ್ನ ಸ್ಥಳೀಯ ಭಾಷೆಯಲ್ಲಿ ಪರಿಣಿತಿಯನ್ನು ಪಡೆದುಕೊಂಡಿರಬೇಕು.

ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹಾಗೂ ಮಾನದಂಡಗಳನ್ನು ಅಭ್ಯರ್ಥಿಯೂ ಪೂರ್ಣಗೋಳಿಸಿದ್ದಲ್ಲಿ ಆತನು ಈ ಕೆಲಸಕ್ಕೆ ಅರ್ಹನ್ನಾಗಿರುತ್ತನ್ನೇ ಎಂಬುದನ್ನು ಸರ್ಕಾರ ನಿರ್ಧಾರಿಸಬೇಕು. ಹಾಗಾಗಿ ಈ ಮೇಲಿನ ಎಲ್ಲಾ ಮಾನದಂಡಗಳನ್ನು ಅಭ್ಯರ್ಥಿಯು ಪೂರ್ಣಗೋಳಿಸಿದ್ದಾರೆ ಕೂಡಲೇ ಆಸಕ್ತಿ ಇರುವವರು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಶಾಲಾ ಶಿಕ್ಷಕರಿಗೆ ಒದಗುವ ಸಂಬಳಗಳು:-

ಇದನ್ನು ಸರ್ಕಾರವು ನೀಡುವುದರಿಂದ ಸಂಬಳದ ಮೊತ್ತ ಆಯಾ ರಾಜ್ಯಗಳಿಗೆ ವ್ಯತ್ಯಾಸವಾಗಬಹುದು. ಮತ್ತು ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಪದವಿ ಪೂರ್ವ ಶಿಕ್ಷಕರಿಗೆ ನೀಡುವ ಸಂಬಳಗಳಲ್ಲಿ ವ್ಯತ್ಯಾಸವಾಗಬಹುದು. ಇದನ್ನು ಗಮನಿಸಿ 2024-25 ರ ಸಾಲಿನಲ್ಲಿ ಅಭ್ಯರ್ಥಿಗಳಿಗೆ ನೀಡುವ ಸಂಬಳ ಈ ಕೆಳಕಂಡಂತಿವೆ:

1.ಪ್ರಾಥಮಿಕ ಶಾಲಾ ಶಿಕ್ಷಕರು(1 ರಿಂದ 5 ನೇ ತರಗತಿ )

ಈ ಹಂತದಲ್ಲಿ ಶಿಕ್ಷಕರಿಗೆ ಹೆಚ್ಚಿನ ಭೋದನೆ ಮಾಡುವ ಅಗತ್ಯವಿರುವುದಿಲ್ಲ ಇದು ಚಿಕ್ಕ ಮಕ್ಕಳಿಗೆ ಉಪನ್ಯಾಸ ಮಾಡುವುದರಿಂದ ಅಭ್ಯರ್ಥಿಯ ಹೊರೆ ಕಡಿಮೆ ಇರುತ್ತದೆ ಇದರಿಂದಾಗಿ ಅಭ್ಯರ್ಥಿಗೆ ₹25000 ದಿಂದ ₹35000 ವರೆಗೆ ಸಂಬಳ ಇರುತ್ತದೆ. ಈ ಸಂಬಳವು ರಾಜ್ಯದ ಪ್ರಕಾರ ಬದಲಾಗಬಹುದು. ಇದಲ್ಲದೆHRA(house rent allowance) ಹಾಗೂ DA(dearness allowance) ಇತರ ಭತ್ಯೆಗಳು ಕೂಡ ಸರ್ಕಾರಿ ನೌಕರರಿಗೆ ಸೇರ್ಪಡೆಯಗಿರುತ್ತವೆ.

2.ಮಾಧ್ಯಮಿಕ ಶಾಲಾ ಶಿಕ್ಷಕರು(6 ರಿಂದ 8 ನೇ ತರಗತಿ )

ಈ ಹಂತದಲ್ಲಿ ಭೋದನೆ ಮಾಡುವ ಶಿಕ್ಷಕರಿಗೆ ಸ್ವಲ್ಪ ಹೆಚ್ಚಿನ ಜವಾಬ್ದಾರಿ ಹಾಗೂ ಮಕ್ಕಳನ್ನು ಅಭಿವೃದ್ಧಿ ಗೊಳಿಸುವ ಜವಾಬ್ದಾರಿ ಹೆಚ್ಚಾಗಿರುವುದರಿಂದ ಶಿಕ್ಷಕರಿಗೆ ಸಂಬಳವು ₹30000 ದಿಂದ ₹45000 ವರೆಗೆ ಸಂಬಳವು ಇರುತ್ತದೆ. ಹಾಗೂ ಶಿಕ್ಷಕರಿಗೆ ನೆಡುವ ಸಂಬಳವು ಅವರು ಪಡೆದುಕೊಂಸಿರುವ ಅನುಭವ ಹಾಗೂ ಅವರು ಗಳಿಸಿಕೊಂಡಿರುವ ಅರ್ಹತೆ ಹಾಗೂ ಅವರು ಭೋಡಿಸುವ ಕೆಲಸದ ಸ್ಥಳಗಳ ಮೇಲೆ ಅವರ ಸಂಬಳವು ಬದಲಾಗಬಹುದು. ಮತ್ತು 7th pay commission ಅಡಿಯಲ್ಲಿ ಬರುವ ಶಿಕ್ಷಕರಿಗೆ ಹೆಚ್ಚಿನ ಸಂಬಳ ನೀಡಲಾಗುವುದು.

3.ಉನ್ನತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು(9 ರಿಂದ 12 ನೇ ತರಗತಿಯವರೆಗೆ)

ಈ ಹಂತದಲ್ಲಿ ಮಕ್ಕಳ ಭವಿಷ್ಯ ರೂಪುಗೋಳ್ಳುವುದರಿಂದ ಈ ಹಂತದಲ್ಲಿ ಶಿಕ್ಷಕರ ಜವಾಬ್ದಾರಿ ತುಂಬಾ ಹೆಚ್ಚಾಗಿರುತ್ತದೆ ಹಾಗೂ ಮಕ್ಕಳನ್ನು ಒಂದೊಳ್ಳೆಯ ದಾರಿಯಲ್ಲಿ ಒಳ್ಳೆಯ ಆದರ್ಶಗಳನ್ನು ಹೊಂದಿಸಿಕೊಡುವು ಶಿಕ್ಷಕರ ಆದ್ಯ ಕರ್ತವ್ಯ. ಹೀಗಾಗಿ ಈ ಹಂತದ ಶಿಕ್ಷಕರಿಗೆ ₹40000 ದಿಂದ ₹55000 ವರೆಗೆ ಸಂಬಳ ದೊರೆಯುತ್ತದೆ. ಹಾಗೂ ಭಾಷವರು ಶಿಕ್ಷಕರಿಗೆ(ಗಣಿತ ಮತ್ತು ವಿಜ್ಞಾನ)ಹೆಚ್ಚಿನ ಸಂಬಳ ನೀಡಲಾಗುತ್ತದೆ.ಮತ್ತು DA, HRA ಹಾಗೂ ಮುಂತಾದ ಸೌಲಭ್ಯಗಳು ಕೂಡ ಸೇರಿರುತ್ತವೆ.

4.ಪ್ರಾದ್ಯಪಕರು(pre university college teachers)

ಈ ಹಂತದ ಶಿಕ್ಷಕರಿಗೆ ಹೆಚ್ಚಿನ ಜ್ಞಾನ ಹಾಗೂ ಅನುಭವ ಅಗತ್ಯವಾಗಿದೆ. ಹೀಗಾಗಿ ಈ ಹಂತದಲ್ಲಿ ಉಪನ್ಯಾಸ ನಡೆಸುವ ಶಿಕ್ಷಕರಿಗೆ ₹50000 ದಿಂದ ₹70000 ವರೆಗೆ ಸಂಬಳ ನೀಡಲಾಗುವುದು. ಹಾಗೂ ಸ್ನಾನಕೊತ್ತರ ಪದವೀಗಳಿಗೆ ಹೆಚ್ಚಿನ ಭತ್ಯೆ ನೀಡಲಾಗುವುದು.

ಅಧಿಕ ವೇತನದ ಪ್ರಗತಿ

ಶಿಕ್ಷಕರಿಗೆ ವೇತನ ಹೆಚ್ಚಿಸುವುದು ಅವರ ಅನುಭವ ಹಾಗೂ ಅವರು ನೀಡಿರುವ ಸೇವೇಯ ಆಧಾರದ ಮೇಲೆ ಶಿಕ್ಷಕರಿಗೆ ಸಂಬಳವನ್ನು ಹೆಚ್ಚಿಸಲಾಗುತ್ತದೆ. ಹಾಗೂ ವರ್ಷ ವರ್ಷ ಸಂಬಳವು ಹೆಚ್ಚಾಗುತ್ತಾ ಇರುತ್ತದೆ.

ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು :-

ಸರ್ಕಾರಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ತನ್ನ ನೇಮಕಾತಿಯ ವಿವಿಧ ಹಂತಗಳಲ್ಲಿ ಅನೇಕ ದಾಖಲೆಯ ಅಗತ್ಯವಿರುತ್ತದೆ ಹೀಗಾಗಿ ತನ್ನ ನೇಮಕಾತಿಗೆ ಸಹಾಯಕವಾಗಬೇಕಾದರೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕು. ಈ ದಾಖಲೆಗಳು ಅಭ್ಯರ್ಥಿಯ ಅಂಕ, ಆತನ ವಯಸ್ಸು ಮತ್ತು ವರ್ಗಗಳಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತವೆ. ಸಾಮಾನ್ಯಾವಾಗಿ ಅಭ್ಯರ್ಥಿಯೂ ಒದಗಿಸಬೇಕಾದ ದಾಖಲೆಗಳು ಈ ಕೆಳಕಂಡಂತಿವೆ:-

1.ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರಗಳು:-

ಅಭ್ಯರ್ಥಿಯು ತನ್ನ ಎಲ್ಲಾ ತರಗತಿಯ ಅಂಕ ಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಒದಗಿಸಬೇಕು. ಅವುಗಳೆಂದರೆ:-

*ಅಭ್ಯರ್ಥಿಯು ತನ್ನ 10 ನೇ ತರಗತಿಯ ಪ್ರಮಾಣ ಪತ್ರವನ್ನು ಒದಗಿಸಬೇಕು ಅಂಕ ಪಟ್ಟಿ ಮತ್ತು ಅದರ ಅಂದು ಪ್ರತಿ)

*ತಾನು ವ್ಯಾಸಂಗ ಮಾಡಿರುವ ದ್ವಿತೀಯ PUC ಯ ಅಂಕಪಟ್ಟಿಯನ್ನು ಹಾಜರೂಪಡಿಸಬೇಕು ಇದರ ಒಂದು ಪ್ರತಿಯನ್ನು ಹಾಗೂ ಒರಿಜಿನಲ್ ಅನ್ನು ನೀಡಬೇಕು.

*ಅಭ್ಯರ್ಥಿಯು  ತಾನು ಮುಗಿಸಿರುವ ಯಾವುದೇ ಸ್ನಾನಕೋತ್ತರ ಪದವಿಯನ್ನು(BA,Bsc, B.com, B. Ed, M. Ed)  ಅಂಕಪಟ್ಟಿಗಳನ್ನು ಹಾಗೂ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರವನ್ನು ಒದಗಿಸಬೇಕು.

*ಅಭ್ಯರ್ಥಿಯು ಡಿಪ್ಲೋಮ ವನ್ನು ಮಾಡಿದ್ದಾರೆ (D.EI.Ed/D. Ed) ಗಳ ಪ್ರಮಾಣ ಪತ್ರವನ್ನು ಹಾಗೂ ಅಂಕಪಟ್ಟಿಯನ್ನು ಹಾಜರೂಪಡಿಸಬೇಕು. ಹಾಗೂ ಶಿಕ್ಷಕರ ಸಂಬಂಧಿತ ತರಬೇತಿ ಪಾಡಿದಿರುವ ದಾಖಲೆಗಳನ್ನು ಒದಗಿಸಬೇಕು.

2.ಪರೀಕ್ಷೆ ಅರ್ಹತಾ ಪ್ರಮಾಣ ಪತ್ರಗಳು:-

ಅಭ್ಯರ್ಥಿಯೂ ತಾನು ಟೀಚರ್ಸ್ ಹುದ್ದೆಗೆ ಓದಿ TEC/CTEC ಪರೀಕ್ಷೆಗಳನ್ನು ತೆಗೆದುಕೊಂಡಿರುವ ಅಂಕ ಪಟ್ಟಿಗಳನ್ನು ಒದಗಿಸಬೇಕು ಮತ್ತು ಪ್ರಮಾಪತ್ರಗಳನ್ನು ನೀಡಬೇಕು. ಹಾಗೂ ಇತರ ಶೈಕ್ಷಣಿಕ ಅರ್ಹತಾ ಪ್ರಮಾಣ ಪತ್ರಗಳನ್ನು ಒದಗಿಸಬೇಕು.

3.ವಯಸ್ಸಿನ ಪುರಾವೆಗಳು:-

ಅಭ್ಯರ್ಥಿಯು ಶಿಕ್ಷಕರ ಹುದ್ದೆ ಪಡೆದುಕೊಳ್ಳಬೇಕಾರೆ ನಿರ್ದಿಷ್ಟ ವಯಸ್ಸಿನ ಪರಿಮಿತಿಯನ್ನು ಹೊಂದಿರಬೇಕು ಹೀಗಾಗಿ ಅಭ್ಯರ್ಥಿಯು ತನ್ನ ವಯಸ್ಸಿನ ಪುರಾವೆ ದಾಖಲಿಸಲು ತನ್ನ 10ನೇ ತರಗತಿಯ ಅಂಕ ಪಟ್ಟಿ ಅಥವಾ ಹಾಸ್ಪಿಟಲ್ ನಿಂದ ನೀಡಿದ ಜನನ ಪ್ರಮಾಣ ಪತ್ರವನ್ನು ದಾಖಲಿಸಬೇಕು.

4.ಮೀಸಲು ವರ್ಗಕ್ಕೆ ಸಂಬಂದಿಸಿದ ಪ್ರಮಾಣ ಪತ್ರ(ಯಾವುದಾದರೂ ಮೀಸಲು ವರ್ಗಕ್ಕೆ ಸೇರಿದವರಾಗಿದ್ದರೆ)

ಸರ್ಕಾರದಲ್ಲಿ ಅನೇಕ ವರ್ಗಗಳಿಗೆ ಮೆಸಲಾತಿಯನ್ನು ಇಡಲಾಗಿದೆ. ಅಭ್ಯರ್ಥಿಯೂ ಯಾವುದೇ ಮೀಸಲು ವರ್ಗಕ್ಕೆ ಸೇರಿದವನಾಗಿದ್ದಾರೆ ಕೂಡಲೇ ತನ್ನ ಮೀಸಲು ವರ್ಗಕ್ಕೆ ಸಂಬಂದಿಸಿದ ದಾಖಲೆಗಳನ್ನು ನೀಡತಕ್ಕದ್ದು ಇಲ್ಲವಾದಲ್ಲಿ ತನ್ನ ಆದಾಯ ಪ್ರಮಾಣ ಪತ್ರವನ್ನು ದಾಖಲಿಸಬೇಕು. ಇದರಿಂದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿ ಮೀಸಲಾತಿಯಿಂದ ಅನೂಕೂಲವಾಗಬಹುದು.

5.ಸ್ಥಳೀಯ ಪ್ರಮಾಣ ಪತ್ರ:-A

ಅಭ್ಯರ್ಥಿಯೂ ಸ್ಥಳೀಯ ನಿವಾಸಿಯಾಗಿದ್ದಾರೆ ತಾನು ವಾಸಿಸುತ್ತಿರುವ ಸ್ಥಳದ ದಾಖಲೆಗಳನ್ನು ನೀಡಬೇಕು. ಇದರಿಂದಾಗಿ ಅಭ್ಯರ್ಥಿಯೂ ಆಯ ರಾಜ್ಯದವನೇ ಎಂಬುದು ಖಚಿತವಾಗುತ್ತದೆ ಮತ್ತು ಆ ಅಭ್ಯರ್ಥಿಯ ಕೆಲಸಕ್ಕೆ ಇದು ಸಹಾಯಕವಾಗಿದೆ.

6.ವೈಯಕ್ತಿಕ ದಾಖಲೆಗಳು:-

ಭ್ಯರ್ಥಿಯು ತಾನು ತನ್ನ ವೈಯಕ್ತಿಕ ದಾಖಲೆಗಳನ್ನು ನೀಡಬೇಕಾಗಿದೆ. ಇದರಿಂದಾಗಿ ಅಭ್ಯರ್ಥಿಯ ಸಂಪೂರ್ಣ ವೈಯಕ್ತಿಕ ಮಾತಿಯ ಬಗ್ಗೆ ಪರಿಚಯ ಸಿಗುತ್ತದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಹಾಗೂ ಪಾಸ್ ಪೋರ್ಟ್ ಸೈಜಿನ ಫೋಟೋಗಳು ಗಾಹು ಅಭ್ಯರ್ಥಿಯು ತನ್ನು ವಿಕಲಚೇತನನಾಗಿದ್ದಲ್ಲಿ ಮೀಸಲಾತಿ ಸಿಗುತ್ತದೆ  ಇದರಿಂದಾಗಿ ಅಭ್ಯರ್ಥಿಯು ತನ್ನ ವೈಯಕ್ತಿಕ ವಿಷಯಗಳನ್ನು ತಿಳಿಸಬೇಕು.

7.ಅನುಭವ ಪ್ರಮಾಣ ಪತ್ರ(ಅಗತ್ಯವಿದ್ದರೆ)

ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಇದೆ ಕ್ಷೇತ್ರದಲ್ಲಿ ಅನುಭವ ಪಡೆದಿದ್ದರೆ ಆ ಮಾಹಿತಿಯನ್ನು ತಿಳಿಸಬೇಕು ಇದರಿಂದಾಗಿ ಅನುಭವದ ಆಧಾರದ ಮೇರೆಗೆ ಮೀಸಲಾತಿ ಸಿಗುತ್ತದೆ. ಹಾಗೂ ತಾನು ಕೆಲಸ ಮಾಡಿದ ಹಿಂದಿನ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರವನ್ನು ದಾಖಲಿಸಬೇಕು.

8.ನೇರ ನೇಮಕಾತಿಗೆ:-

ಅಭ್ಯರ್ಥಿಯೂ ತಾನು ಈ ಮೇಲಿನ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದರಿಂದಾಗಿ ಅರ್ಜಿ ಸಲ್ಲಿಸುವ ಕಾರ್ಯ ಮುಗಿಯುತ್ತದೆ.

ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದ್ದಾರೆ ಅರ್ಹರಾದ ಅಭ್ಯರ್ಥಿಗಳನ್ನು ಸರ್ಕಾರ ಕಾಲ್ ಮಾಡುತ್ತದೆ ಈ ಮೂಲಕ ಶಿಕ್ಷಕರ ಹುದ್ದೆಗೆ ನೇಮಕಾತಿಯಗಬಹುದು.

ಶಿಕ್ಷಕರ ಹುದ್ದೆಗೆ ನೇಮಕಾತಿಯಾದ ಅಭ್ಯರ್ಥಿಗಳಿಗೆ ಒದಗುವ ಸರ್ಕಾರದ ಸೇವೆಗಳು:

ಸರ್ಕಾರವು ಶಿಕ್ಷೆಕರಿಗೆ ವಿವಿಧ ಬಗೆಯೇ ಸೇವೆಗಳನ್ನು ನೀಡುತ್ತವೆ. ಇವು ಶಿಕ್ಷಕರು ತಮ್ಮ ಜೇವನವನ್ನು ಸುಗಮವಾದ ರೀತಿಯಲ್ಲಿ ಸಾಗಿಸಲು ಮತ್ತು ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಬಹಳ ಸಹಕಾರ ನೀಡುತ್ತದೆ. ಹಾಗೂ ಶಿಕ್ಷಕರ ಬೋಧನ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ಅವರ ಉದ್ಯೋಗದ ಸುರಕ್ಷಾಯನ್ನು ಕಾಪಾಡಿಕೊಳ್ಳಲು ಸರ್ಕಾರವು ಅನೇಕ ಭತ್ಯೆಯನ್ನು ನೀಡುತ್ತವೆ. ಶಿಕ್ಷಕರಿಗೆ ಸರ್ಕಾರದಿಂದ ಒಡಗುವ ಸೇವೆಗಳು ಈ ಕೆಳಕಂಡಂಟಿವೆ :-

1.ಸಾಂಸ್ಥಾನಿಕ ಸೇವೆಗಳು (Institutional service)

*ಶಿಕ್ಷಕರು ತಾವು ಸೇವೆಯನ್ನು ಮುಗಿಸಿದ ನಂತರ ಅಂದರೆ 60 ವರ್ಷದ ನಿವೃತ್ತಿ ಜೀವನದ ನಂತರ ಶಿಕ್ಷಕರಿಗೆ ಪಿಂಚಣಿಯನ್ನು ನೀಡಲಾಗುತ್ತದೆ. ಕೇಳಾಕಡೆ NPS(National pension scheme)ಅಡಿಯಲ್ಲಿ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುತ್ತದೆ. ಹಾಗೂ ಶಿಕ್ಷಕರು ತಮ್ಮ ಭೋದನಾ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ತರಬೇತಿಯನ್ನು ಸರ್ಕಾರದಿಂದ ನೀಡಲಾಗುತ್ತದೆ.

2.ಆರ್ಥಿಕ ಸೇವೆಗಳು:-

ನಮ್ಮ ಸರ್ಕಾರದ 7 ನೇ ಆಯೋಗದಲ್ಲಿ ನಿಗದಿಪಡಿಸಲಾದ ಶಿಕ್ಷಕರ ಸಂಬಳ(ಈಗಾಗಲೇ ಮೇಲೆಯೇ ತಿಳಿಸಿದ್ದೇವೆ)ದ ಜೊತೆಗೆ ಅವರ ಬದುಕಿಗೆ ಸಹಾಯಕವಾಗಲಿ ಎಂದು ಅವರ ಸಂಬಳಕ್ಕೆ HRA(house rent allowance) ಅನ್ನು ಮತ್ತು DA(dearness allowance) ಭತ್ಯೆಗಳನ್ನು ಸೇರ್ಪಡಿಸಲಾಗಿದೆ. ಇದರಿಂದಾಗಿ ಶಿಕ್ಷಕರ ಜೀವನ ಮತ್ತೆ ಸುಧಾರಿಸುತ್ತದೆ ಹಾಗೂ ಅವರು ತಮ್ಮ ಜೀವನವನ್ನು ಯಾವುದೇ ಅಡ್ಡಿ ಇಲಲ್ಲದೆ ಸಾಗಿಸಲು ಈ ಭತ್ಯೆ ಯೋಜನೆ ಸಹಕಾರಿಯಾಗಿದೆ.

ಸರ್ಕಾರವು ಶಿಕ್ಷಕರು ಯಾವುದೇ ಆರೋಗ್ಯದ ಹಾನಿಲ್ಲದೇ ಆರೋಗ್ಯಕರವಾಗಿ ಇರಬೇಕು ಎಂದು ಕ್ಯಾಶ್ ಲೆಸ್ ಮೆಡಿಕಲ್ ಸೌಲಭ್ಯವನ್ನು ನೀಡಲು ಭೀಮಾ ಯೋಜನೆಗಳನ್ನು ಒದಗಿಸುತ್ತವೆ.(ಉದಾಹರಣೆಗೆ:CGHS:central government health scheme).

Haagu ಶಿಕ್ಷಕರು ಮನೆ ನಿರ್ಮಾಣಕ್ಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಲಭವಾಗಿ ಲೋನ್ ಪಡೆದುಕೊಳ್ಳುವ ಮೀಸಲು ಇದೆ. ಇದರಿಂದಾಗಿ ಶಿಕ್ಷಕರು ಸುಗಮವಾದ ಜೀವನವನ್ನು ಸಾಗಿಸಬಹುದು.

3.ಆರೋಗ್ಯ ಮತ್ತು ವಲಯ ಸೇವೆಗಳು:-

ಶಿಕ್ಷಕರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕಟ್ಟಿದ ಹಣವು ಮರುಪಾವತಿಸಲಾಗುತ್ತದೆ. ಶಿಕ್ಷಕರಿಗೆ ಸರ್ಕಾರದಿಂದ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು. ಇದರಿಂದಾಗಿ ಶಿಕ್ಷಕರ ಆರೋಗ್ಯದ ಖರ್ಚನ್ನು ಸರ್ಕಾರವೇ ಪಾವತಿ ಮಾಡುತ್ತದೆ.ಸರ್ಕಾರಿ ಆಸ್ಪತ್ರೆ ಮತ್ತು ಕೇಂದ್ರಗಳಲ್ಲಿ ಶಿಕ್ಷಕರಿಗೆ ವಿಶಿಷ್ಟ ಚಿಕಿತ್ಸೆ ದೊರೆಯುತ್ತದೆ.

ಶಿಕ್ಷಕರ ತಮ್ಮ ಸ್ಥಳೀಯ ಕಡೆಗಳಲ್ಲೇ ಕೆಲಸ ಮಾಡಬೇಕು ಎಂದರೆ ಅವರ ವಯಸ್ಸು ಹಾಗೂ ಸೇವೆ ಮತ್ತು ಮುಂತಾದ ವಿಷಯಗಳ ಮೇರೆಗೆ ಶಿಕ್ಷಕರನ್ನು ಅವರಿಚ್ಚೆಯ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುತ್ತದೆ.

4.ಶಿಕ್ಷಣಕ್ಕೆ ಸಂಬಂದಿಸಿದ ಕಲ್ಯಾಣ ಯೋಜನೆಗಳು:-

ಶಿಕ್ಷಕರ ಹುದ್ದೆಗೆ ನೇಮಕಾತಿಯಾದ ಅಭ್ಯರ್ತಿಯು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಯಾಗಲಿ ಎಂಬ ಯೋಜನೆಯ ಮೇರೆಗೆ ಅರ್ಕಾರವು ಅಭ್ಯರ್ಥಿಗಳಿಗೆ ಶಿಕ್ಷಕರ ತರಬೇತಿ ಕಾರ್ಯಕ್ರಮಗಳು, ಕಾರ್ಯಗಾರ ಹಾಗೂ ಮುಂತಾದ  ಬೆಳವಣಿಗೆಯ ಚಟುವಟಿಕೆಗಳನ್ನು ನಡೆಸುತ್ತದೆ. ಹಾಗೂ ಶಿಕ್ಷಕರ ಸೇವೆ ಮತ್ತು ಅವರ ಕೌಶಲ್ಯದ ಮೇರೆಗೆ ಅವರನ್ನು ಉನ್ನತ ಹುದ್ದೆಗೆ ಪ್ರಮೋಷನ್ ಮಾಡಲಾಗುತ್ತದೆ.

5.ವಸತಿ ಮತ್ತು ಮನೆಯ ಸೌಲಭ್ಯಗಳು:-

ಸರ್ಕಾರವು ಶಿಕ್ಷಕರಿಗೆ ಮನೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡಿಕೊಡುತ್ತವೆ. ಈ ಸೌಲಭ್ಯಗಳು ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಪ್ರದೇಶಗಳಲ್ಲಿ. ಒಂದು ವೇಳೆ ಅಭ್ಯರ್ಥಿಯೂ ತಾನೇ ವಸತಿ ಸೌಲಭ್ಯವನ್ನು ಪಡೆಯದಿದ್ದರೆ HRA ಭತ್ಯೆ ಯ ಸಹಾಯದಿಂದ ಅಭ್ಯರ್ಥಿ ಮನೆಯ ಬಾಡಿಗೆಯನ್ನು ಸರ್ಕಾರವೇ ಪಾವತಿ ಮಾಡುತ್ತದೆ.

6.ಅಂಗವಿಕಲ ಅಥವಾ ಅನುದಾನ ಸೌಲಭ್ಯಗಳು:-

ಅಂಗವಿಕಲರಾದ ಶಿಕ್ಷಕರಿಗೆ ಅವರಿಗೆ ವಿಶೇಷವಾದ ರೀತಿಯ ಸೌಲಭ್ಯಗಳು ಹಾಗೂ ಅವರಿಗೆ ಸೂಕ್ತವಾಗುವ ಸ್ಥಳಕ್ಕೆ ವರ್ಗಾವಣೆಯ ಮೀಸಲಾತಿ ಇರುತ್ತದೆ. ಇದರಿಂದಾಗಿ ಅಂಗವಿಕಲರಾದ ಶಿಕ್ಷಕರು ದೂರದಿಂದ ಕೆಲಸಕ್ಕೆ ಹಗುವ ಅವಶ್ಯಕತೆ ಇರುವುದಿಲ್ಲ ತಮ್ಮ ಸ್ಥಳೀಯ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಬಹುದಿತ್ತು.

ಈ ಮೇಲಿನ ಎಲ್ಲಾ ಸೇವೆಗಳನ್ನು ಸರ್ಕಾರವು ಶಿಕ್ಷಕರಿಗೆ ಒದಗಿಸುತ್ತಿದ್ದೂ ಅವರಿಗೆ ಅವರ ಉದ್ಯೋಗದ ಮತ್ತು ತಮ್ಮ ಆರೋಗ್ಯದ ಭದ್ರತೆಯನ್ನು ಕಾಯ್ದೆರಿಸಿಕೊಳ್ಳಲು ಬಹಳ ಸೂಕ್ತವಾಗಿದೆ.

ಶಿಕ್ಷಕರಾಗಿ ಅಳವಡಿಸಿಕೊಳ್ಳಬೇಕಾದ ತತ್ವಗಳು:-

ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುಲು ಹೋಗುವುದರಿಂದ ಶಿಕ್ಷಕರ ನಡವಳಿಕೆಯ ಮೇಲೆಯೇ ಮಕ್ಕಳ ಭವಿಷ್ಯ ರೂಪಿರವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕನೂ ಕೂಡ ಆದರ್ಶಯುತ, ಪ್ರಾಣಿಕ ಹಾಗೂ ಮೌಲ್ಯಯುತ ವಿಚಾರಧಾರೆಗಳನ್ನು ಹೊಂದಿರಬೇಕು. ಇದರಿಂದಾಗಿಯೇ ಮಕ್ಕಳಿಗೆ ತಾನು ಒಂದು ಉತ್ತಮವಾದ ಬದುಕನ್ನು ರೋಪ್ಪಿಸಲು ಸಾಧ್ಯ ಹೀಗಾಗಿ ತಮ್ಮ ಬದುಕನ್ನು ಒಂದೊಳ್ಳೆಯ ರೀತಿಯಲ್ಲಿ ಸಾಗಿಸಿ ಮಕ್ಕಳಿಗೆ ದಾರಿದೀಪವಾಗುವ ಶಿಕ್ಷಕನಾಗಿರಬೇಕು ಎಂಬುದೇ ನನ್ನ ಅಭಿಮತವಾಗಿದೆ.ಶಿಕ್ಷಕರಾಗಿ ಅಳವಡಿಸಿಕೊಳ್ಳಬೇಕಾದ ತತ್ವಗಳು ಕೆಳಕಂಡಂತಿವೆ:-

1.ನೈತಿಕತೆ ಮತ್ತು ಎತ್ತರವಾದ ನಡತೆಯುಳ್ಳವಾಗಿರಬೇಕು.

2.ಪ್ರತಿಯೊಬ್ಬ ಮಕ್ಕಳಂನ್ನೂ ಸಮಾನವಾಗಿ ಕಾಣಬೇಕು ಹಾಗೂ ಎಲ್ಲಾರಿಗೂ ಸಮಾನವದ ಅವಕಾಶಗಳನ್ನು ದೊರಕಿಸಬೇಕು.

3.ಧೈರ್ಯದಿಂದ ಒಂದು ಮಗುವಿನ ಶೈಕ್ಷಣಿಕ ಕಷ್ಟವನ್ನು ಹೋಗಲಾಡಿಬೇಕು ಮತ್ತು ಮಕ್ಕಳನ್ನು ಅಭಿವೃದ್ಧಿಯ ಕಡೆ ಪ್ರೋತ್ಸಾಹಿಸಬೇಕು.

4.ಮಕ್ಕಳ ಪ್ರತಿಯೊಂದು ವಿಷಗಳನ್ನು ಆಲಿಸುವ ಮಹತ್ತರದವಾದ ಶ್ರಾವಣ ಸಾಮರ್ಥ್ಯವನ್ನು ಹೊಂದಿರಬೇಕು.

5.ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆ ಹೆಚ್ಚು ಗಮನನೀಡಿ ಮಕ್ಕಳಿಗೆ ಪ್ರಸ್ತುತ ತಂತ್ರಜ್ಞಾನ ಹಾಗೂ ವಿಚಾರಧಾರೆಗಳ  ಬಗ್ಗೆ ತಿಳಿಸಿಕೊಡುವುದು.

6. ಒಬ್ಬ ಪ್ರಾಮಾಣಿಕ ಶಿಕ್ಷಕನಾಗಿ ಅಹಂಕಾರವಿರಬಾರದು ಮತ್ತು ತಾನು ಇನ್ನು ಕಲಿಯಬೇಕು ಎಂಬ ಆಸಕ್ತಿ ಇರಬೇಕು.

7. ಮಕ್ಕಳನ್ನು ಬೋಧನೆಯ ವಿಷಯದಲ್ಲಿ ಮಾತ್ರವಲ್ಲದೆ ಇನ್ನು ಕುರಿತಾದ ಜೀವನದ ನೈತಿಕ ಮೌಲ್ಯಗಳನ್ನು ಹಾಗೂ ಮಕ್ಕಳ ಸರ್ವತೋಮುಖ ವಿಕಾಸವನ್ನು ಅಭಿವೃದ್ಧಿಗೊಳಿಸಬೇಕು.

8. ತಮ್ಮ ಪಾಠಗಳನ್ನು ಮಕ್ಕಳಿಗೆ ಸರಿಯಾದ ಸಮಯಕ್ಕೆ ಮಾಡಿ ಅವರಿಗೆ ಕಲಿಸಬೇಕು ಹಾಗೂ ಸರಿಯಾದ ಸಮಯಪಾಲನೆಯಲ್ಲಿ ನಿಯಂತ್ರಿಸಬೇಕು.

9. ವಿದ್ಯಾರ್ಥಿಗಳ ಗ್ರಹಿಕೆಯ ಮೇರೆಗೆ ಭೋದನೆಯನ್ನು ನಡೆಸಿಕೊಡಬೇಕು ಹಾಗೂ ಅವರ ಪಾಠದ ಕುರಿತಾದ ಅನುಮಾನಗಳೆಲ್ಲವನ್ನು ನಿವಾರಿಸಬೇಕು.

10. ವಿದ್ಯಾರ್ಥಿಗಳಿಗೆ ಬೋಧನೆ ನಡೆಸಿಕೊಳ್ಳುವ ರೀತಿ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಅರ್ಥಗರ್ಭಿತವಾಗಿ ತಲುಪುವಂತೆ ನಡೆಸಿಕೊಡಬೇಕು.

ಉಪಸಂಹಾರ:-

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ” ತಂದೆ ತಾಯಿಯನ್ನು ಬಿಟ್ಟರೆ ಮಕ್ಕಳಿಗೆ ದೇವರ ಸ್ಥಾನ ನೀಡುವುದು ಅದು ಶಿಕ್ಷಕರೆ ಮಾತ್ರ. ಈ ಮೇಲೆ ನೀಡಿದ ಉದ್ದೇಶಗಳು ಹಾಗೂ ಅರ್ಹತೆಗಳು ಹಾಗೂ ತತ್ವಗಳನ್ನು ಗಮನಿಸಿದ ಮೇಲೆ ನಮಗೆ ತಿಳಿಯುವುದೇನೆಂದರೆ ನಮ್ಮ ಸರ್ಕಾರವು ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತದೆ ಅದು ಬಡ ಮಕ್ಕಳ ಅಭಿವೃದ್ದಿಗೆ. ನಮ್ಮ ದೇಶದ ಮಕ್ಕಳು ಓದಿ ಒಳ್ಳೆ ವಿದ್ಯಾರ್ಥಿಗಳಾಗಿ ನಮ್ಮ ದೇಶವನ್ನು ಅಭಿವೃದ್ಧಿಗೊಳಿಸಬೇಕು ಎಂಬ ಧ್ಯೇಯದೊಂದಿಗೆ ನಮ್ಮ ಸರ್ಕಾರವು ಈ ಶಿಕ್ಷಕರ ಹುದ್ದೆಗೆ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ. “ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು” ಎಂಬ ನಮ್ಮ ಹಿರಿಯರ ನುಡಿಮುತ್ತುಗಳಂತೆ ಮಕ್ಕಳ ಭವಿಷ್ಯವನ್ನು ಸುಂದರವಾದ ರೀತಿಯಲ್ಲಿ ರೂಪಿಸುವ ಶಕ್ತಿ ಶಿಕ್ಷಕರಿಗೆ ಇದೆ. ಇದರಿಂದಾಗಿ ಆ ಹುದ್ದೆ ಗೆ ಅರಜಿ ಸಲ್ಲಿಸುವ ಅಭ್ಯರ್ಥಿಗಳು ಹಣಕ್ಕಿಂತ ಹೆಚ್ಚಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಗಮನ ನೀಡಬೇಕು ಎಂಬ ಕಾರಣದಿಂದ ಸಾರ್ಕಾರವೇ ಅನೇಕ ಸಾವಳತ್ತಗಳನ್ನು ನೀಡುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಒಬ್ಬ ಪ್ರಾಮಾಣಿಕ ಶಿಕ್ಷಕನಾಗಿ ಮಕ್ಕಳ ಭವಿಷ್ಯದ ಜ್ಯೋತಿಯನ್ನು ಬೆಳಗಬೇಕು ಎಂಬುದೇ ನನ್ನ ಆಶಯವಾಗಿದೆ.

ಧನ್ಯವಾದಗಳು

WhatsApp Group Join Now
Telegram Group Join Now
Instagram Group Join Now

Hello friends, my name is Sanju, I am the Writer and Founder of this blog and I will share all the information related to Government Scemes, Blogging, SEO, Internet Review, WordPress, Make Money Online, News and Technology through this website.🔁

Leave a comment