ಸಮಸ್ತ ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು, ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಯುವ ಜನತೆಗೆ ತಿಳಿಸುವ ವಿಷಯವೇನೆಂದರೆ ನಮ್ಮ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೆಗೌಡರು ಜಾಲತಾಣಗಳಲ್ಲಿ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 364 ಸರ್ವೇಯರ್ ಹುದ್ದೆಯ ನೇಮಕಾತಿಗೆ ಅನುವುಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.ನಮ್ಮ ರಾಜ್ಯದಲ್ಲಿ 1091 ಸರ್ವೇಯರ್ ಹುದ್ದೆಯ ನೇಮಕಾತಿಮಾಡಲಾಗಿತ್ತು ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗಾಗಿ ಉಳಿದಿರುವ 364 ಪೋಸ್ಟ್ ನ ನೇಮಕಾತಿಯನ್ನು ಪ್ರಾರಂಭ ಮಾಡಲಾಗುವುದು ಎಂಬ ಸವಿಯಾದ ಸುದ್ಧಿಯನ್ನು ನಮ್ಮ ಕರ್ನಾಟಕ ಜನತೆಗೆ ತಿಳಿಸಲಾಗಿದೆ. ಆಸಕ್ತಿ ಇರುವವರು ಗಮನವಿಟ್ಟು ಕೊನೆಯವರೆಗೂ ಓದಿ…
ಸರ್ವೇಯರ್ ಹುದ್ದೆಯ ಪ್ರಾಥಮಿಕ ಜವಾಬ್ದಾರಿಗಳೆಂದರೆ:-
ಸರ್ವೇಯರ್ ಹುದ್ದೆಯು ಅನೇಕ ಕ್ಷೇತ್ರಗಳಲ್ಲಿ ಕೆಲಸಮಾಡುವಂತಹ ಹುದ್ದೆಯಗಿದ್ದು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಹುದ್ದೆಯ ಕೆಲಗಾರನು ತನ್ನ ಅಧಿನದಲ್ಲಿರುವ ನಿರ್ದಿಷ್ಟ ಭೂಮಿಯ ಅಳತೆ,ಭೂಮಿಯ ಬಗ್ಗೆ ಸಂಬಂಧ ಪಟ್ಟ ವಿಸ್ತೀರ್ಣ ಹಾಗೂ ಇನ್ನಿತರ ದತ್ತಾಂಶಗಳ ಬಗ್ಗೆ ಸಂಬಂಧ ಪಟ್ಟ ಅಂಕಿ ಅಂಶಗಳ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಈ ಹುದ್ದೆಯ ಪ್ರಮುಖ ಜವಬ್ದಾರಿಗಳು ಈ ಕೆಳಕಂಡಂತಿವೆ:-
ಇದನ್ನು ಓದಿ : ಈ ಪ್ಯಾಕ್ ಏರ್ಟೆಲ್ ಗ್ರಾಹಕರಿಗೆ ಮಾತ್ರ! ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಪ್ರಯೋಜನ! Artel Free Data.
1.ಭೂಮಿಯ ಮಾಪನ ಮತ್ತು ಅಳತೆಗಳು:-
ಸರ್ವೇಯರ್ ನ ಪ್ರಮುಖ ಕೆಲಸವಾದ ಭೂಮಿಯ ಅಳತೆಮಾಡುವ ಕೆಲಸ ನಿರ್ವಹಿಸಲು ಅಭ್ಯರ್ಥಿಯೂ ನಿರ್ದಿಷ್ಟ ಭೂಮಿಯನ್ನು ಅಳತೆ ಮಾಡಲು ಯಾವ ಯಾವ ಮಾಪನ ಬೇಕಾಗುತ್ತದೆ ಎಂಬ ಅಂಶದ ಬಗ್ಗೆ ಅಗತ್ಯವಾದ ಮಾಹಿತಿಯನ್ನು ತಿಳಿದಿರಬೇಕು. ಉದಾಹರಣೆಗೆ ಜಿಪಿಎಸ್, ಥಿಯೋಡೋಲೈಟ್, ಲೇವಲ್ ಮತ್ತು ಇತರ ತಂತ್ರಜ್ಞಾನದ ಬಗ್ಗೆ ಮಾಹಿಯನ್ನು ಪಡೆಯಬೇಕಾಗಿದೆ.
2.ಅಂಕಿ-ಅಂಶಗಳು ಸಂಗ್ರಹಣೆ ಮತ್ತು ದತ್ತಾಂಶ ವಿಶ್ಲೇಷಣೆ :-
ಸರ್ವೇಯರ್ ಅಭ್ಯರ್ಥಿಯು ಭೂಮಿಯ ಮೇಲ್ಮೈಹಾಗೂ ಇನ್ನಿತರ ಭೂ ನಿರ್ಮಾಣ ಯೋಜನೆಗಳು ಇದೆ ರೀತಿ ಸಂಬಂಧಪಟ್ಟ ಇನ್ನಿತರ ಸಂಖ್ಯಾ ದಾಖಲೆಗಳನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ವಿವರಗಳನ್ನು ವಿಶ್ಲೇಷಣೆ ಮಾಡಿ ಪ್ರದರ್ಶಿಸುವುದು ಈ ಹುದ್ದೆಯ ಜವಾಬ್ದಾರಿಯಾಗಿದೆ.
3.ಮಾನಚಿತ್ರಣ ಮತ್ತು ಡ್ರಾಫಿಂಗ್ :-
ಈ ಹುದ್ದೆಯಲ್ಲಿ ಕೆಲಸ ಮಾಡುವ ಅಭ್ಯರ್ಥಿಯೂ ತನ್ನ ಅಧೀನಲ್ಲಿರುವ ಭೂಮಿಯ ಸ್ಥಳಗಳ ವಿವರಣೆಯನ್ನು ಪರಿಶೀಲಿಸಿ ಮಾಹಿತಿಯನ್ನು ಸಂಗ್ರಹಣೆ ಮಾಡಿ ಅನಂತರ ಭೂಮಿಯ ವಿವರಣೆಯನ್ನು ಒಳಗೊಂಡಂತೆ ಭೂಮಾಪನ ನಕ್ಷೆಗಳು ಹಾಗೂ ಮ್ಯಾಪಿಂಗ್ ಅನ್ನು ಮತ್ತು ನಿರ್ಮಾಣ ವಿನ್ಯಾಸಗಳನ್ನು ಸಿದ್ದಪಡಿಸುವುದು.CAD(ಕಂಪ್ಯೂಟರ್ ನೆರವಿನ ವಿನ್ಯಾಸ) ಮತ್ತು GIS(ಭೌಗೋಳಿಕ ಮಾಹಿತಿ ವ್ಯವಸ್ಥೆಗಳು) ಮುಂತಾದ ತಂತ್ರಜ್ಞಾನಗಳನ್ನು ಬಳಸುವುದರ ಮೂಲಕ ಭೂಮಾಪನ ಹಾಗೂ ಮ್ಯಾಪಿಂಗ್ ಅನ್ನು ತಯಾರುಮಾಡುವುದು.
4.ಕಡ್ಡಾಯ ಮತ್ತು ವರದಿಗಳು:-
ಭೂಮಿಯ ಕಾರ್ಯಪಟ್ಟಿಗೆ ಹಾಗೂ ನಿಖರ ಅಳತೆಗಳ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಹಾಗೂ ಸರ್ವೇಯಿಂಗ್ ಆಧಾರಿತ ನಿಯಮನುಸಾರಗಳನ್ನು ಪಾಲಿಸುವುದು.
5.ಜಮೀನಿನ ಮೌಲ್ಯಮಾಪನ:- ಅನೇಕ ಕಾರ್ಯ ಕ್ಷಮತೆಯುಳ್ಳ ಅಧಿಕಾರಿಗಳೊಂದಿಗೆ ಜಮೀನಿನ ಹಾಗೂ ಕಟ್ಟಡಗಳ ಗುಣಮಟ್ಟವನ್ನು ಪರಿಶೀಲಿಸಬೇಕು.
6.ದೋಷ ಪರಿಹಾರಗಳು:-ಈಗಾಗಲೇ ನಡೆಸಿರುವ ಸರ್ವೇಯ ಅಳತೆಗಳಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ಅದನ್ನು ದೋಷ ನಿವಾರಣೆ ಮಾಡಬೇಕು.
ಸರ್ವೇಯರ್ ಕೆಲಸ ಮಾಡುವ ಅಭ್ಯರ್ಥಿಯೂ ತಾನು ಶೇಕಡಾ 60 ರಷ್ಟು ಬಾಹ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಹಾಗೂ 40% ಕಚೇರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಸರ್ವೇಯರ್ ತನ್ನ ಕೆಲಸಗಳನ್ನು ಅನೇಕ ಕಡೆ ನಿರ್ವಹಿಸಬೇಕಾಗುತ್ತದೆ. ಅವುಗಳೆಂದರೆ ಭೂಮಿ ನಿರ್ಮಾಣ, ರಸ್ತೆಗಳ ಉದ್ದಗಳ ಅಭಿವೃದ್ಧಿ ಹಾಗೂ ಜಮೀನಿನ ನೊಂದಣಿ ಹಾಗೂ ಇನ್ನಿತರ ಭೂಮಿಯ ಸಾರ್ವಜನಿಕ ಸೇವೆಗಳನ್ನು ನಡೆಸಬೇಕಾಗಿದೆ.
ಸರ್ವೇಯರ್ ಹುದ್ದೆಯನ್ನು ಪಡೆಯಲು ಬೇಕಾದ ಶೈಕ್ಷಣಿಕ ಅರ್ಹತೆಗಳು:-
ಶೈಕ್ಷಣಿಕ ಅರ್ಹತೆಗಳು:-
1.ಡಿಪ್ಲೋಮಾ ಅಥವಾ ಪದವಿ:- ಅಭ್ಯರ್ಥಿಯು ಸರ್ವೇಯರ್ ಕೆಲಸವನ್ನು ಪಡೆಯಲು ತನ್ನ ಶೈಕ್ಷಣಿಕ ಅರ್ಹತೆಗಳನ್ನು ಪೂರ್ಣಗೊಳಿಸಬೇಕು.ಅಭ್ಯರ್ಥಿಯೂ ಸಿವಿಲ್ ಇಂಜಿನಿಯರ್, ಭೂ ವಿಜ್ಞಾನ(ಭೂಗೋಳ), ಭೂ ಮಾಪನ ಮತ್ತು ಭೂ ವಿಜ್ಞಾನ (ಸರ್ವೇಯಿಂಗ್ ಮತ್ತು ಜಿಯೋಮೆಟ್ರಿಕ್ಸ್ ) ಈ ವಿಷಯದಲ್ಲಿ ಪದವಿಯನ್ನು ಅಥವಾ ಸರ್ವೇಯಿಂಗ್ ವಿಷಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಿಗ್ರಿ ಯನ್ನು ಪಡೆದುಕೊಂಡಿರಬೇಕು.
2.ಸರ್ವೇಯಿಂಗ್ ಕೋರ್ಸ್:-ಸರ್ವೇಯಿಂಗ್ ವಿಷಯದಲ್ಲಿ ಪದವಿ ಮಾಡಿರುವ ವಿದ್ಯಾರ್ಥಿಯೂ ಎಂಜಿನಿಯರಿಂಗ್ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರಬೇಕು.
ಸರ್ವೇಯರ್ ಹುದ್ದೆಯನ್ನು ಪಡೆಯಲು ಬೇಕಾದ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳು:-
*ಅಭ್ಯರ್ಥಿಯೂ ತಾನು ಸರ್ವೇಯರ್ ಹುದ್ದೆಯನ್ನು ಪಡೆಯಲು ಹುದ್ದೆಗೆ ಸಂಬಂಧ ಪಟ್ಟ ತಂತ್ರಜ್ಞಾನವನ್ನು ಪಡೆದುಕೊಂಡಿರಬೇಕು.ಅಂದರೆ ಜಿಪಿಎಸ್, ಥಿಯಡೋಲೈಟ್, ಲೇವಲ್ ಮತ್ತು ಇನ್ನಿತರ ಮಾಪನಗಳನ್ನು ಬಳಸುವ ಕೌಶಲ್ಯವನ್ನು ಕಲಿತಿರಬೇಕು.
*ಕಂಪ್ಯೂಟರ್ ಐಡ್ ಡ್ರಾಫಿಂಗ್ (CAD)ಮತ್ತು ಜಿಯೋಗ್ರಾಫಿಕಲ್ ಇನ್ಫಾರ್ಮಶನ್ ಸಿಸ್ಟಮ್ (GDS) ಮುಂತಾದ ವಿಷಯಗಳಲ್ಲಿ ಕಂಪ್ಯೂಟರ್ ನ ಮಾಹಿತಿಗಳನ್ನು ಪಡೆದಿರಬೇಕು ಮತ್ತು ಈ ವಿಷಯಗಳಲ್ಲಿ ಪರಿನಣಿತಿಯನ್ನು ಪಡೆದಿರಬೇಕು.
*ಈ ಕೆಲಸವೂ ಅಳತೆಯ ಬಗ್ಗೆ ಸಂಬಂಧ ಪಟ್ಟಿರುವುದರಿಂದ ಅಭ್ಯರ್ಥಿಯೂ ತಾನು ಗಣಿತದ ನಿಖರ ಅಳತೆ, ಲೆಕ್ಕಾಚಾರ ಮುಂತಾದ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿರಬೇಕು.
ಸರ್ವೇಯರ್ ಹುದ್ದೆಯನ್ನು ಪಡೆಯಲು ಬೇಕಾದ ಇತರ ಕೌಶಲ್ಯಗಳು:-
ಅಭ್ಯರ್ಥಿಯೂ ತಾನು ತಂಡದ ಸದಸ್ಯರು ಹಾಗೂ ಇತರ ರಿಯಲ್ ಎಸ್ಟೇಟ್ ಮತ್ತು ಇತರ ನಿರ್ಮಾಣ ವಲಯದ ಸದಸ್ಯರೊಡನೆ ಸಮನ್ವಯತೆಯಿಂದ ವರ್ತಿಸಬೇಕು. ಹಾಗೂ ಅಭ್ಯರ್ಥಿಯೂ ಹೆಚ್ಚಿನದಾಗಿ ಹೊರಗಡೆ ಕೆಲಸಮಾಡಬೇಕಾದುದ್ದರಿಂದ ಅಭ್ಯರ್ಥಿಯ ಶಾರೀರಿಕ ಸಾಮರ್ಥ್ಯ ಬಲಿಷ್ಠವಾಗಿರಬೇಕು.
ಈ ಮೇಲಿನ ಎಲ್ಲಾ ಅರ್ಹತೆಗಳು ಸೇವಾ ಕ್ಷೇತ್ರದಲ್ಲಿ ಅಲ್ಪ ವ್ಯತ್ಯಾಸ ಇರಬಹುದು. ಆದರೆ ಮೇಲಿರುವ ಎಲ್ಲಾ ಅರ್ಹತೆಗಳು ಅನ್ವಯಿಸುತ್ತವೆ. ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಅಭ್ಯರ್ಥಿಯೂ ಹೊಂದಿದ್ದರೆ ಕೂಡಲೇ ಸರ್ವೇಯರ್ ಹುದ್ದೆ ಗೆ ಅರ್ಜಿಯನ್ನು ಸಲ್ಲಿಸಬಹುದು.
ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:-
ಸರ್ವೇಯರ್ ಹುದ್ದೆಯನ್ನು ಪಡೆದುಕೊಳ್ಳಲು ಅಭ್ಯರ್ಥಿಯು ಅಗತ್ಯವಾದ ದಾಖಲೆಗಳನ್ನು ಒದಗಿಸಬೇಕು ಅವುಗಳೆಂದರೆ:-
1.ಶೈಕ್ಷಣಿಕ ಪ್ರಮಾಣ ಪತ್ರ:-ಅಭ್ಯರ್ಥಿಯೂ ಅಕ್ಷರಸ್ತ ಎಂಬುದನ್ನು ಸಾಭಿತುಪಡಿಸಲು ಹಾಗೂ ತಾನು ಸರ್ವೇಯರ್ ಹುದ್ದೆ ಗೆ ಅಗತ್ಯವಾದ ಶಿಕ್ಷಣವನ್ನು ಪಡೆದಿರುವೆ ಎಂಬುದನ್ನು ಸಾಬೀತುಪಡಿಸಲು ತನ್ನ ಪದವಿಯ ಅಂಕಪಟ್ಟಿಗಳು ಹಾಗೂ ಪ್ರಮಾಣಪತ್ರವನ್ನು ಒದಗಿಸಬೇಕು. ಮತ್ತು ವಿದ್ಯಾರ್ಥಿಯ ಕೋರ್ಸ್ ಪೂರ್ಣಗೊಂಡ ಮಾಹಿತಿಯನ್ನು ಕೂಡ ನೀಡಬೇಕು. ಉದಾಹರಣೆಗೆ BA, B. Ed, ಡಿಪ್ಲೋಮ ಮುಂತಾದ ಅಂತಿಮ ಕೋರ್ಸ್ ನ ಮಾಹಿತಿಯನ್ನು ನೀಡಬೇಕು.
2.ತಾಂತ್ರಿಕ ಪ್ರಮಾಣ ಪತ್ರ:- ಅಭ್ಯರ್ಥಿಯೂ ತಾನು CAD ಹಾಗೂ GIS ನ ಇತರ ಕಂಪ್ಯೂಟರ್ ಸಂಬಂಧಿತ ತರಬೇತಿಯನ್ನು ಪಡೆದುಕೊಂಡಿರುವ ಪ್ರಮಾಣ ಪತ್ರವನ್ನು ಹಾಜರೂಪಡಿಸಬೇಕು. ಅಗತ್ಯವಿದ್ದಲ್ಲಿ ಭೂಮಾಪನ ಹಾಗೂ ಇನ್ನಿತರ ವಿಷಯದಲ್ಲಿ ಪರಿಣಿತಿ ಪಡೆದುಕೊಂಡಿರುವ ದಾಖಲೆಗಳನ್ನು ಒದಗಿಸಬೇಕು.
3.ಅನುಭವ ಪ್ರಮಾಣ ಪತ್ರ:-ಅಭ್ಯರ್ಥಿಯೂ ತಾನು ಹಿಂದಿನ ವರ್ಷದಲ್ಲಿ ಸರ್ವೇಯರ್ ಸಂಬಂಧಿತ ಹುದ್ದೆಯಲ್ಲಿ ಅನುಭವ ಪಡೆದಿದ್ದರೆ ಆ ದಾಖಲೆಗಳನ್ನು ಒದಗಿಸತಕ್ಕದ್ದು ಇದರಿಂದಾಗಿ ವಿಶೇಷವಾದ ರಿಸರ್ವಶನ್ ದೊರಕುತ್ತದೆ.
4.ವೈಯಕ್ತಿಕ ದಾಖಲೆಗಳು:-ಅಭ್ಯರ್ಥಿಯೂ ತನ್ನ ವೈಯಕ್ತಿಕ ದಾಖಲೆಗಳನ್ನು ಒದಗಿಸಬೇಕು ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಮುಂತಾದ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ.
5.ಪರಿಸ್ಕೃತ ಜೀವನ ಚರಿತ್ರೆ ಅಥವಾ CV:- ಅಭ್ಯರ್ಥಿಯ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಹಾಗೂ ಶಿಕ್ಷಣ, ತಾಂತ್ರಿಕತೆ ಹಾಗೂ ಅನುಭವಗಳಂತಹ ಒಳಗೊಂಡ ವಿಚಾರಗಳನ್ನು ಒಳಗೊಂಡ CV ಯನ್ನು ಒದಗಿಸಬೇಕು.
ಇದನ್ನು ಓದಿ : ಈ ಪ್ಯಾಕ್ ಏರ್ಟೆಲ್ ಗ್ರಾಹಕರಿಗೆ ಮಾತ್ರ! ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಪ್ರಯೋಜನ! Artel Free Data.
6.ಕ್ಯಾರೆಕ್ಟರ್ ಪ್ರಮಾಣ ಪತ್ರ:- ವ್ಯಕ್ತಿಯ ಗುಣಗಳನ್ನು ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಏಕೆಂದರೆ ವ್ಯಕ್ತಿಯೂ ತಾನು ಜನಗಳ ನಡುವೆ ಕೆಲಸಮಾಡಬೇಕು ಹೀಗಾಗಿ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಆತ ಹಿಂದೆ ಕೆಲಸಮಾಡಿದ ಸಂಸ್ಥೆಯಿಂದ ಶ್ರೇಯಾಭಿಮಾನವನ್ನು ಪಡೆದುಕೊಂಡಿರಬೇಕು.
7.ಕನ್ನಡಿಗ(ಜಾತಿ ಪ್ರಮಾಣ ಪತ್ರ) ಹಾಗೂ ಆರ್ಥಿಕವಾಗಿ ದುರ್ಬಲ ವರ್ಗ(EWS) ದವನಾಗಿದ್ದಾರೆ ಪ್ರಮಾಣ ಪತ್ರವನ್ನು ಪಡೆದುಕೊಂಡಿರಬೇಕು. ಇದರಿಂದಾಗಿ ಸರ್ಕಾರದಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳಬಹುದು.
8.ಸ್ಥಳೀಯ ಪ್ರಮಾಣ ಪತ್ರ:- ಕೆಲವೊಮ್ಮೆ ಅಭ್ಯರ್ಥಿಯೂ ಸ್ಥಳೀಯನೇ ಆಗಿದ್ದರೆ ಅಭ್ಯರ್ಥಿಗೆ ಆದ್ಯತೆ ನೀಡಬಹುದು. ಇದಕ್ಕಾಗಿ ಸ್ಥಳೀಯ ಪ್ರಮಾಣ ಪತ್ರದ ಅಗತ್ಯವಿದೆ.
ಈ ಮೇಲೆ ನೀಡಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸೂಕ್ತವಾದ ರೀತಿಯಲ್ಲಿ ಒದಗಿಸಬೇಕು ಇದರಿಂದಾಗಿ ಅಭ್ಯರ್ಥಿಯನ್ನು ಕೆಲಸಕ್ಕೆ ನೇಮಕಾಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಅಭ್ಯರ್ಥಿಯು ತನ್ನ ಎಲ್ಲಾ ದಾಖಲೆಗಳು ಇತ್ತೀಚಿನವೇ ಹಾಗೂ ನವೀನವಾಗಿರುವುದು ಆದಷ್ಟು ಸುರಕ್ಷಿತ.
ಸರ್ವೇಯರ್ ಹುದ್ದೆಗೆ ನೀಡುವ ಸಂಬಳ ಎಷ್ಟು?
ಸರ್ವೇಯರ್ ಕೆಲಸಕ್ಕೆ ನೇಮಕಗೊಂಡ ಅಭ್ಯರ್ಥಿಯ ಸಂಬಳವು ಆತನ ಅನುಭವ, ಸ್ಥಳ, ಪರಿಣಿತಿ ಹಾಗೂ ಇನ್ನಿತರ ಮುಂತಾದ ವಿಷಯಗಳ ಆಧಾರದ ಮೇಲೆ ಸಂಬಳಗಳು ಬದಲಾಗಬಹುದು. ಆದರೆ ನಮ್ಮ ಭಾರತದಲ್ಲಿ ಪ್ರಾರಂಭಿಕವಾಗಿ ಅಭ್ಯರ್ಥಿಗಳಿಗೆ ನೀಡುವ ಸಂಬಳವು ₹15000 ದಿಂದ ₹30000 ಆಗಿರುತ್ತದೆ.
*5-10 ವರ್ಷ ಅನುಭವ ಪಡೆದುಕೊಂಡಿರುವವರಿಗೆ ಸಂಬಳವು ₹30000 ದಿಂದ ₹60000 ತನಕ ಹೆಚ್ಚಗುತ್ತದೆ. ಅಭ್ಯರ್ಥಿಯ ಸೇವೆಯನ್ನು ಗಮನಿಸಿ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೆ.ಅಭ್ಯರ್ಥಿಯೂ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿದ್ದಲ್ಲಿ ಆತನನ್ನು ಉನ್ನತ ಹುದ್ದೆಗೆ ಪ್ರಮೋಷನ್ ನೀಡಿ ಸಂಬಳವು ₹70000 ಕ್ಕಿಂತ ಹೆಚ್ಚಾಗಿರಬಹುದು.
CONCLUSION
ಸರ್ವೇಯರ್ ಈ ಹುದ್ದೆಯು ಅನೇಕ ಕ್ಷೇತ್ರಗಳಲ್ಲಿ ಬಹಳ ಉಪಯೋಗಗಳನ್ನು ಹೊಂದಿದೆ. ಹಾಗೂ ಸರ್ಕಾರಕ್ಕೆ ಮತ್ತು ಖಾಸಗಿ ವಲಯಕ್ಕೆ ಅಗತ್ಯವಾದ ಮಾಹಿತಿಯನ್ನು ಒದಗಿಸಲು ಬಹಳ ಸಹಕಾರಿಯಾಗಿದೆ. ಇದರಿಂದಾಗಿ ನಮ್ಮ ಸಮಾಜದಲ್ಲಿರುವ ಮೂಲಭೂತ ಸೌಕರ್ಯಗಳು ಹಾಗೂ ಭೂಮಿಯೂ ಯಾವ ಯಾವ ಕಾರಣಗಳಿಗೆ ಎಷ್ಟು ಬಳಕೆಯಾಗುತ್ತಿದೆ ಹಾಗೂ ನಮ್ಮ ಪರಿಸರ ಸಂರಕ್ಷಣೆಯ ಮಾಹಿತಿಗಳನ್ನು ತಿಳಿಸಿಕೊಡುತ್ತದೆ.ಈ ಸರ್ವೇಯರ್ ಹುದ್ದೆಯು ರಸ್ತೆಗಳ ನಿರ್ಮಾಣದಲ್ಲಿ ಹಾಗೂ ಕಟ್ಟಡಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಈ ಹುದ್ದೆಗೆ ಕೂಡಲೇ ಅರ್ಜಿ ಸಲ್ಲಿಸಿ ಸರ್ವೇಯರ್ ಕೆಲಸಕ್ಕೆ ನೇಮಕವಾಗಲಿ ಎಂಬುದೇ ನನ್ನ ಆಶಯವಾಗಿದೆ.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.