ಇನ್ಸ್ಪೈರ್ ಸ್ಕಾಲರ್ಶಿಪ್ : 10 ಸಾವಿರದವರೆಗೆ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಿರಿ.

ಇನ್ಸ್ಪೈರ್ ಸ್ಕಾಲರ್ಶಿಪ್

ಇನ್ಸ್ಪೈರ್ ಸ್ಕಾಲರ್ಶಿಪ್ : ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಈ ಆರ್ಟಿಕಲ್ ನ ಮುಖಾಂತರ ಇನ್ಸ್ಪೈರ್ ಸ್ಕಾಲರ್ಶಿಪ್ ನ ಬಗ್ಗೆ ತಿಳಿಸಿಕೊಡುತ್ತೇನೆ ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗಕರವಾಗಿದೆ ಹೀಗಾಗಿ ಈ ಆರ್ಟಿಕಲ್ ಅನ್ನು ಪೂರ್ಣವಾಗಿ ಓದಿ. ಎಲ್ಲಾ ಕ್ಷೇತ್ರದಲ್ಲೂ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದ ತಮ್ಮ ಪ್ರತಿಭೆಯನ್ನು ಮುಚ್ಚಿಟ್ಟುಕೊಂಡು ತಮ್ಮ ಕನಸನ್ನು ಮನೆಯ ಕಷ್ಟದಿಂದಾಗಿ ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದನ್ನು ಗಮನಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹಾಯಕವಾಗುವ ಹಾಗೂ ಉಪಯೋಗವಾಗುವ ಈ ಒಂದು ಇನ್ಸ್ಪೈರ್ ಸ್ಕಾಲರ್ಷಿಪ್ ಯೋಜನೆಯನ್ನು ಜಾರಿಗೆ ತಂದಿದೆ. ನಮ್ಮ ಭಾರತ ಅಭಿವೃದ್ಧಿಶೀಲಾ ದೇಶ ಹೀಗಾಗಿ ನಮ್ಮ ದೇಶಕ್ಕೆ ಅನೇಕ ಸೃಜನಾತ್ಮಕ ಕೌಶಲ್ಯಗಳ ಅವಶ್ಯಕತೆ ಇದೆ ಹೀಗಾಗಿ ಮುಂದಿನ ಅಭಿವೃದ್ಧಿಗೆ ಈಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕೌಶಲ್ಯಗಳು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಿಂದ ನಮ್ಮ ದೇಶದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತೇಜನ ನೀಡುವುದಕ್ಕಾಗಿಯೇ ಕೇಂದ್ರ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ.

ಇನ್ಸ್ಪೈರ್ ಸ್ಕಾಲರ್ಶಿಪ್ ನ ಉದ್ದೇಶಗಳೇನು?

ಈ ಮೇಲೆ ಕಂಡಂತೆ ನಮ್ಮ ದೇಶದ ಅಭಿವೃದ್ಧಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಹಕಾರಕ್ಕೆ ಈ ಒಂದು ಯೋಜನೆಯು ಜಾರಿಯಾಗಿದೆ. ಇದನ್ನು ಹೊರತುಪಡಿಸಿ ಇನ್ನು ಅನೇಕ ಕಾರಣಗಳೆಂದರೆ:-

1.ಅತ್ಯುತ್ತಮ ಶ್ರೇಣಿಯ ವಿದ್ಯಾಭ್ಯಾಸ:-

ಮಕ್ಕಳ ಪಾಲಿಗೆ ಈ ಒಂದು ಯೋಜನೆಯು ಬಹಳ ಸಹಾಯಕವಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚಿ ಈ ಸ್ಕಾಲರ್ಷಿಪ್ ನೀಡುವುದರಿಂದ ವಿದ್ಯಾರ್ಥಿಯು ತಾನು ಇನ್ನು ಹೆಚ್ಚು ಹೆಚ್ಚು ತನ್ನ ಪ್ರತಿಭೆಯನ್ನು ಸಕ್ರಿಯಗೊಳಿಸಲು ಪ್ರೆರೇಪಿಸುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಗಿದೆ. ಹಾಗೂ ಮಕ್ಕಳ ಪ್ರತಿಭೆಗಳು ಮನೆಯ ಬಡತನದಿಂದ ಕಣ್ಮರೆಯಾಗುವುದನ್ನು ತಡೆಗಟ್ಟಿದೆ.

2.ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಬೆಳವಣಿಗೆ:-

ನಮ್ಮ ಸಮಾಜದಲ್ಲಿರುವ ಅನೇಕ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಪ್ರತಿಭೆಯನ್ನು ಬೆಳಕಿಗೆ ತರಲು ಈ ಯೋಜನೆಯು ಜಾರಿಯಾಗಿದೆ. ನಮ್ಮ ದೇಶದಲ್ಲಿ ಕಲೆ ಹಾಗೂ ಮುಂತಾದ ಇನ್ನಿತರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳಿವೆ ಆದರೆ ಕೆಲ ಕಾರಣಗಳಿಂದ ಅವು ಬೆಳಕಿಗೆ ಬರುವುದಿಲ್ಲ ಹೀಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೆರೇಪಿಸಲು ಹಾಗೂ ಅವರ ಆಲೋಚನಾ ಶಕ್ತಿಯನ್ನು ವೃದ್ಧಿಸಲು ಈ ಯೋಜನೆಯೂ ಬಹಳ ಸಹಕಾರಿಯಾಗಿದೆ.

3.ಆರ್ಥಿಕ ಪರಿಸ್ಥಿತಿ:-

ಅನೇಕ ಬಡ ವಿದ್ಯಾರ್ಥಿಗಳು ಉತ್ತಮವಾದ ಪ್ರತಿಭೆಗಳನ್ನು ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರಲ್ಲಿ ಹೊಂದಿದ್ದರೂ ಕೂಡ ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣಗಳಿಂದ ತಮ್ಮ ಪ್ರತಿಭೆಯನ್ನು ಬೆಳಕಿಗೆ ತರುವುದಿಲ್ಲ. ಇದನ್ನೆಲ್ಲಾ ಗಮನಿಸಿದ ಸರ್ಕಾರವು ಬಡ ಮಕ್ಕಳ ಪಾಲಿಗೆ ಆಪ್ತ ಮಿತ್ರನೆಂಬಂತೆ ಈ ಯೋಜನೆಯನ್ನು ಪರಿಚಯಿಸಿತು. ಇದರಿಂದಾಗಿ ಮಕ್ಕಳ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅವರು ಇನ್ನಿತರ ಸಾಂಕೃತಿಕ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ.

4.ಮಾರುಕಟ್ಟೆ ಕೌಶಲ್ಯ:-

ಪ್ರಸ್ತುತ ಕಾಲದಲ್ಲಿ ಕೇವಲ ಶಾಲಾ ಕಾಲೇಜಿನಲ್ಲಿ ಕಲಿಯುವುದು ಹಾಗೂ ಅಂಕಗಳಿಂದ ಸೂಕ್ತವಾದ ಕೆಲಸಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದನ್ನರಿತ ಸರ್ಕಾರವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉದ್ಯೋಗ ಸ್ಥಳಗಳಲ್ಲಿ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಲು ಹಾಗೂ ಪ್ರತಿಭೆಯನ್ನು ಬೆಳಕಿಗೆ ತರಲು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಈ ಯೋಜನೆ ಪ್ರಮುಖ ಪಾತ್ರವಹಿಸುತ್ತದೆ.

ಇದನ್ನು ಓದಿ : ಗೂಗಲ್ ಪೇ ಮೂಲಕ ಸಾಲ : 1 ಲಕ್ಷದವರೆಗೆ ಸಾಲ ಪಡೆಯಿರಿ.

5.ಅಧಿಕೃತ ಅಭಿವೃದ್ಧಿ:-

ಈ ಮೇಲೆಯೇ ತಿಳಿಸಿದಂತೆ ಸರ್ಕಾರವು ತನ್ನ ಭವಿಷ್ಯದ ಅಭಿವೃದ್ಧಿಗಾಗಿಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದೊರಕಿಸಲು ಈ ಯೋಜನೆಯನ್ನು ಜಾರಿಗೋಳಿಸಿದೆ. ಇದರಿಂದಾಗಿ ಬಡ ಮಕ್ಕಳಿಗೆ ಸಹಾಯಕವಾಗುವುದಲ್ಲದೆ ನಮ್ಮ ದೇಶ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತದೆ.

ಈ ಮೇಲ್ಕಂಡ ಎಲ್ಲಾ ಉದ್ದೇಶಗಳ ಆಧಾರದ ಮೇಲೆ ಸರ್ಕಾರವು ಈ ಇನ್ಸ್ಪೈರ್ ಸ್ಕಾಲರ್ಷಿಪ್ ಎಂಬ ಯೋಜನೆಯನ್ನು ಜಾರಿಗೋಳಿಸಿದೆ. ಈ ಒಂದು ಯೋಜನೇಯ ಉದ್ದೇಶವು ಎಲ್ಲಾ ರೀತಿಯಲ್ಲೂ ಬಡ ಮಕ್ಕಳಿಗೆ ಸಹಕಾರಿಯಾಗಿದೆ. ಹಾಗೂ ನಮ್ಮ ದೇಶದ ಅಭಿವೃದ್ಧಿಗೆ ಇದೊಂದು ಉತ್ತಮವಾದ ಮಾರ್ಗವಾಗಿದೆ. ಇದರ ಲಾಭವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಪಡೆದುಕೊಂಡು ತನ್ನ ಬದುಕನ್ನು ಹಾಗೂ ದೇಶದ ಭವಿಷ್ಯವನ್ನು ಒಂದು ಸದೃಢವಾದ ರೀತಿಯಲ್ಲಿ ಕಟ್ಟಬಹುದಾಗಿದೆ.

ಇನ್ಸ್ಪೈರ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾದ ಅರ್ಹತೆಗಳೇನು?

ಇನ್ಸ್ಪೈರ್ ಸ್ಕಾಲರ್ಷಿಪ್ ಪಡೆದುಕೊಳ್ಳಲು ಅಭ್ಯರ್ಥಿಯು ಈ ಕೆಳಕಂಡ ಮುಖ್ಯ ಅರ್ಹತೆಗಳನ್ನು ಪೂರೈಸಬೇಕು, ಈ ಅರ್ಹತೆಗಳು ಕೆಳಕಂಡಂತಿವೆ:-

1.ಶಿಕ್ಷಣ:-

ಇನ್ಸ್ಪೈರ್ ಈ ಸ್ಕಾಲರ್ಷಿಪ್ ಅನ್ನು ನಿರ್ದಿಷ್ಟ ಶಿಕ್ಷಣದ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ನೀಡುವುದಾಗಿದೆ. ಹೀಗಾಗಿ ಪ್ರತಿಯೊಬ್ಬ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯೂ 10 ನೇ ತರಗತಿ (SSLC) ಯನ್ನು ಮುಕ್ತಾಯಗೊಳಿಸಿ ಹನ್ನೊಂದನೇ (11) ತರಗತಿ ಅಥವಾ ಹನ್ನೆರಡನೇ ತರಗತಿಗೆ (12) ಪ್ರವೇಶವನ್ನು ಪಡೆಯಬೇಕಾಗಿದೆ. ಈ 11 ನೇ ಹಾಗೂ 12 ನೇ ತರಗತಿಯ ವಿದ್ಯಾರ್ಥಿಗಳ ಹಂತವು ತುಂಬಾ ಉತ್ತಮವಾದ ಗ್ರಹಿಕೆಯನ್ನು ಹೊಂದಿದ್ದು ಈ ಹಂತದಲ್ಲಿ ಸೂಕ್ತ ಶಿಕ್ಷಣ ಒದಗಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಈ ಇನ್ಸ್ಪೈರ್ ಸ್ಕಾಲರ್ಷಿಪ್ ಯೋಜನೆಯು ದಾರಿದೀಪವಾಗಿದೆ.

2.ಆರ್ಥಿಕ ಪರಿಸ್ಥಿತಿ:-

ಈ ಯೋಜನೆಯು ಸರ್ಕಾರದ ಮುಖಾಂತರ ಜಾರಿಯಾಗಿರುವುದರಿಂದ ಇದು ಬಡವರ ಪಾಲಿಗೆ ಜ್ಯೋತಿಯಾಗಲಿದೆ. ಹೀಗಾಗಿ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿ ಕೆಳಮಟ್ಟದಲ್ಲಿ ಅಥವಾ ನಿರ್ಧರಿತ ಆದಾಯವನ್ನು ಹೊಂದಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸ್ಕಾಲರ್ಷಿಪ್ ನೀಡಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಈ ಇನ್ಸ್ಪೈರ್ ಯೋಜನೆಯೂ ಹೆಚ್ಚಿನ ಆಧಾನವನ್ನು ನೀಡುತ್ತದೆ. ಇದರಿಂದಾಗಿ ಬಡ ಮಕ್ಕಳಿಗೆ ಸಲ್ಲಬೇಕಾದ ಹಣವನ್ನು ಅನರ್ಹರು ದಕ್ಕಿಂಸಿಕೊಳ್ಳುವುದನ್ನು ದೂರಮಾಡಬಹುದು.

3.ಅಭಿವೃದ್ಧಿ ಪ್ರದೇಶಗಳು:-

ಎಲ್ಲಾ ಸರ್ಕಾರದ ಅನೇಕ ಯೋಜನೆಗಳು ದೇಶದಲ್ಲಿರುವ ಹಳ್ಳಿಗಳ ಅಭಿವೃದ್ಧಿಗಾಗಿಯೇ ಜಾರಿಯಾಗುತ್ತವೆ. ಹೀಗಾಗಿ ಈ ಯೋಜನೆಯು ಯಾವುದೇ ಅಭಿವೃದ್ಧಿ ಪ್ರದೇಶದಲ್ಲಿರುವ ಅಥವಾ ಗ್ರಾಮದ ಪ್ರದೇಶದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆಯು ಪ್ರಾಥಮಿಕ ಆದ್ಯತೆಯನ್ನು ನೀಡುತ್ತದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬ ಪ್ರತಿಭಾನ್ವಿತ ಬಡವಿದ್ಯಾರ್ಥಿಯೂ ಕೂಡ ಈ ಇನ್ಸ್ಪೈರ್ ಯೋಜನೆಯ ಲಾಭವನ್ನು ಪಡೆದುಕೊಂಡು ತನ್ನ ಭವಿಷ್ಯವನ್ನು ಒಂದು ಸುಸ್ಥಿರವಾದ ರೀತಿಯಲ್ಲಿ ಕಟ್ಟುಕೊಳ್ಳಬಹುದು.

4.ಅಕಾಡೆಮಿಕ್ ಮೆರುಗು:-

ಈ ಯೋಜನೆಯು ವಿದ್ಯಾಭ್ಯಾಸದಲ್ಲಿ ಹಾಗೂ ಕೌಶಲ್ಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ತಾನು ತನ್ನ ಪರೀಕ್ಷೆಯಲ್ಲಿ ಶೇಕಡಾ 80% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಇದರಿಂದಾಗಿ ವಿದ್ಯೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ನೀಡಿದರೆ ಈ ಸ್ಕಾಲರ್ಷಿಪ್ ನೀಡಿರುವುದಕ್ಕೆ ಒಂದು ಪ್ರಯೋಜನವಾಗುತ್ತದೆ.

5. ಬಾಹ್ಯ ಚಟುವಟಿಕೆ:-

ವಿದ್ಯಾರ್ಥಿಯು ಕೇವಲ ಅಂಕಗಳನ್ನು ಗಳಿಸುವುದರಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಹೀಗಾಗಿ ಪ್ರತಿಯೊಬ್ಬರೂ ಕೂಡ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಅಂದರೆ ಕ್ರೀಡೆ, ನೃತ್ಯ, ಸಮಾಜ ಸೇವೆ, ಕಲೆ, ವಿಜ್ಞಾನ ಹಾಗೂ ತಂತ್ರಜ್ಞಾನ ಮುಂತಾದ ವಿಚಾರದಲ್ಲಿ ಪರಿಣಿತಿಯನ್ನು  ಪಡೆದುಕೊಂಡಿರುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.

6.ಆಸಕ್ತಿಯ ಕ್ಷೇತ್ರ:-

ವಿದ್ಯಾರ್ಥಿಯೂ ತಾನು ಅರ್ಜಿ ಸಲ್ಲಿಸಲು ಹಾಗೂ ಇನ್ಸ್ಪೈರ್ ಸ್ಕಾಲರ್ಷಿಪ್ ಅನ್ನು ಪಡೆದುಕೊಳ್ಳಲು ತಾನು ಹೆಚ್ಚಿನ ಆಸಕ್ತಿ ಹೊಂದಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರಬೇಕು ಅಂದರೆ ಕಲೆ, ಕ್ರೀಡೆ, ಸಮಾಜಸೇವೆ, ವಿಜ್ಞಾನ ಹಾಗೂ ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಲ್ಲಿ ತನ್ನಿಷ್ಟವಾದ ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದುಕೊಂಡಿರಬೇಕು ಹಾಗೂ ಅದರಲ್ಲಿ ಆಸಕ್ತಿದಾಯಕವಾಗಿರಬೇಕು. ತನ್ನ ಮುಂದಿನ ಭವಿಷ್ಯವನ್ನು ಈ ಒಂದು ಕ್ಷೇತ್ರಲ್ಲಿಯೇ ಮುಂದುವರೆಸಲು ಉತ್ತಮವಾದ ಪ್ರೇರಣೆಯನ್ನು ಹೊಂದಿರಬೇಕು.

ಈ ಮೇಲಿನ ಎಲ್ಲಾ ಅರ್ಹತೆಗಳು ಇನ್ಸ್ಪೈರ್ ಯೋಜನೆಯ ನಿಯಮ ಹಾಗೂ ಶರತ್ತುಗಳಾದುದರಿಂದ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸುವ ಮುಖೇನ ಈ ಅರ್ಹತೆಗಳನ್ನು ಗಮನದಲ್ಲಿರಿಸಿಕೊಂಡಿರಬೇಕು.

ಇನ್ಸ್ಪೈರ್ ಸ್ಕಾಲರ್ಶಿಪ್ ಪಡೆಯಲು ಬೇಕಾದ ಅಗತ್ಯ ಮಾಹಿತಿಗಳು:-

1.ಮೊದಲನೆಯದಾಗಿ ವಿದ್ಯಾರ್ಥಿಯೂ ತನ್ನ ಎಲ್ಲಾ ವಿಚಾರಗಳು ಕೂಡಿದ ಅರ್ಜಿಯನ್ನು ಫಾರ್ಂ ನಲ್ಲಿ ತುಂಬಿಸಬೇಕು.

2.ವಿದ್ಯಾರ್ಥಿಯು ತನ್ನ ವಿದ್ಯಾಭ್ಯಾಸದಲ್ಲಿ ಗಳಿಸಿರುವ ಅಂಕ ಪ್ರಮಾಣ ಪತ್ರವನ್ನು ಹಾಜರೂಪಡಿಸಬೇಕು. ಇದರಿಂದಾಗಿ ವಿದ್ಯಾರ್ಥಿಗೆ ವಿದ್ಯಾಭ್ಯಾಸದಲ್ಲಿರುವ ಆಸಕ್ತಿಯನ್ನು ತಿಳಿದುಕೊಳ್ಳಬಹುದು.

3. ಈ ಯೋಜನೆಯನ್ನು ಬಡ ಮಕ್ಕಳ ಜೀವನೋಪಾಯಕ್ಕಾಗಿ ಜಾರಿಗೋಳಿಸಿರುವುದರಿಂದ  ಬಡವರಿಗೆ ಈ ಯೋಜನೆಯು ಜಾರಿಯಾಗಿದೆ. ಹಾಗಾಗಿ ಅಭ್ಯರ್ಥಿಯ ಆರ್ಥಿಕ ಪರಿಸ್ಥಿಯನ್ನು ತಿಳಿದುಕೊಳ್ಳಲು ಆದಾಯ ತೋರಿಸುವ ದಾಖಲೆಗಳು (ಉದಾಹರಣೆಗೆ ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕಿನ ದಾಖಲೆಗಳು )ಪತ್ರವನ್ನು ನೀಡಬೇಕಾಗಿದೆ.

4.ವಿದ್ಯಾರ್ಥಿಯ ನಿರ್ದಿಷ್ಟ ಆವಾಸದ ಬಗ್ಗೆ ತಿಳಿದುಕೊಳ್ಳಲು ಅಭ್ಯರ್ಥಿಯೂ ಅರ್ಜಿ ಸಲ್ಲಿಸುವಾಗ ನಿವಾಸದ ದಾಖಲೆಗಳನ್ನು ಹಾಜರೂಪಡಿಸಬೇಕಾಗಿದೆ. (ಉದಾಹರಣೆಗೆ ಆಧಾರ್ ಕಾರ್ಡ್, ಸ್ಥಳೀಯ ಪಾಲಿಕೆ ದಾಖಲೆಗಳು)

5. ವಿದ್ಯಾರ್ಥಿಯೂ ತನ್ನ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರವನ್ನು ದಾಖಲಿಸಬೇಕು.

6.ಇತರ ಚಟುವಟಿಕೆ ಕ್ಷೇತ್ರದಲ್ಲಿ ಭಾಗವಹಿಸಿ ಅಂದರೆ ಕಲೆ, ಕ್ರೀಡೆ, ಸಮಾಜ ಸೇವೆ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಲ್ಲಿ ಭಾಗವಹಿಸಿ ಪಡೆದ ಪ್ರಮಾಣ ಪತ್ರವನ್ನು ನೀಡಬೇಕು ಇದರಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೆಚ್ಚಿನ ಆದ್ಯತೆ ಸಿಗುತ್ತದೆ.

7. ಅಭ್ಯರ್ಥಿಯೂ ತನ್ನ ಶಾಲಾ ಕಾಲೇಜಿನ ಪುರಾವೆಯ ದಾಖಲೆಗಳನ್ನು ಒದಗಿಸಬೇಕು ಇದರಿಂದಾಗಿ ವಿದ್ಯಾರ್ಥಿಯೂ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಲಿದೆ. ಕಾಲೇಜಿನ ಪುರಾವೆ ಎಂದರೆ ದಾಖಲಾತಿ ಪತ್ರ ಅಥವಾ ಕಾಲೇಜಿನಿಂದ ಪಡೆದ ಪ್ರಮಾಣ ಪತ್ರ.

8. ವಿದ್ಯಾರ್ಥಿಯೂ ತನ್ನ ಗುರುತಿನ ದಾಖಲೆಗಳನ್ನು ಒದಗಿಸಬೇಕು ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಥವಾ ಯಾವುದೇ ಇನ್ನಿತರ ಅಧಿಕೃತ ಗುರುತಿನ ದಾಖಲೆಗಳು.

ಈ ಮೇಲಿನ ದಾಖಲೆಗಳು ಇನ್ಸ್ಪೈರ್ ಸ್ಕಾಲರ್ಶಿಪ್ ಯೋಜನೆಯ ನಿಯಮಕ್ಕೆ ಅಧಿಕೃತವಾಗಿರಬಹುದು. ಹೀಗಾಗಿ ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಅನಂತರ ತೆಗೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

CONCLUSION

ಈ ಮೇಲಿನ ಎಲ್ಲ ವಿಷಯಗಳನ್ನು ಗಮನಿಸಿ ವಿದ್ಯಾರ್ಥಿಗಳು ತಾವು ಸರ್ಕಾರದ ಈ ಒಂದು ಯೋಜನೆಗೆ ಅರ್ಹರೆ ಎಂಬ ವಿಚಾರವನ್ನು ಗಮನದಲ್ಲಿರಿಸಿಕೊಂಡು ತಮಗೆ ಒದಗಬೇಕಾದ ಈ ಇನ್ಸ್ಪೈರ್ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯೂ ಕೂಡ ತನಗೋದಾಗಬೇಕಾದ ಸಾಕಷ್ಟು ಹಣವನ್ನು ದೊರಕಿಸಿಕೊಳ್ಳಬೇಕು. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಇನ್ಸ್ಪೈರ್ ಸ್ಕಾಲರ್ಶಿಪ್ ಯೋಜನೆಯ ಮುಖಾಂತರ ಸುಸ್ಥಿರವಾದ ಬದುಕನ್ನು ಕಟ್ಟುಕೊಳ್ಳಬಹುದು. ಈ ಇನ್ಸ್ಪೈರ್ ಸ್ಕಾಲರ್ಶಿಪ್ ಯೋಜನೆಯ ಅರ್ಹತೆಗಳಲ್ಲಿ ಎಲ್ಲವೂ ಬಡವರ ಪಾಲಿಗೆ ಸಹಕಾರಿಯಾಗಿರುವುದರಿಂದ ನಮ್ಮ ದೇಶ ಮುಂದೊಂದು ದಿನ ಬಡತನ ನಿರ್ಮೂಲನ ಆಗಬೇಕು. ಈ ಇನ್ಸ್ಪೈರ್ ಸ್ಕಾಲರ್ಶಿಪ್ ಯೋಜನೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ  ನೀಡುವುದರಿಂದ ದೇಶದ ಭವಿಷ್ಯದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.

        ಧನ್ಯವಾದಗಳು.

WhatsApp Group Join Now
Telegram Group Join Now
Instagram Group Join Now

Hello friends, my name is Sanju, I am the Writer and Founder of this blog and I will share all the information related to Government Scemes, Blogging, SEO, Internet Review, WordPress, Make Money Online, News and Technology through this website.🔁

Leave a comment