ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ : ನಮ್ಮ ಸುತ್ತ ಮುತ್ತ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮನೆಯವರ ಬಡತನ ಅವರ ವಿದ್ಯಾಭ್ಯಾಸದ ಕನಸಿಗೆ ತಡೆಗೋಡೆಯಾಗಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಬಡಮಕ್ಕಳಿಗೆ ಪಾಲಿಗೆ ಸಹಾಯಕವಾಗಲಿ ಎಂದು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಇದರ ಉಪಯೋಗ ಪಡೆದುಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು ಎಂಬುದೇ ನನ್ನ ಆಸೆಯಾಗಿದೆ. ಇದರಿಂದಾಗಿ ವಿದ್ಯಾರ್ಥಿಯು ತನ್ನ ವಿದ್ಯಾಭ್ಯಾಸದಿಂದ ತನ್ನ ಮನೆಯವರಿಗೆ ತೊಂದರೆಯಾಗದಂತೆ ತನ್ನ ಆಸೆಯನ್ನು ಒಳ್ಳೆಯ ರೀತಿಯಲ್ಲಿ ಪೂರೈಸಿಕೊಂಡು ಒಂದು ಸುಸ್ಥಿರವಾದ ಬದುಕನ್ನು ಕಟ್ಟುಕೊಳ್ಳಬಹುದು.
ಇದನ್ನು ಓದಿ : ಕಾನ್ಸ್ಟೇಬಲ್ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ, 39,481 ಹುದ್ದೆಯ ನೇಮಕಾತಿ ಪ್ರಾರಂಭ.
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಕೊಡುವ ಸರ್ಕಾರದ ಮುಖ್ಯ ಉದ್ದೇಶಗಳೆಂದರೆ:-
1.ಶಿಕ್ಷಣಕ್ಕೆ ಪ್ರವೇಶ:
ಬಡ ಮಕ್ಕಳು ಹಾಗೂ ಹಿಂದೂಳಿದ ವರ್ಗದ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಪರಿಸ್ಥಿತಿಯಿಂದ ಹಾಗೂ ಮನೆಯ ಪರಿಸ್ಥಿತಿಯಿಂದ ವಿದ್ಯಾಭ್ಯಾಸದ ಕನಸಿನಿಂದ ದೂರವಿದ್ದಾರೆ. ಹೀಗಾಗಿ ಇದನ್ನು ಗಮನಿಸಿದ ಸರ್ಕಾರವು “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿಯೇ ಈ ಯೋಜನೆಯನ್ನು ಜಾರಿಗೋಳಿಸಿದೆ. ಪ್ರತಿಯೊಬ್ಬ ನಾಗರಿಕನು ಕೂಡ ವಿದ್ಯಾವಂತನಾಗಬೇಕು ಎಂಬ ಧ್ಯೇಯದೊಂದಿಗೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳೋಣ.
2.ಆರ್ಥಿಕ ಬೆಂಬಲ:-
“ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ” ಎಂಬ ಮಾತಿನಂತೆ ವಿದ್ಯೆಗಿಂತ ಮೇಲು ಯಾವುದೂ ಇಲ್ಲ ಹಾಗಾಗಿ ಸರ್ಕಾರವು ಅತಿಯಾದ ಹಣವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಭವಿಷ್ಯಕ್ಕೆ ಸ್ಕಾಲರ್ಷಿಪ್ ಮೂಲಕ ಹಣವನ್ನು ವ್ಯಯಮಾಡುತ್ತಿದೆ. ಮೂಲಭೂತ ಸೌಕರ್ಯದಿಂದ ವಂಚಿತರಾದ ಹಾಗೂ ಜೀವನದಲ್ಲಿ ಆರ್ಥಿಕ ಕಷ್ಟ ಎದುರಿಸುತ್ತಿರುವ ಮಕ್ಕಳಿಗೆ ಈ ಒಂದು ಯೋಜನೆಯು ಆಪ್ತ ಮಿತ್ರನೇ ಆಗಿದೆ.
3.ಮೌಲ್ಯಮಾಪನ:-
ವಿದ್ಯಾರ್ಥಿಗಳು ತಾವು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾದ ಕಾಲೇಜಿನಲ್ಲಿ ಕಲಿಯಲು ಹಣದ ಅವಶ್ಯಕತೆ ಬಹಳವಾಗಿದೆ. ಹಾಗಾಗಿ ಮಕ್ಕಳ ಒಂದು ಸುಸ್ಥಿರ ಭವಿಷ್ಯಕ್ಕೋಸ್ಕರ ಉತ್ತಮವಾದ ಕಾಲೇಜಿನಲ್ಲಿ ಓದಬೇಕು ಹಾಗೂ ತಮ್ಮ ಅತ್ಯಮೂಲ್ಯವಾದ ಮುಂದಿನ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರ ಈ ಯೋಜನೆ ಬಹಳ ಸಹಕಾರಿಯಾಗಿದೆ.
4.ಕೋಷ್ಟಕ ಸಮಾನತೆ:-
ನಮ್ಮ ಸಮಾಜದಲ್ಲಿ ಅನೇಕ ಬಗೆಯ ಜನಗಳಿದ್ದಾರೆ ವಿದ್ಯಾವಂತರು, ಅವಿದ್ಯಾವಂತರು, ಬಡವರು, ಶ್ರೀಮತರು ಇಂತಹ ಒಂದು ವ್ಯವಸ್ಥೆಗೆ ಸೂಕ್ತವಾದ ವ್ಯವಸ್ಥೆಯ ವಿದ್ಯಾಭ್ಯಾಸ ನೀಡುವುದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಬದುಕನ್ನು ಒಂದು ಸುವ್ಯವಸ್ಥೆಯ ರೀತಿಯಲ್ಲಿ ಕಟ್ಟಿಕೊಳ್ಳುತ್ತಾರೆ. ಇದರಿಂದಾಗಿ ನಮ್ಮ ದೇಶದ ಆರ್ಥಿಕತೆ ಹೆಚ್ಚುವುದರೊಂದಿಗೆ ನಮ್ಮ ಸಮಾಜದ ಎಲ್ಲಾ ವಿದ್ಯಾವಂತರಿಂದ ಕೂಡಿದ ವರ್ಗವಾಗುವುದರಲ್ಲಿ ಅನುಮಾನವಿಲ್ಲ.
5.ಸಾಮಾಜಿಕ ಅಭಿವೃದ್ಧಿ:-
ನಮ್ಮ ಸಮಾಜದಲ್ಲಿರುವ ಚಿನ್ನದಂತಹ ಮಕ್ಕಳಿಗೆ ವಿದ್ಯಾರ್ಥಿವೇತನದೊಂದಿಗೆ ಒಂದೊಳ್ಳೆಯ ಶಿಕ್ಷಣ ಕೊಡಿಸುವುದರ ಮೂಲಕ ಅವರಲ್ಲಿ ಒಂದೊಳ್ಳೆಯ ಆಲೋಚನೆಗಳನ್ನು ತುಂಬಬಹುದು. ಹೀಗಾಗಿ ಪ್ರತಿಯೊಬ್ಬರೂ ಕೂಡ ನೀತಿಯುತ ಶಿಕ್ಷಣ ಪಡೆದುಕೊಂಡು ಒಬ್ಬ ಉತ್ತಮ ನಾಗರೀಕನಾಗಿ ಹೊರಹೋಮ್ಮಬೇಕು ಎಂಬುದೇ ನನ್ನ ಅಭಿಮಾತವಾಗಿದೆ.
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳೆಂದರೆ:-
1.ಶಿಕ್ಷಣ ಮಟ್ಟ:-
ವಿದ್ಯಾರ್ಥಿಯು ಈ ಯೋಜನೆಯ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಲಾಭವನ್ನು ಪಡೆದುಕೊಳ್ಳಬೇಕಾದರೆ ಆ ವಿದ್ಯಾರ್ಥಿಯು ಹತ್ತನೇ ತರಗತಿಯ ಹಂತವನ್ನು ಮುಗಿಸಿರಬೇಕು ಮತ್ತು ಪದವಿ ಪೂರ್ವ ಅಥವಾ ಪದವಿಯನ್ನು ಹಂತವನ್ನು ತಲುಪಿರಬೇಕು. ಈ ಉನ್ನತ ಶಿಕ್ಷಣಕ್ಕೆ ಅತಿಯಾದ ಹಣದ ಅವಶ್ಯಕತೆ ಇರುವುದರಿಂದಾಗಿಯೇ ಸರ್ಕಾರವು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ನ ಸಹಾಯವನ್ನು ನೀಡುತ್ತಿದೆ.
2. ಶ್ರೇಣಿ ಪ್ರತಿಫಲ:-
ವಿದ್ಯಾರ್ಥಿಯು ಪ್ರತಿಭಾನ್ವಿತಾನಾಗಿದ್ದಾರೆ ಆತನು ಉತ್ತಮವಾದ ವಿದ್ಯಾಭ್ಯಾಸದೊಂದಿಗೆ ಮುಂದುವರೆಯಬಹುದು. ಇದನ್ನು ಗಮನದಲ್ಲಿರಿಸಿಕೊಂಡ ಸರ್ಕಾರವು ವಿದ್ಯಾರ್ಥಿಯು ಹೆಚ್ಚಿನ ಪ್ರತಿಫಲ ತೆಗೆದುಕೊಂಡರೆ ಹೆಚ್ಚಿನ ಸ್ಕಾಲರ್ಷಿಪ್ ನೀಡುತ್ತದೆ. ಉದಾಹರಣೆಗೆ ವಿದ್ಯಾರ್ಥಿಯೂ ಪ್ರತೀಶತ 50 ಅಥವಾ 60 ತೆಗೆದಿರಬೇಕು.
3.ಆದಾಯ ಮಿತಿಯಲ್ಲಿರುವ ಕುಟುಂಬ:-
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಮನೆಯ ಪರಿಸ್ಥಿತಿ ಹಾಗೂ ಮನೆಯ ಆದಾಯ ಕಡಿಮೆ ಇರಬೇಕು. ಆ ಆದಾಯದ ಮಿತಿಯು ಅಂತ ರಾಜ್ಯಕ್ಕೆ ಅನುಸಾರವಾಗಿ ಇರುತ್ತದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ಶಿಕ್ಷಣವನ್ನು ಕೊಡಿಸಬಹುದು.
4.ಜಾತಿ ಪ್ರಮಾಣ ಪತ್ರ:-
ಸರ್ಕಾರವು ಹಿಂದುಳಿದ ಜಾತಿಗಳಿಗೆ ಹಾಗೂ sc/st ಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಇಟ್ಟಿದೆ. ಇದರಿಂದಾಗಿ ಸೂಕ್ತ ಜಾತಿವರಿಗೆ ಸೂಕ್ತವಾದ ರೀತಿಯಲ್ಲಿ ಸ್ಕಾಲರ್ಷಿಪ್ ದೊರಬೇಕು ಎಂಬ ಧ್ಯೇಯದೊಂದಿಗೆ ಸರ್ಕಾರ ಈ ಯೋಜನೆಯನ್ನು ತೆರವುಗೋಳಿಸಿದೆ.
5.ಅರ್ಜಿ ಸಲ್ಲಿಸುವ ವೇಳೆಯಲ್ಲಿ:-
ಅರ್ಜಿ ಸಲ್ಲಿಸುವ ವೇಳೆಯಲ್ಲಿ ವಿದ್ಯಾರ್ಥಿಯು ತಾನು ಪ್ರಚಲಿತವಾಗಿಯೂ ವಿದ್ಯಾಭ್ಯಾಸ ಮಾಡುತ್ತಿದ್ದೇನೆ ಎಂಬ ಸಾಕ್ಷಿಗಾಗಿ ತಾನು ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನಲ್ಲಿ ತನ್ನ ಅಡ್ಮಿಶನ್ ದಾಖಲೆಗಳನ್ನು ನೀಡಬೇಕು.
ಈ ಮೇಲಿನ ಎಲ್ಲಾ ಅರ್ಹತೆಗಳು ಹಲವಾರು ರಾಜ್ಯಗಲ್ಲಿ ಬದಲಾಗಬಹುದು. ಹಾಗಾಗಿ ಸಂಬಂಧೀತ ಅಧಿಕೃತ ವೆಬ್ಸೈಟ್ಗಳಲ್ಲಿ ಹುಡುಕಿ ಅರ್ಜಿ ಸಲ್ಲಿಸಬಹುದು.
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಮಾಹಿತಿಗಳೆಂದರೆ:-
*ವಿದ್ಯಾರ್ಥಿಯು ತಾನು ಹಿಂದಿನ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಶ್ರೇಣಿ ಪತ್ರವನ್ನು ಸಲ್ಲಿಸತಕ್ಕದ್ದು ಇದರಿಂದಾಗಿ ವಿದ್ಯಾರ್ಥಿಯಲ್ಲಿ ಶಿಕ್ಷಣದ ಬಗ್ಗೆ ಇರುವ ಆಸಕ್ತಿಯನ್ನು ಗಮನಿಸಿ ವಿದ್ಯಾರ್ಥಿವೇತನ ನೀಡಲು ಸಹಕಾರಿಯಾಗುತ್ತದೆ.
*ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿವೇತನ ನೀಡುವುದರಿಂದ ವಿದ್ಯಾರ್ಥಿಯೂ ತನ್ನ ಮನೆಯ ಆರ್ಥಿಕತೆಯನ್ನು ಪ್ರತಿಬಿಂಬಿಸುವ ಆದಾಯ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು.
*ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಯ ಬಗ್ಗೆ ತುಂಬಿದ ಒಂದು ಅರ್ಜಿ ಫಾರಂ ಅನ್ನು ನೀಡತಕ್ಕದ್ದು. ಈ ಫಾರಂ ಅನ್ನು ವಿದ್ಯಾರ್ಥಿವೇತನಕ್ಕೆ ಸಂಬಂಧಿತ ಸಂಸ್ಥೆಯ ಅಥವಾ ಸರ್ಕಾರ ನೀಡುತ್ತದೆ.
*ವಿದ್ಯಾರ್ಥಿಯೂ ತಾನು ವಾಸಿಸುತ್ತಿರುವ ನಿವಾಸದ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿಗಳು ಆ ಊರಿನ ಗ್ರಾಮಪಂಚಾಯಿತಿಯಲ್ಲಿ ದೊರೆಯುತ್ತದೆ.
ವಿದ್ಯಾರ್ಥಿಯೂ ತನ್ನ ಬಳಿರುವ ಆರ್ಥಿಕ ಸ್ವತ್ತಿನ ಬಗ್ಗೆ ತಿಳಿಸತಕ್ಕದ್ದು ಇದರಿಂದಾಗಿ ಸರ್ಕಾರಕ್ಕೆ ವಿದ್ಯಾರ್ಥಿಯ ಆರ್ಥಿಕ ಮಾಹಿತಿಯನ್ನು ಸಂಪೂರ್ಣ ವಿವರ ದೊರಕುತ್ತದೆ.
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಪಡೆಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ👇
Conclusion
ಈ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತನ್ನ ಗುರಿಯನ್ನು ಸಾಧಿಸಿಕೊಳ್ಳಲು ಈ ಮೆಟ್ರಿಕ್ ಸ್ಕಾಲರ್ಷಿಪ್ ಯೋಜನೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಬಡ ವಿದ್ಯಾರ್ಥಿಯು ಸಹ ಈ ಯೋಜನೆಯನ್ನು ಒಂದೊಳ್ಳೆ ರೀತಿಯಲ್ಲಿ ಬಳಸಿಕೊಂಡು ತನ್ನ ಭವಿಷ್ಯವನ್ನು ಒಂದು ಸುಂದರವಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬುದೇ ನನ್ನ ಆಶಯವಾಗಿದೆ. ಬಡತನ ಹಾಗೂ ಆರ್ಥಿಕ ಪರಿಸ್ಥಿತಿ ಎಂಬುದು ಆನೇಕ ಮಕ್ಕಳಿಗಿರುವ ಪ್ರಮುಖ ಸಮಸ್ಯೆಯಾಗಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಮಸ್ಯೆಯನ್ನು ಗಮನಿಸಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಪಯೋಗವಾಗುವಂತೆ ಈ ಒಂದು ಯೋಜನೆಯನ್ನು ರೂಪಿಸಿದೆ. “ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು” ಎಂಬ ನಮ್ಮ ಹಿರಿಯರ ಮಾತಿನಂತೆ ಜೀವನದಲ್ಲಿ ಬಡತನ ಎಂಬುದು ಎಲ್ಲಗೂ ಇದ್ದಿದ್ದೇ, ಇದಕ್ಕೆ ತಲೆಕೆಡಿಸಿಕೊಳ್ಳದೆ ಇರುವುದನ್ನೇ ಧನತ್ಮಕವಾದ ರೀತಿಯಲ್ಲಿ ತೆಗೆದುಕೊಂಡು ಇರುವುದನ್ನೇ ಲಾಭದಾಯಕವಾಗಿ ಉಪಯೋಗಿಸಿಕೊಂಡು ತಮ್ಮ ಜೀವನವನ್ನು ಅತ್ಯಮೂಲ್ಯವಾದ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಎಂಬುದೇ ನನ್ನ ಅಭಿಪ್ರಾಯವಾಗಿದೆ.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು