ಪ್ರಧಾನ್ ಮಂತ್ರಿ ಆವಾಸ್ ಯೋಜನೆ : ಸಮಸ್ತ ಕರ್ನಾಟಕ ಜನತೆಗೆ ನನ್ನ ನಮಸ್ಕಾರಗಳು, ನಮ್ಮ ದೇಶದಲ್ಲಿ ಪ್ರಸ್ತುತ ಪ್ರಮುಖ ಸಮಸ್ಯೆ ಎಂದರೆ ಬಡತನ. ನಮ್ಮ ದೇಶದ ಹಲವಾರು ಜನರು ಮೂಲಭೂತ ಸೌಕರ್ಯಗಳಿಂದ ವಂಚಿತಾರಾಗಿದ್ದಾರೆ. ಹೀಗಾಗಿ ಇದನ್ನು ಗಮನಿಸಿದ ಪ್ರಧಾನ ಮಂತ್ರಿಯವರು ಬಡ ಜನಗಳಿಗೆ ಸಹಾಯಕವಾಗುವ ಯೋಜನೆಯನ್ನು ಜಾರಿಗೊಳಿಸಿದರು. “ಪ್ರಧಾನ್ ಮಂತ್ರಿ ಆವಾಸ್ ಯೋಜನೆ” ಈ ಯೋಜನೆಯ ಫಲನುಭವಿಯಾದ ಬಡಜನರು ಕೂಡಲೇ ಈ ಯೋಜನೆಯ ಲಾಭ ಪಡೆದು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂಬುದೇ ನನ್ನ ಇಚ್ಛೆಯಾಗಿದೆ.ಈ ಯೋಜನೆಯೂ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲನೀಡುವುದು ಹಾಗೂ ಮನೆ ನಿರ್ಮಾಣ ಮಾಡಿಕೊಡುವುದು ಈ ಯೋಜನೆಯ ಸಾರವಾಗಿದೆ.
ನಮ್ಮ ದೇಶದಲ್ಲಿ ಹಲವಾರು ಬಡ ಜನಗಳು ಸೂಕ್ತ ಆವಾಸ, ಮೂಲಭೂತ ಸೌಕರ್ಯಗಳಿಲ್ಲದೆ ಅನೇಕ ರೋಗಗಳಿಗೆ ಈಡಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ನೆಮ್ಮದಿಯುತ ಹಾಗೂ ಖಾಯಿಲೆಗಳಿಂದ ಮುಕ್ತವಾದ ಜೀವನವನ್ನು ನಡೆಸಬೇಕು ಎಂಬುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.ನಾನು ಈ ಲೇಖನದ ಮೂಲಕ ಸಮಸ್ತ ಕರ್ನಾಟಕ ಜನತೆಗೆ ತಿಳಿಸುವುದೇನೆಂದರೆ ನಮ್ಮ ದೇಶದಲ್ಲಿರುವ ಹಿಂದುಳಿದ ವರ್ಗ ಹಾಗೂ ಮನೆಯಿಲ್ಲದ ಬಡವರಿಗೆ ಮನೆ ಕಲ್ಪಿಸುವುದೆ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯೂ ಪ್ರಮುಖವಾಗಿ ಬಡವರಿಗೆ ನೆರವಾಗುವ ಆಶಯವನ್ನು ಹೊಂದಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು?
ಪ್ರಧಾನ್ ಮಂತ್ರಿ ಆವಾಸ್ 2.0 ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಛೆಸುವ ಅಭ್ಯರ್ಥಿಯೂ 18 ವರ್ಷ ಮೇಲ್ಪಟ್ಟಿರಬೇಕು. ಈ ಅಭ್ಯರ್ಥಿಯು ಸರ್ಕಾರದ ಸಹಾಯದಿಂದ ತನ್ನ ಮನೆಯನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಳ್ಳಬಹುದು.
ನಿವಾಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯೂ ಮಧ್ಯಮ ವರ್ಗದವನಾಗಿರಬೇಕು. ಅವನ ವಾರ್ಷಿಕ ಆದಾಯವು 2,50,000ವನ್ನು ಮೀರಬಾರದು(ಗ್ರಾಮೀಣ ಪ್ರದೇಶ) ಹಾಗೂ 3,00,000 (ನಗರ ಪ್ರದೇಶದಲ್ಲಿ ),ವಾರ್ಷಿಕ ಆದಾಯ ಕಡಿಮೆ ಇರುವ ಅಭ್ಯರ್ಥಿಯೂ ಮನೆ ಕಟ್ಟಲು ಬಹಳ ಕಷ್ಟಕರವಾಗುತ್ತದೆ, ಇದನ್ನರಿತ ಸರ್ಕಾರವು ಈ ಯೋಜನೆಯನ್ನು ಬಡವರ ಮಿತ್ರರಾಗಿ ಜಾರಿಗೊಳಿಸಿದೆ.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಭಾರತದ ಪ್ರಜೆಯಗಿರಬೇಕು. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೋಳಿಸಿರುವುದರಿಂದ ಭಾರತದ ಮಾಧ್ಯಮವರ್ಗದವರ ಅಥವಾ ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿಯೇ ಪರಿಚಯಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು ಕೂಡ ಈ ಯೋಜನೆಯ ಲಾಭ ಪಡೆದುಕೊಂಡು ತಮ್ಮ ಬದುಕನ್ನು ಸುಸ್ಥಿರವಾಗಿ ರೂಪಿಸಿಕೊಳ್ಳಬೇಕು ಎಂಬುದೇ ನನ್ನ ಅಭಿಮಾತವಾಗಿದೆ.
ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಗಂಡನನ್ನು ಕಳೆದುಕೊಂಡು ಕಷ್ಟಕರವಾದ ಜೀವನ ಸಾಗಿಸುವ ವಿಧವಾ ಮಹಿಳೆಯರಿಗೆ ಹಾಗೂ ತಾವು ಹುಟ್ಟುತ್ತಲೆ ಅಥವಾ ಮಧ್ಯದಲ್ಲಿ ವಿಕಲಚೇತನರಾಗುವ ಅಭ್ಯರ್ಥಿಗಳಿಗೆ ಹಾಗೂ ಅಶಕ್ತಾರಾದ ಹಿರಿಯ ನಾಗರಿಕರಿಗೆ ಈ ಯೋಜನೆಯು ವಿಶೇಷವಾದ ಆದ್ಯತೆ ನೀಡಲಾಗುವುದು.
ಇದನ್ನು ಓದಿ : ಲೇಬರ್ ಕಾರ್ಡ್ ಸ್ಕಾಲರ್ಶಿಪ್ : ಈಗಲೇ ಅರ್ಜಿ ಸಲ್ಲಿಸಿ ಹಾಗೂ 11,000₹ ವರೆಗೂ ಸ್ಕಾಲರ್ಶಿಪ್ ಪಡೆಯಿರಿ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಪ್ರಮುಖ ಉದ್ದೇಶಗಳೇನು?
ನಮ್ಮ ದೇಶದಲ್ಲಿ ವಿಶೇಷವಾಗಿ ನಗರ ಪ್ರದೇಶದಲ್ಲಿ ಸ್ಲಮ್ ನಿವಾಸಿಗಳಿಗೆ ಹಾಗೂ ಇನ್ನಿತರ ಬಡ ನಗರ ನಿವಾಸಿಗಳಿಗೆ ಈ ಯೋಜನೆಯೂ ದೊರಕಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಮುಖ್ಯವಾಗಿದೆ. ಭ್ರಷ್ಟಾಚಾರ ಪ್ರಸ್ತುತ ಸಮಯದಲ್ಲಿ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬ ನಾಗರಿಕನೂ ಕೂಡ ತನಗೋದಗಬೇಕಿರುವ ಸೌಲಭ್ಯಗಳು ಸರಿಯಾದ ಕ್ರಮದಲ್ಲಿ ದೊರಕಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
20ರ ದಶಕದ ವೇಳೆಗೆ ಕೇಂದ್ರ ಸರ್ಕಾರವು ಈ ಯೋಜನೆಗೆ ಅರ್ಹರಾದ ಎಲ್ಲಾ ಮಧ್ಯಮವರ್ಗದ ಹಾಗೂ ಹಿಂದುಳಿದ ಕುಟುಂಬಗಳಿಗೆ ಮನೆಗಳನ್ನು ಒದಗಿಸಲು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನುಷ್ಠಾನವನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಈ ಸೂಕ್ತ ಕ್ರಮವನ್ನು ಪ್ರತಿಯೊಬ್ಬ ನಿರಾಶ್ರಿತ ಭಾರತೀಯನೂ ಕೂಡ ಪಡೆದುಕೊಳ್ಳಬೇಕೆಂಬುದೇ ಈ ಲೇಖನದ ಆಶಯವಾಗಿದೆ.
ಕೇಂದ್ರ ಸರ್ಕಾರದ ಮುಖ್ಯ ಗುರಿಎಂದರೆ ಈ ಯೋಜನೆಯಡಿಯಲ್ಲಿ ನಿರ್ಮಿತವಾಗುವ ಪ್ರತಿಯೊಂದು ಮನೆಯೂ ಕೂಡ ಎಲ್ಲಾ ಮೂಲಭೂತ ಸೌಕರ್ಯದಿಂದ ಕೂಡಿರಬೇಕು ಎಂಬುದೇ ಈ ಯೋಜನೆಯ ಉದ್ದೇಶವಾಗಿದೆ. ನೀರಿನ ಸಂಪರ್ಕ, ಶೌಚಾಲಯ ಹಾಗೂ ವಿದ್ಯುತ್ ಮುಂತಾದ ಮೂಲಭೂತ ವ್ಯವಸ್ಥೆಯಿಂದ ಕೂಡಿದ ಮನೆಯನ್ನು ನಿರ್ಮಿಸುವುದೇ ಈ ಯೋಜನೆಯ ಪ್ರಮುಖ ನಿಲುವಾಗಿದೆ.
ನಗರ ಪ್ರದೇಶಗಳು ನೈರ್ಮಲ್ಯದಿಂದ ಕೂಡಿವೆಯೇ, ಕಸದಿಂದ ಹಾಗೂ ಅವ್ಯವಸ್ಥೆಯಿಂದ ನಿರ್ಮೂಲನೆ ಪಡೆದುಕೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ನಗರದಲ್ಲಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬ ಮಧ್ಯಮ ವರ್ಗದ ಅಭ್ಯರ್ಥಿಯು ಕೂಡ ಕೇಂದ್ರ ಸರ್ಕಾರದ ಈ ಯೋಜನೆಯ ಫಲವನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಾಪಡಿಸಿಕೊಳ್ಳಬೇಕು.
“ನಿಷ್ಠೆ ಮತ್ತು ಸ್ಮಾರ್ಟ್ ಹೋಂ “-ಈ ಯೋಜನೆಯಡಿಯಲ್ಲಿ ನಿರ್ಮಿತವಾಗುವ ಪ್ರತಿಯೊಂದು ಮನೆಯು ಕೂಡ ಪ್ರಕೃತಿಯ ವಿಘಟನೆಗಳಾದ ಭೂಕಂಪ, ಪ್ರವಾಹ, ಚಂಡಮಾರುತ ಮುಂತಾದ ವಿಕೋಪಗಳ ವಿರುದ್ಧದ ರಚನಾತ್ಮಕ ಸುರಕ್ಷತೆಯ ಕ್ರಮವನ್ನು ಉಪಯೋಗಿಸಿ ಮಾನವರ ಸುರಕ್ಷತೆಗೋಸ್ಕರ “ಶಾಶ್ವತ ಪರಿಸರ ಸ್ನೇಹಿ” ಮನೆಯನ್ನು ನಿರ್ಮಿಸಿದೆಯೇ ಎಂಬುದನ್ನು ಈ ಯೋಜನೆಯ ಉದ್ದೇಶ ಸ್ಪಷ್ಟಪಡಿಸುತ್ತದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅಗತ್ಯವಿರುವ ಮಾಹಿತಿಗಳು:-
ಅರ್ಜಿಯ ಪ್ರಕ್ರಿಯೆ:-
1. ಮೊದಲಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಮಾರ್ಗವನ್ನು ನಿರ್ಧಾರ ಮಾಡಿಕೊಳ್ಳಬೇಕು. ಅಭ್ಯರ್ಥಿಯು ತಾನು ಮನೆಯಲ್ಲಿಯೇ ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸೈಬರ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಇದರಿಂದಾಗಿ ಹಣವನ್ನು ಹಾಗೂ ಸಮಯವನ್ನು ಉಳಿತಾಯ ಮಾಡಬಹುದು.
2. ಎರಡನೆಯ ಅರ್ಜಿ ಸಲ್ಲಿಸುವ ಮಾರ್ಗವೆಂದರೆ ಆಫ್ ಲೈನ್ ಅರ್ಜಿ. ಈ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ಥಳೀಯ ಕಛೇರಿಗಳಿಗೆ ತೆರಳಿ ಅಲ್ಲಿ ಅರ್ಜಿಯನ್ನು ಹಾಕತಕ್ಕದ್ದು.
ಅರ್ಜಿದಾರನ ಮಾಹಿತಿ:-
ಆವಾಸ್ ಯೋಜನೆಯ ಫಲನುಭವಿಯಾದ ಅಭ್ಯರ್ಥಿಯು ಮೊದಲಿಗೆ ಅರ್ಜಿ ಫಾರಂ ನಲ್ಲಿ ತನ್ನ ಹೆಸರನ್ನು ನಮೂದಿಸಬೇಕು.
ತಾನು ವಾಸಿಸುತ್ತಿರುವ ಹಳ್ಳಿ ಅಥವಾ ನಗರ ಪ್ರದೇಶದ ವಿಳಾಸವನ್ನು ತಿಳಿಸಬೇಕು.
ಹಾಗೂ ತನ್ನ ಈಗಿನ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಅನ್ನು ನೀಡಬೇಕು.
ಯೋಜನೆಯ ಲಾಭ ಪಡೆದುಕೊಳ್ಳುವ ಅಭ್ಯರ್ಥಿಯು ಮೊದಲಿಗೆ ತನ್ನ ಪ್ರಸ್ತುತ ಚಾಲ್ತಿಯಲ್ಲಿರುವ ಇಮೇಲ್ ವಿಳಾಸವನ್ನು ನಮೂದಿಸಬೇಕು.
ಆರ್ಥಿಕ ಮಾಹಿತಿ:-
ಸರ್ಕಾರವು ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ನಿರ್ದಿಷ್ಟ ಅಭ್ಯರ್ಥಿ ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹನ್ನಾಗಿದ್ದಾನೆಯೇ ಎಂದು ತಿಳಿದಿಕೊಳ್ಳಲು ಅಭ್ಯರ್ಥಿಯು ತನ್ನ ವಾರ್ಷಿಕ ಆದಾಯ ಪತ್ರವನ್ನು ಸಲ್ಲಿಸಬೇಕು. ಹಾಗೂ ಅಭ್ಯರ್ಥಿಯ ಬಳಿ ಇರುವ ಆರ್ಥಿಕ ಸ್ವತ್ತುಗಳ ಬಗ್ಗೆ ತಿಳಿದುಕೊಳ್ಳಲು ತನ್ನ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ.
ಐಡಿ ಡಾಕ್ಯುಮೆಂಟ್:-
ಯೋಜನೇಯ ಫಲಾನುಭವಿಯಾದ ಅಭ್ಯರ್ಥಿಯು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ತನ್ನ ಅಗತ್ಯ ಮಾಹಿತಿಗಳನ್ನು ಸಲ್ಲಿಸಬೇಕು ಅವುಗಳೆಂದರೆ:-
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ಸ್ಥಳೀಯ ಗುರುತಿನ ಚೀಟಿ
ಮನೆಯ ಮಾಹಿತಿ
ಪ್ರಧಾನ್ ಮಂತ್ರಿ ಆವಾಸ್ ಯೋಜನೇಯನ್ನು ಪಡೆದುಕೊಳ್ಳಲು, ಅಭ್ಯರ್ಥಿಯು ಮನೆಯ ಸುಸ್ಥಿರತೆಯನ್ನು ತಿಳಿಸಬೇಕು. ಅಭ್ಯರ್ಥಿಯ ಮನೆಯ ಮೂಲಭೂತ ಸೌಕರ್ಯಗಳನ್ನು ಗಮನಿಸಿ ನಂತರ ಆ ಅಭ್ಯರ್ಥಿಯೂ ಈ ಯೋಜನೆಗೆ ಅರ್ಹನಾಗಿದ್ದರೆ ಅವನಿಗೆ ಮನೆಯನ್ನು ಕಟ್ಟಿಸಿಕೊಳ್ಳಲಾಗುತ್ತದೆ. ಹಾಗೂ ಇನ್ನಿತರ ಮನೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಹಾಜರೂಪಡಿಸಬೇಕು.
ಹೊರಟ ದಾಖಲೆಗಳು:-
ಅಂದರೆ ಅಭ್ಯರ್ಥಿಯ ಹೊರಗಿನ ಸಾಲದ ಬಗ್ಗೆ ತಿಳಿದುಕೊಳ್ಳಲು ತಾನು ಹೊರಗೆ ಬ್ಯಾಂಕಿನಿಂದ ಪಡೆದಿರುವ ಆರ್ಥಿಕ ಸಹಾಯದ ಬಗ್ಗೆ ತಿಳಿಸತಕ್ಕದ್ದು.
ಈ ಮೇಲ್ಕಂಡ ಎಲ್ಲಾ ಮಾಹಿತಿಗಳನ್ನು ಪೂರೈಸಿದ ನಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಧಾರಾಳವಾಗಿ ಈ ಯೋಜನೆಯನ್ನು ಪಡೆಯಬಹುದು. ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಬದುಕುತ್ತಿರುವ ಅನೇಕ ಬಡಜನರು ಈ ಒಂದು ಯೋಜನೆಯನ್ನು ಪಡೆದುಕೊಂಡು ತಮ್ಮ ಬದುಕನ್ನು ಒಂದು ಸುಸ್ಥಿರವಾದ ರೀತಿಯಲ್ಲಿ ಸಾಗಿಸಬಹುದು. ಏಕೆಂದರೆ ಸೂಕ್ತ ಆವಾಸವಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಹಲವಾರು ಜನರು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ತಮ್ಮ ದೇಹದ ಸದೃಢತೆಯನ್ನು ಕಳೆದುಕೊಂಡು ಅನೇಕ ಖಾಯಿಲೆಗಳಿಗೆ ಈಡಾಗುತ್ತಾರೆ. ಹಾಗಾಗಿ ಇದನ್ನೆಲ್ಲಾ ಗಮನಿಸಿದ ಸರ್ಕಾರ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಸುರಕ್ಷಿತವಾದ ಮನೆಯಲ್ಲಿ ವಾಸಮಾಡಬೇಕು ಎಂಬ ನಿಟ್ಟಿನಲ್ಲಿ ಈ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೋಳಿಸಿದೆ.
Conclusion
ನಮ್ಮ ಈ ಲೇಖನದ ಮೂಲಕ ಬಡಜನರಿಗೆ ಸಹಾಯಕವಾಗುವ ಒಂದು ಮಾಹಿತಿಯನ್ನು ನೀಡಿದ್ದೇವೆ. ಹಾಗಾಗಿ ಮೂಲಭೂತ ಸೌಕರ್ಯದಿಂದ ವಂಚಿತರಾದ ಪ್ರತಿಯೊಬ್ಬ ನಾಗರಿಕನು ಕೂಡ ಈ ಯೋಜನೆಯಿಂದ ನೈರ್ಮಲ್ಯದಿಂದ ಕೂಡಿದ ಸಧೃಡ ಮನೆಯನ್ನು ನಿರ್ಮಿಸಿಕೊಳ್ಳಬೇಕು. ನಮ್ಮ ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದರಿಂದ ಈ ಯೋಜನೆಯ ಮೂಲ ಫಲಾನುವಿಯಾದ ಬಡವರು ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ಈ ಮೇಲ್ಕಂಡ ಲೇಖನದ ಮಾಹಿತಿಗಳನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಧನ್ಯವಾದಗಳು