ಲೇಬರ್ ಕಾರ್ಡ್ ಸ್ಕಾಲರ್ಶಿಪ್ : ರಾಜ್ಯದ್ಯಂತ ಕರ್ನಾಟಕ ಜನತೆಗೆ ನನ್ನ ನಮಸ್ಕಾರಗಳು ಸ್ನೇಹಿತರೆ ನೀವು ಈ ಆರ್ಟಿಕಲ್ ಅನ್ನು ಪೂರ್ಣವಾಗಿ ಓದಿದ ನಂತರ ನಿಮಗೆ ಒಂದು ಒಳ್ಳೆಯ ಸಂದೇಶ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ. ಈ ಆರ್ಟಿಕಲ್ ನಿಂದ ನಿಮಗೆ ಖಂಡಿತವಾಗಿಯೂ ಉಪಯೋಗವಾಗುತ್ತದೆ. ನಾನು ಈ ಆರ್ಟಿಕಲ್ ಮುಖಾಂತರ ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ನು ಹೇಗೆ ತೆಗೆದುಕೊಳ್ಳುವುದು ಎಂದು ತಿಳಿಸಿಕೊಡುತ್ತೇನೆ. ನಿಮ್ಮ ಹತ್ತಿರ ಲೇಬರ್ ಕಾರ್ಡ್ ಇದ್ದಿತೆಂದರೆ ನೀವು ಈ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಬಹುದಾಗಿರುತ್ತದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಎಂದರೇನು ?
ಮೊದಲಿಗೆ ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಏನೆಂದರೆ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಕೈಗೊಂಡ ಒಂದು ಉಪಯುಕ್ತಕರವಾದ ಒಂದು ಯೋಜನೆ ಆಗಿದೆ.
ಇದರಿಂದ ಎಷ್ಟೋ ಬಡ ಮಕ್ಕಳಿಗೆ ಓದುವ ಆಸೆಗೆ ಜೀವ ನೀಡಿದಂತಾಗಿದೆ. ಎಷ್ಟೋ ಬಡ ಮಕ್ಕಳಿಗೆ ಓದುವ ಆಸೆ ಆಕಾಂಕ್ಷೆಗಳು ತುಂಬಾ ಇರುತ್ತವೆ ಆದರೆ ಮನೆಯ ಕಷ್ಟಗಳನ್ನು ತಮ್ಮ ಕಣ್ಣಾರೆ ಕಂಡ ಮಕ್ಕಳು ಓದುವುದನ್ನು ಬಿಟ್ಟು ಬಾಲಕಾರ್ಮಿಕರಾಗಿ ಹೋಗುತ್ತಾರೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕೂಲಿ ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವರ್ಷಕ್ಕೆ ಒಮ್ಮೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಎಂಬ ಒಂದು ಉತ್ತಮವಾದ ಯೋಜನೆಯನ್ನು ಕೈಗೊಂಡಿದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ನು ಯಾರಿಗೆ ಎಷ್ಟು ಕೊಡುತ್ತಾರೆ ?
ಸ್ನೇಹಿತರೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ನು ಅವರವರ ಶಿಕ್ಷಣಕ್ಕೆ ತಕ್ಕ ಹಾಗೆ ಕೊಡುತ್ತಾರೆ. ಯಾವ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವ ಯಾವ ತರಹ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಕೊಡುತ್ತಾರೆ ಎಂಬುದನ್ನು ಕೆಳಗಡೆ ನೀಡಿದ್ದೇನೆ.
ಒಂದರಿಂದ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 1,100 ರೂಪಾಯಿಗಳನ್ನು ನೀಡಲಾಗುತ್ತದೆ.
ಐದನೇ ತರಗತಿಯಿಂದ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 1,250 ರೂಪಾಯಿಗಳನ್ನು ನೀಡಲಾಗುತ್ತದೆ.
9ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ 3,000 ರೂಪಾಯಿಗಳನ್ನು ನೀಡಲಾಗುತ್ತದೆ.
ಮೊದಲನೇ ಪಿಯುಸಿ ಹಾಗೂ ಎರಡನೇ ಪಿಯುಸಿ ವಿದ್ಯಾರ್ಥಿಗಳಿಗೆ 4,600 ರೂಪಾಯಿಗಳನ್ನು ನೀಡಲಾಗುತ್ತದೆ.
ಬಿ ಇ(BE) ಮತ್ತು ಬಿ ಟೆಕ್(B Tech) ಮಾಡುವ ವಿದ್ಯಾರ್ಥಿಗಳಿಗೆ 10,000 ರೂಪಾಯಿಗಳನ್ನು ನೀಡಲಾಗುತ್ತದೆ.
ಮಾಸ್ಟರ್ ಡಿಗ್ರಿ(Master Degree) ಮಾಡುವವರಿಗೂ ಕೂಡ 10,000 ರೂಪಾಯಿ ನೀಡಲಾಗುತ್ತದೆ.
ಐಟಿಐ(ITI) ಮಾಡುವ ವಿದ್ಯಾರ್ಥಿಗಳಿಗೆ 4,600 ರೂಪಾಯಿ ನೀಡಲಾಗುತ್ತದೆ.
ಬಿ ಎಸ್ ಸಿ ನರ್ಸಿಂಗ್ (BSc Nursing) ಮತ್ತು ಪ್ಯಾರಾ ಮೆಡಿಕಲ್(Paramedical) ಮಾಡುವ ವಿದ್ಯಾರ್ಥಿಗಳಿಗೆ 10,000 ರೂಪಾಯಿ ಗಳನ್ನು ನೀಡಲಾಗುತ್ತದೆ
ಎಂ ಬಿ ಬಿ ಎಸ್(MBBS) ಮಾಡುವ ವಿದ್ಯಾರ್ಥಿಗಳಿಗೆ 11,000 ರೂಪಾಯಿಗಳನ್ನು ನೀಡಲಾಗುತ್ತದೆ.
ಎಲ್ ಎಲ್ ಬಿ(LLB) ಮಾಡುವ ವಿದ್ಯಾರ್ಥಿಗಳಿಗೆ 10,000 ನೀಡಲಾಗುತ್ತದೆ
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನೀಡುವುದಕ್ಕೆ ಕಾರಣ.
ಸ್ನೇಹಿತರೆ ಗೌರ್ನಮೆಂಟ್ ಪ್ರತಿವರ್ಷವೂ ಯಾವುದಾದರೂ ಒಂದಲ್ಲ ಒಂದು ರೀತಿಯಲ್ಲಿ ಬಡ ಮಕ್ಕಳಿಗೆ ಓದುವುದಕ್ಕಾಗಿ ಯಾವುದಾದರೂ ಒಂದು ರೂಪದಲ್ಲಿ ಸಹಾಯ ಖಂಡಿತವಾಗಲೂ ಮಾಡುತ್ತದೆ. ಆ ಸಹಾಯದಲ್ಲಿ ಲೇಬರ್ ಕಾರ್ಡ್ ವಿದ್ಯಾರ್ಥಿವೇತನವು ಒಂದಾಗಿದೆ.
ಈ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ನೀಡುವುದಕ್ಕೆ ಕಾರಣವೇನೆಂದರೆ ಎಷ್ಟೋ ಬಡ ಕುಟುಂಬದಿಂದ ಬಂದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಬೇಕೆಂಬ ಮನೋಭಾವದಿಂದ ಗೌರ್ಮೆಂಟ್ ಈ ಸ್ಕಾಲರ್ಶಿಪ್ ಅನ್ನು ಜಾರಿಗೆ ತಂದಿದೆ. ಸ್ನೇಹಿತರೆ ಈ ಸ್ಕಾಲರ್ಶಿಪ್ ಸುಮಾರು ಐದು ವರ್ಷಗಳಿಗಿಂತ ಹಿಂದಿಯೆ ಜಾರಿಗೆ ಬಂದಿದೆ ಆದರೆ ಇದರ ಉಪಯೋಗವನ್ನು ಯಾರು ಪಡೆದುಕೊಳ್ಳುತ್ತಿಲ್ಲ ಕಾರಣವೇನೆಂದರೆ ಅವರಿಗೆ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡುವ ವಿಧಾನ ಸರಿಯಾಗಿ ತಿಳಿಯದೆ ಇರುವುದೇ ದೊಡ್ಡ ಕಾರಣವಾಗಿದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲೇಬೇಕೆ ?
ಸ್ನೇಹಿತರೆ ನಿಮಗೆ ಕಾಡುವ ಒಂದು ಪ್ರಶ್ನೆ ಏನೆಂದರೆ ಈ ಸ್ಕಾಲರ್ಶಿಪ್ ಗಳಿಗೆಲ್ಲ ಅರ್ಜಿ ಸಲ್ಲಿಸುವ ಅಗತ್ಯವೇನಿದೆ ? ಗವರ್ನಮೆಂಟ್ ಅರ್ಜಿ ಸಲ್ಲಿಸದೆ ಡೈರೆಕ್ಟಾಗಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದಲ್ಲವ ಎಂದು.
ನಿಮಗೆ ಈ ಪ್ರಶ್ನೆ ಕಾಡಿರಬಹುದು ಆದರೆ ಅದಕ್ಕೆ ಆದಂತ ಒಂದು ನಿಯಮಗಳು ಮತ್ತು ಪರಿಷತ್ತುಗಳು ಇರುತ್ತದೆ. ಅದನ್ನು ನಾವು ಪಾಲಿಸಿದರೆ ಖಂಡಿತವಾಗಿಯೂ ನಮಗೆ ಸ್ಕಾಲರ್ಶಿಪ್ ದೊರೆಯುತ್ತದೆ. ಕೆಲವರು ಇದು ನಿಜವಲ್ಲ ಸುಳ್ಳು ಮಾಹಿತಿ ಎಂದೆಲ್ಲ ಹೇಳುತ್ತಾರೆ ಖಂಡಿತವಾಗಿಯೂ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಫೇಕ್ ಮಾಹಿತಿ ಆಗಿರುವುದಿಲ್ಲ. ಇದಕ್ಕೆ ನೀವು ಅಪ್ಲೈ ಮಾಡಿದರೆ ನೀವು ಒಬ್ಬ ಕೂಲಿ ಕಾರ್ಮಿಕರ ಮಗಳು ಅಥವಾ ಮಗನಾಗಿದ್ದರೆ ಖಂಡಿತವಾಗಿಯೂ ನಿಮಗೆ ಈ ಸ್ಕಾಲರ್ಶಿಪ್ ದೊರಕುತ್ತದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾಗಿರುವ ವಿದ್ಯಾರ್ಹತೆ.
ಸ್ನೇಹಿತರೆ ಈ ಸ್ಕಾಲರ್ಶಿಪ್ ದೊರಕಬೇಕಾಗಿದ್ದರೆ ನೀವು ದೊಡ್ಡ ದೊಡ್ಡ ಡಿಗ್ರಿ ಮಾಡುವ ಅವಶ್ಯಕತೆ ಖಂಡಿತವಾಗಿಯೂ ಇರುವುದಿಲ್ಲ. ನಿಮಗೆ ಈ ಸ್ಕಾಲರ್ಶಿಪ್ ಬೇಕೆಂದರೆ ನೀವು ಕೇವಲ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಸಹ ನಿಮಗೆ ಸಿಗುತ್ತದೆ ಮತ್ತು ನೀವು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಸಹ ಸಿಗುತ್ತದೆ ಹಾಗೂ ನೀವು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಕೂಡ ಸಿಗುತ್ತದೆ ಹಾಗೂ ನೀವು ಸೆಕೆಂಡ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಕೂಡ ಸಿಗುತ್ತದೆ. ಅದೇ ತರಹ ನೀವು ಡಿಗ್ರಿ ಮಾಡುತ್ತಿದ್ದರು ಕೂಡ ನಿಮಗೆ ಈ ಸ್ಕಾಲರ್ಶಿಪ್ ದೊರಕುತ್ತದೆ.
ಸ್ನೇಹಿತರೆ ನಿಮಗೆ ಈ ಸ್ಕಾಲರ್ಶಿಪ್ ಸಿಕ್ಕಬೇಕೆಂದರೆ ಮೊದಲಿಗೆ ನೀವು ಭಾರತದ ಪ್ರಜೆಯಾಗಿರಬೇಕು.
ಹಾಗೂ ನೀವು ಯಾವುದಾದರೂ ಒಂದು ಲೋಕಲ್ ಗವರ್ನಮೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಯಾವುದಾದರೂ ಒಂದು ಗೌರ್ನಮೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ನೀವು ಇದೆರಡು ನಿಯಮಗಳಿಗೆ ಬದ್ಧರಾಗಿದ್ದರೆ ನಿಮಗೆ ಖಂಡಿತವಾಗಿಯೂ ಈ ಸ್ಕಾಲರ್ಶಿಪ್ ಸಿಗುವುದರಲ್ಲಿ ಅನುಮಾನವೇ ಇಲ್ಲ.
ಗಮನಿಸಿ : ಸ್ನೇಹಿತರೆ ನಿಮ್ಮಲ್ಲಿ ಕೆಲವು ಜನರಿಗೆ ಲೇಬರ್ ಕಾರ್ಡ್ ಹೇಗೆ ಇರುತ್ತದೆ ಎಂಬುದು ಕೂಡ ತಿಳಿಯದೆ ಇರುತ್ತದೆ ಅಥವಾ ಕೆಲವರು ಲೇಬರ್ ಕಾರ್ಡನ್ನೇ ಮಾಡಿಸಿರುವುದಿಲ್ಲಾ ಇತರ ನಿಮಗೆ ಸಮಸ್ಯೆ ಇದ್ದಲ್ಲಿ ಆದಷ್ಟು ಬೇಗ ಬೇಗ ಲೇಬರ್ ಕಾರ್ಡನ್ನು ನಿಮ್ಮ ಹತ್ತಿರದಲ್ಲಿರುವ ಸೈಬರ್ ಗೆ ಹೋಗಿ ಮಾಡಿಸಿಕೊಳ್ಳಿ ಇದರಿಂದ ನಿಮಗೆ ಮುಂದೆ ಒಳ್ಳೆಯ ಉಪಯೋಗವಾಗುತ್ತದೆ.
ಇದನ್ನು ಓದಿ : ಕಾನ್ಸ್ಟೇಬಲ್ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ, 39,481 ಹುದ್ದೆಯ ನೇಮಕಾತಿ ಪ್ರಾರಂಭ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಬೇಕಾಗಿರುವ ನಿಮ್ಮ ಪೋಷಕರ ಡಾಕುಮೆಂಟ್ಸ್ ಗಳು.
ಈ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ನೀವು ಅಪ್ಲೈ ಮಾಡುವುದಕ್ಕೆ ನಿಮ್ಮ ಪೇರೆಂಟ್ಸ್ ಡಾಕುಮೆಂಟ್ ಏನೇನು ಬೇಕೆಂದರೆ ?
ಮೊದಲನೆಯದಾಗಿ ಲೇಬರ್ ಕಾರ್ಡ್ ಖಂಡಿತವಾಗಿಯೂ ಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಹತ್ತಿರ ಲೇಬರ್ ಕಾರ್ಡ್ ಇಲ್ಲವೆಂದರೆ ನೀವು ಈ ಸ್ಕಾಲರ್ಶಿಪ್ ಗೆ ಅಪ್ಲಿಕೇಶನ್ ಹಾಕುವುದಕ್ಕೆ ಅರ್ಹರಾಗಿರುವುದಿಲ್ಲ.
ಮತ್ತು ನಿಮ್ಮ ಪೋಷಕರ ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೆ. ಆದಾಯ ಪ್ರಮಾಣ ಪತ್ರದಲ್ಲಿ 35 ಸಾವಿರದ ಒಳಗಡೆ ಇರಬೇಕಾಗುತ್ತದೆ ಒಂದು ವೇಳೆ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ ನಿಮಗೆ ಈ ವಿದ್ಯಾರ್ಥಿ ವೇತನವು ಸಿಗುವುದಿಲ್ಲ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಬೇಕಾಗಿರುವ ವಿದ್ಯಾರ್ಥಿಗಳ ಡಾಕುಮೆಂಟ್ಸ್ ಗಳು.
ನೀವು ಈ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅಪ್ಲೈ ಮಾಡಬೇಕಾದರೆ ನೀವು ಮೊದಲು ವಿದ್ಯಾರ್ಥಿಯೆಂದು ಅವರಿಗೆ ಖಚಿತ ಪಡಿಸಿಕೊಳ್ಳಬೇಕು. ಅದಕ್ಕೆ ನಿಮ್ಮ ಹತ್ತಿರ ವಿದ್ಯಾರ್ಥಿ ವೈಯುಕ್ತಿಕ ವಿವರಗಳು ಹಾಗೂ ಶೈಕ್ಷಣಿಕ ವಿವರಗಳನ್ನು ಒಳಗೊಂಡಿರುವ ಅರ್ಜಿ ಇರಬೇಕಾಗುತ್ತದೆ.
ಮತ್ತು ನಿಮ್ಮ ಆಧಾರ್ ಕಾರ್ಡ್ ಇರಬೇಕಾಗುತ್ತದೆ.
ಮತ್ತು ನಿಮ್ಮ ಮಾರ್ಕ್ಸ್ ಕಾರ್ಡ್ ಇರಬೇಕಾಗುತ್ತದೆ.
ಹಾಗೂ ನಿಮ್ಮ ಬ್ಯಾಂಕ್ ಪಾಸ್ ಬುಕ್ ನಿಮ್ಮ ಕೈಯಲ್ಲಿ ಇರಬೇಕಾಗುತ್ತದೆ.
ಇದಿಷ್ಟು ನಿಮ್ಮ ಬಳಿ ಇದ್ದಿತಂದರೆ ನೀವು ಸುಲಭವಾಗಿ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದಾಗಿದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ?
ನೀವು ಈ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದಕ್ಕಾಗಿ ಸೈಬರ್ ಗೆ ಹೋಗಿ ಕೂಡ ಸಲ್ಲಿಸಬಹುದಾಗಿದೆ ಅಥವಾ ನೀವು ನಿಮ್ಮ ದುಡ್ಡನ್ನು ಖರ್ಚು ಮಾಡದೆ ನಿಮ್ಮ ಫೋನಲ್ಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನೀವು ಸೈಬರ್ ಗೆ ಹೋಗಿ ಸಲ್ಲಿಸುವುದಕ್ಕಿಂತ ನಿಮ್ಮ ಫೋನಿನಲ್ಲೇ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಉತ್ತಮ. ಒಂದು ವೇಳೆ ನಿಮಗೆ ಅರ್ಜಿಯನ್ನು ಸಲ್ಲಿಸುವ ವಿಧಾನ ತಿಳಿಯದೆ ಇದ್ದಲ್ಲಿ ಸೈಬರ್ ಗೆ ಹೋಗಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ತಿಳಿತೆಂದರೆ ನಾನು ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೂಲ ಜಾಲತಾಣಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ.
WEBSITE LINK : ಇಲ್ಲಿ ಕ್ಲಿಕ್ ಮಾಡಿ
Conclusion
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಎಂಬುದು ಕೆಲಸಗಾರ ಕುಟುಂಬದ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಮಹತ್ವದ ಯೋಜನೆಯಾಗಿದೆ. ದೇಶದ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸೃಷ್ಟಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಆರಂಭಿಸಿದ್ದು, ಈ ಸ್ಕಾಲರ್ಶಿಪ್ ಕೂಡ ಅದರ ಭಾಗವಾಗಿದೆ. ಈ ಸ್ಕಾಲರ್‌ಶಿಪ್ ಯೋಜನೆಯು, ವಿಶೇಷವಾಗಿ ಕಡಿಮೆ ಆದಾಯವಿರುವ ಕುಟುಂಬಗಳಿಗೆ ಬಲ ನೀಡಲು ರೂಪಿಸಲಾಗಿದೆ, ವಿಶೇಷವಾಗಿ ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶವನ್ನು ನೀಡುತ್ತದೆ.
ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣದಲ್ಲಿ ಸೃಜನಾತ್ಮಕತೆ ಮತ್ತು ಉನ್ನತ ಮಟ್ಟದ ಪರಿಣತಿ ಸಾಧಿಸಲು ಸೂಕ್ತ ಅವಕಾಶಗಳನ್ನು ಒದಗಿಸುತ್ತದೆ. ಶಿಕ್ಷಣದ ಹಕ್ಕು ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಈ ಯೋಜನೆ, ಸಮಾಜದಲ್ಲಿ ಸಮಾನತೆ ಮತ್ತು ಸಮತೋಲವನ್ನು ಸಾಧಿಸಲು ಅತ್ಯಂತ ಪ್ರಾಮುಖ್ಯವಾಗಿದೆ. ಬಡ ಕುಟುಂಬಗಳ ಮಕ್ಕಳಿಗೆ ಈ ಸ್ಕಾಲರ್‌ಶಿಪ್ ನೀಡುವುದರಿಂದ ಅವರು ತಮ್ಮ ಜೀವನವನ್ನು ಸುಧಾರಿಸಲು, ಉತ್ತಮ ಕೆಲಸಗಳ ಅವಕಾಶವನ್ನು ಪಡೆಯಲು, ಮತ್ತು ತಮ್ಮ ಸಮಾಜದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
ಈ ಸ್ಕಾಲರ್‌ಶಿಪ್‌ಗಳ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ, ಏಕೆಂದರೆ ಆರ್ಥಿಕ ಅಡ್ಡಿಗಳು ಕಡಿಮೆಯಾಗುತ್ತವೆ. ವಿದೇಶಗಳಲ್ಲಿ ಕೂಡ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ನ್ನು ಪಡೆದು ತಮ್ಮ ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಬಹುದು.
ತಿರುಳುವಾಗಿ ಹೇಳುವುದಾದರೆ, ಲೇಬರ್ ಕಾರ್ಡ್ ಸ್ಕಾಲರ್‌ಶಿಪ್ ಅವಶ್ಯಕತೆಯುಳ್ಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಮಾರ್ಗದರ್ಶಕವಾಗಿದ್ದು, ಆರ್ಥಿಕ ಸಮಾನತೆಯನ್ನು ಸಾಧಿಸಲು ಸಹಕಾರಿಯಾಗುತ್ತದೆ.
ಧನ್ಯವಾದಗಳು.