ಕಾನ್ಸ್ಟೇಬಲ್ ಹುದ್ದೆ : ರಾಜ್ಯದ್ಯಂತ ಕರ್ನಾಟಕ ಜನತೆಗೆ ನನ್ನ ನಮಸ್ಕಾರಗಳು. ಸ್ನೇಹಿತರೆ ನಿಮಗೀಗಾಗಲೇ ತಿಳಿದಿರಬಹುದು, ಈ ಆರ್ಟಿಕಲ್ ನಲ್ಲಿ ನಾನು ಏನನ್ನು ತಿಳಿಸಲು ಹೊರಟಿದ್ದೇನೆ ಎಂದು. ಒಂದು ವೇಳೆ ತಿಳಿಯದಿದ್ದಲ್ಲಿ ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿಕೊಂಡು ಅರ್ಥ ಮಾಡಿಕೊಳ್ಳಿ. ಸ್ನೇಹಿತರೆ ಸ್ಟಾಪ್ ಸೆಲೆಕ್ಷನ್ ಕಮಿಷನ್ ರವರು ಸುಮಾರು 39,481 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಬಿಟ್ಟಿದ್ದಾರೆ ಅದಕ್ಕೆ ಹೇಗೆ ಅಪ್ಲೈ ಮಾಡುವುದು ಎಂದು ಈ ಆರ್ಟಿಕಲ್ ಮುಖಾಂತರ ವಿವರವಾಗಿ ತಿಳಿಸಿಕೊಡುತ್ತೇನೆ.
ಕಾನ್ಸ್ಟೇಬಲ್ ಹುದ್ದೆಯ ಬಗ್ಗೆ ಹೆಚ್ಚು ಮಾಹಿತಿ.
“ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ” (SSC) ಈ ವರ್ಷವೂ ಪ್ರತಿ ವರ್ಷದಂತೆ ಬೃಹತ್ ಪ್ರಮಾಣದಲ್ಲಿ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿ ನಡೆಸಲು ಅಧಿಸೂಚನೆ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ವಿವಿಧ ರಕ್ಷಣಾ ಪಡೆಗಳು, ಉದಾಹರಣೆಗೆ ಅಸ್ಸಾಂ ರೈಫಲ್ಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಟ್ಟು 39,481 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯ ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು, ಆಯ್ಕೆಯಾದವರಿಗೆ ನೀಡುವ ವೇತನದ ವಿವರಗಳು, ಅರ್ಜಿ ಸಲ್ಲಿಕೆಗೆ ಮುಖ್ಯ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್‌ಗಳ ಮಾಹಿತಿ ಕೆಳಗಡೆ ಕೊಟ್ಟಿದ್ದೇನೆ.
ಇದನ್ನು ಓದಿ : ಸಂತೂರ್ ಸ್ಕಾಲರ್‌ಶಿಪ್: ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಿಗಲಿದೆ 24,000 ಸ್ಕಾಲರ್ಶಿಪ್ ಈಗಲೇ ಅಪ್ಲೈ ಮಾಡಿ.
ಕಾನ್ಸ್ಟೇಬಲ್ ಹುದ್ದೆಯ ಉಪಯೋಗ
ಸ್ನೇಹಿತರೆ ನಿಮಗೆ ತಿಳಿದೇ ಇರಬಹುದು, ನಮ್ಮ ಭಾರತದಲ್ಲಿ ನಮಗೆ ಓದಿದ ತಕ್ಕ ಹಾಗೆ ಕೆಲಸ ಸಿಗುವುದು ಬಹಳ ಕಡಿಮೆ ಅದಕ್ಕೆ ನಾವು ನಮ್ಮ ಗುರಿಯನ್ನು ಪಕ್ಕದಲ್ಲಿ ಇಟ್ಟು ಸದ್ಯಕ್ಕೆ ಸಿಂಪಲ್ ಆಗಿ ಸಿಗುವಂತಹ ಕೆಲಸದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಯಾವುದಾದರು ಒಂದು ಕೆಲಸ ಸಿಕ್ಕಿದರೆ ಅದು ಗೌರ್ಮೆಂಟ್ ಕೆಲಸ ಸಿಕ್ಕಿತೆಂದರೆ ಮುಂದೆ ಬೇಕಾದರೆ ನಮ್ಮ ಗುರಿಯ ಕಡೆಗೆ ಗಮನವನ್ನು ಹರಿಸಬಹುದು ಆದರೆ ಮೊದಲು ನಾವು ನಮ್ಮ ಗುರಿಯ ಕಡೆಗೆ ಗಮನಹರಿಸಿದ್ದೆ ಆದರೆ ಆ ಕೆಲಸ ಸಿಗಲಿಲ್ಲವೆಂದರೆ ನಮಗೆ ತುಂಬಾ ನೋವಾಗುತ್ತದೆ.
ಅದರಲ್ಲೂ ಮಿಡಲ್ ಕ್ಲಾಸ್ ಹುಡುಗರಿಗೆ ಮಾತ್ರ ತುಂಬಾ ಅಂದರೆ ತುಂಬಾ ಮನಸ್ಸಿಗೆ ದುಃಖವಾಗುತ್ತದೆ. ಆ ಕಾರಣಕ್ಕೆ ಮೊದಲು ಯಾವುದಾದರೂ ಒಂದು ಗೌರ್ಮೆಂಟ್ ಜಾಬ್ ಅನ್ನು ಖಚಿತಪಡಿಸಿಕೊಳ್ಳಬೇಕು ತದನಂತರ ನಮ್ಮ ಗುರಿಯ ಕಡೆಗೆ ಗಮನ ಕೊಟ್ಟಿತು ಎಂದರೆ ನಮಗೆ ಬೇಕಾದ ಜಾಬ್ ಅನ್ನು ತೆಗೆದುಕೊಳ್ಳಬಹುದು ಇಲ್ಲವಾದಲ್ಲಿ ನಮಗೆ ಮೊದಲೇ ಸಿಕ್ಕಿರುವ ಜಾಬ್ ಅನ್ನು ಬೇಕಾದರೂ ಮಾಡಬಹುದಾಗಿರುತ್ತದೆ.
ಒಂದು ವೇಳೆ ನೀವು ನಿಮ್ಮ ಆಸಕ್ತಿಯನ್ನೆಲ್ಲ ನಿಮ್ಮ ಗುರಿಯ ಕಡೆಗೆ ಇಟ್ಟುಕೊಂಡು ಬೇರೆ ಯಾವ ಕೆಲಸಕ್ಕೂ ಟ್ರೈ ಮಾಡದೆ ಹೋದಲ್ಲಿ ನಿಮಗೆ ನಿಮ್ಮ ಗುರಿ ತಲುಪಲು ಸಾಧ್ಯವಾಗದೇ ಇದ್ದಾಗ ಮುಂದೆ ನೀವು ಜೀವನ ನಡೆಸುವುದು ಬಹಳ ಕಷ್ಟವಾಗುತ್ತದೆ.
ನೀವು ಎಷ್ಟೇ ವಿದ್ಯಾವಂತರಾಗಿದ್ದರು ಕೂಡ ನಿಮ್ಮ ಹತ್ತಿರ ಎಷ್ಟೇ ಟ್ಯಾಲೆಂಟ್ ಇದ್ದರೂ ಕೂಡ ಕೊನೆಗೆ ನಿಮಗೆ ಮಾಡುವುದಕ್ಕೆ ಒಂದು ಕೆಲಸವೂ ಕೂಡ ಸಿಗದೇ ಇರುವಂತಾಗುತ್ತದೆ ಆದ ಕಾರಣ ನೀವು ಯಾವುದಾದರು ಗೌರ್ನಮೆಂಟ್ ಕೆಲಸ ಮಾಡಿಕೊಂಡು ನಿಮ್ಮ ಗುರಿಯ ಕಡೆಗೆ ಗಮನ ಕೊಡಿ.
ಕಾನ್ಸ್ಟೇಬಲ್ ಹುದ್ದೆಯ ಒಟ್ಟು ಸಂಖ್ಯೆ.
ಸ್ನೇಹಿತರೆ ನಿಮಗೆ ತಿಳಿದಿರಲಿ 39,481 ಕಾನ್ಸ್ಟೇಬಲ್ ಹುದ್ದೆಗಳನ್ನು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಪುರುಷರಿಗೆ ಇಷ್ಟು ಹುದ್ದೆ ಮತ್ತು ಮಹಿಳೆಯರಿಗೆ ಇಷ್ಟು ಹುದ್ದೆ ಎಂದು ಭಾಗ ಮಾಡಲಾಗಿದೆ. ಹುಡುಗರಿಗೆ ಎಷ್ಟು ಹುದ್ದೆಯನ್ನು ನೀಡಿದ್ದಾರೆ ಹಾಗೂ ಹುಡುಗಿಯರಿಗೆ ಎಷ್ಟು ಹುದ್ದೆಯನ್ನು ನೀಡಿದ್ದಾರೆ ಎಂಬುದನ್ನು ಕೆಳಗಡೆ ನೋಡಿ ತಿಳಿದುಕೊಳ್ಳಿ.
ಪುರುಷರಿಗೆ- 35,612 ಹುದ್ದೆಗಳು.
ಮಹಿಳೆಯರಿಗೆ- 3869 ಹುದ್ದೆಗಳು.
ಕಾನ್ಸ್ಟೇಬಲ್ ಹುದ್ದೆಗೆ ಬೇಕಾಗಿರುವ ವಿದ್ಯಾಭ್ಯಾಸ.
ಸ್ನೇಹಿತರೆ ನೀವು ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ನೀವೇನು ದೊಡ್ಡ ದೊಡ್ಡ ಡಿಗ್ರಿ ಮಾಡುವ ಅವಶ್ಯಕತೆ ಖಂಡಿತವಾಗಿಯೂ ಇರುವುದಿಲ್ಲ. ನೀವು ಕೇವಲ ಎಸ್ ಎಸ್ ಎಲ್ ಸಿ ಅಂದರೆ ಹತ್ತನೇ ತರಗತಿಯನ್ನು ಪಾಸ್ ಮಾಡಿದ್ದರೆ ಅಷ್ಟೇ ಸಾಕು. ನೀವು ಈ 10ನೇ ತರಗತಿಯನ್ನು ಪಾಸ್ ಮಾಡಿದ್ದರೆ ಈ ಅರ್ಜಿಯನ್ನು ನೀವು ಹಾಕಲು ಅರ್ಹರಿದ್ದೀರಿ ಎಂದರ್ಥ. ಒಂದು ವೇಳೆ ನೀವು ಹತ್ತನೇ ತರಗತಿಯನ್ನು ಮುಗಿಸಿ ಮುಂದೆ ಓದುತ್ತಿದ್ದರು ಕೂಡ ಈ ಜಾಬ್ ಗೆ ನೀವು ಅಪ್ಲೈ ಮಾಡಲು ಅವಕಾಶವಿರುತ್ತದೆ ಮತ್ತು ನೀವೇನಾದರೂ ಹತ್ತನೇ ತರಗತಿಯನ್ನು ಓದಿಲ್ಲದಿದ್ದಲ್ಲಿ ನಿಮಗೆ ಈ ಅರ್ಜಿಯನ್ನು ಹಾಕುವ ಅರ್ಹತೆ ಇರುವುದಿಲ್ಲ.
ಕಾನ್ಸ್ಟೇಬಲ್ ಹುದ್ದೆಗೆ ಬೇಕಾಗಿರುವ ವಯಸ್ಸು.
ಸ್ನೇಹಿತರೆ ನೀವು ಈ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮ್ಮ ವಯಸ್ಸು ಇಷ್ಟರಿಂದ ಇಷ್ಟೇ ಇರಬೇಕು ಎಂಬ ನಿಯಮ ಈ ಹುದ್ದೆಗಳಿಗೆ ಇರುತ್ತದೆ. ಒಂದು ವೇಳೆ ನೀವೇನಾದರೂ GM ಗೆ ಸೇರಿದ್ದಾದಲ್ಲಿ ನಿಮ್ಮ ವಯಸ್ಸು 18ರಿಂದ 23 ವರ್ಷದ ಒಳಗಡೆ ಇರಬೇಕಾಗುತ್ತದೆ ಹಾಗೂ ನೀವೇನಾದರೂ OBC ಗೆ ಸೇರಿದೆ ಆದಲ್ಲಿ ನಿಮ್ಮ ವಯಸ್ಸು 18ರಿಂದ 26 ವರ್ಷದ ಒಳಗಡೆ ಇರಬೇಕಾಗುತ್ತದೆ. ಇನ್ನೊಂದು ವೇಳೆ ನೀವು SC ಅಥವಾ ST ಸೇರಿದ್ದೆ ಆದಲ್ಲಿ ನಿಮ್ಮ ವಯಸ್ಸು 18ರಿಂದ 28ರ ಒಳಗೆ ಇರಬೇಕಾಗುತ್ತದೆ.
ಕಾನ್ಸ್ಟೇಬಲ್ ಹುದ್ದೆಯಲ್ಲಿ ಬರುವ ಸಂಬಳ.
ಕಾನ್ಸ್ಟೇಬಲ್ ಹಾಗೂ ಹುದ್ದೆಗೆ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ ತಿಂಗಳಿಗೆ 21,700₹ ಇಂದ 69,100₹ ವರೆಗೂ ನಿಮಗೆ ಸ್ಯಾಲರಿ ಸಿಗುತ್ತದೆ. ಈ ಸ್ಯಾಲರಿ 69,100 ಮೇಲೆ ಹೆಚ್ಚಾಗುವುದಿಲ್ಲ, ಒಂದು ವೇಳೆ ನಿಮಗೆ ಹೆಚ್ಚಾಗಬೇಕಾದಲ್ಲಿ ನೀವು ಕಾನ್ಸ್ಟೇಬಲ್ ಪೋಸ್ಟ್ ನಿಂದ ದೊಡ್ಡ ಹುದ್ದೆಗೆ ಹೋಗಬೇಕಾಗುತ್ತದೆ ಹಾಗೂ. ಕಾನ್ಸ್ಟೇಬಲ್ ಗೆ ಸೇರಿಕೊಂಡ ಮೊದಲನೆಯ ತಿಂಗಳ ಸಂಬಳ 21,700 ಆಗಿರುತ್ತದೆ.ಈ ಸಂಬಳವೂ ನಿಮಗೆ ಎಕ್ಸ್ಪೀರಿಯೆನ್ಸ್ ಆದ ಹಾಗೆ ಹೆಚ್ಚಾಗುತ್ತಾ ಹೋಗುತ್ತದೆ.
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಶುಲ್ಕ.
ಜನರಲ್ ಹಾಗೂ ಒಬಿಸಿ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನೂರು ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
ಯಾವುದೇ ಜಾತಿಯ ಮಹಿಳೆಯರಿಗೆ ಒಂದು ರೂಪಾಯಿಯೂ ಕೂಡ ಪಾವತಿಸುವ ಅಗತ್ಯ ಇರುವುದಿಲ್ಲ ಹಾಗೂ ಎಸಿ ಹಾಗೂ ಎಸ್ ಟಿ ಇವರಿಗೂ ಕೂಡ ಉಚಿತ ಇರುತ್ತದೆ ಮತ್ತು ಮಾಜಿ ಸೈನಿಕರಿಗೂ ಕೂಡ ಫ್ರೀ ಇರುತ್ತದೆ.
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 05 2024ರಂದು ಪ್ರಾರಂಭವಾಯಿತು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 14 2024ರಂದು ಅಂತಿಮವಾಗುತ್ತದೆ. ಅರ್ಜಿ ಸಲ್ಲಿಸಬೇಕೆಂದುಕೊಳ್ಳುವ ಅಭ್ಯರ್ಥಿಗಳು ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಈ ದಿನಾಂಕ ಮುಗಿದ ನಂತರ ನೀವು ಅರ್ಜಿ ಸಲ್ಲಿಸಿದರು ಅದು ತೆಗೆದುಕೊಳ್ಳುವುದಿಲ್ಲ ಅಥವಾ ವೆಬ್ಸೈಟ್ ಓಪನ್ ಆಗುವುದಿಲ್ಲ.
ನಿಮಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವೆಬ್ಸೈಟ್ ಲಿಂಕನ್ನು ಕೆಳಗಡೆ ನೀಡಿರುತ್ತೇನೆ. ಅಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಥವಾ ನಿಮಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯದಿದ್ದಲ್ಲಿ ನಾನು ಇದರ ಬಗ್ಗೆ ಇನ್ನೊಂದು ಆರ್ಟಿಕಲ್ ನ ಮುಖಾಂತರ ಪರಿಪೂರ್ಣವಾಗಿ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಸಿಕೊಡುತ್ತೇನೆ. ಅಲ್ಲಿಯವರೆಗೂ ಕಾದಿರಿ.
Website Link : ಇಲ್ಲಿ ಕ್ಲಿಕ್ ಮಾಡಿ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಏಕೆ ಅರ್ಜಿ ಸಲ್ಲಿಸಬೇಕು ?
ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಅವನು ಇಷ್ಟಪಡುವುದೇನೆಂದರೆ ಒಂದು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು, ಒಳ್ಳೆಯ ಹಂತವನ್ನು ಪಡೆದು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಬೇಕು ಹಾಗೂ ಒಂದು ಒಳ್ಳೆಯ ಮನೆತನದ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕು. ಇದಿಷ್ಟು ಕೂಡ ಒಬ್ಬ ನಮ್ಮಂತಹ ಮಿಡಲ್ ಕ್ಲಾಸ್ ಹುಡುಗನ ಕನಸಾಗಿರುತ್ತದೆ.
ಇದಕ್ಕೂ ಮೀರಿ ಇನ್ನ ಕೆಲವು ನಮ್ಮಂತಹ ಮಿಡಲ್ ಕ್ಲಾಸ್ ಹುಡುಗರಿಗೆ ದೇಶ ಸೇವೆ ಮಾಡಬೇಕೆಂಬುದು ಇದೆಲ್ಲದಕ್ಕಿಂತಲೂ ದೊಡ್ಡ ಕನಸಾಗಿರುತ್ತದೆ. ಒಂದು ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು ಹಾಗೂ ಒಂದು ಒಳ್ಳೆಯ ಮನೆತನದ ಹುಡುಗಿಯನ್ನು ಮದುವೆಯಾಗಬೇಕು ಹಾಗೂ ತನ್ನ ತಂದೆಯನ್ನು ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕೆಲವರ ಆಸೆಯಾಗಿದ್ದರೆ ಇನ್ನೂ ಕೆಲವರು ತನ್ನ ಪ್ರಾಣವನ್ನು ದೇಶಕ್ಕೆ ಮುಡಿಪಾಗಿಡಬೇಕೆಂದು ದೇಶ ಸೇವೆ ಮಾಡಲು ನಿರ್ಧರಿಸಿಕೊಂಡಿರುತ್ತಾರೆ. ಅಂತಹ ದೇಶ ಸೇವೆ ಮಾಡುವುದಕ್ಕೆ ಒಂದು ಉತ್ತಮವಾದ ಕೆಲಸವೆಂದರೆ ಅದು ಕೇವಲ ಸೈನಿಕ ವೃತ್ತಿ ಆಗಿರುತ್ತದೆ.
ಎಷ್ಟೋ ಜನ ನಮ್ಮಂತಹ ಹುಡುಗರಿಗೆ ದೇಶ ಕಾಯಲು ಬಹಳ ಆಸೆ ಇರುತ್ತದೆ ಹಾಗೂ ಅದೇ ಒಂದು ಗುರಿಯಾಗಿರುತ್ತದೆ. ಸ್ನೇಹಿತರೆ ನಮ್ಮ ಭಾರತ ದೇಶಕ್ಕೆ ಸೈನಿಕನಾಗುವುದಕ್ಕೆ ಹಲವಾರು ಕಠಿಣ ಪರಿಶ್ರಮಗಳನ್ನು ಪಡಬೇಕು ಅಂತಹ ಪರಿಶ್ರಮವನ್ನು ಪಟ್ಟು ನಾವು ಸಿದ್ದರಾದರು ಕೂಡ ಕೆಲವೊಮ್ಮೆ ನಮಗೆ ಆ ಕೆಲಸ ಸಿಗುವುದಿಲ್ಲ ಅದಕ್ಕೆ ಹುಡುಗರು ನಿರಾಶಿತರಾಗಿ ಅವರಿಗೆ ಎರಡನೆಯದಾಗಿ ಬರುವುದೇ ನಾನು ಒಬ್ಬ ಪೊಲೀಸ್ ಆಗಬೇಕೆಂದು ಅವರ ಮನದಲ್ಲಿ ಪೊಲೀಸ್ ಆಗಬೇಕೆಂದು ಆಸೆ ಬರುತ್ತದೆ.
ಸ್ನೇಹಿತರೆ ಆ ಸೈನಿಕ ಬೇರೆ ದೇಶದಿಂದ ಬರುವ ಶತ್ರುಗಳನ್ನು ನಿರ್ನಾಮ ಮಾಡಿದರೆ ಈ ಪೊಲೀಸ್ ಎಂಬ ಸೈನಿಕ ನಮ್ಮ ದೇಶದಲ್ಲೇ ಇರುವ ಕ್ರಿಮಿ ಕೀಟಗಳನ್ನು ಅಂದರೆ ದೇಶಕ್ಕೆ ಸಂಚು ಮಾಡುವ ದೇಶದ್ರೋಹಿಗಳನ್ನು ಶಿಕ್ಷಿಸಲು ಇರುವ ಏಕೈಕ ಹುದ್ದೆಯೇ ಪೊಲೀಸ್ ಆಗಿರುತ್ತದೆ.
ಸ್ನೇಹಿತರೆ ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ ಈ ಆರ್ಟಿಕಲ್ ಅನ್ನು ಪೂರ್ಣವಾಗಿ ಓದಿ ಪೊಲೀಸ್ ಕಾನ್ಸ್ಟೇಬಲ್ ಏಕೆ ಹಾಗಬೇಕೆಂದು ತಿಳಿದುಕೊಳ್ಳಿ ನಿಮಗೆ ಈಗಾಗಲೇ ಪೊಲೀಸ್ ಏಕೆ ಆಗಬೇಕೆಂಬುದ್ದಕ್ಕೆ ನಮ್ಮಿಂದ ಉತ್ತರ ಸಿಕ್ಕಿದೆ ಎಂದು ನಾನು ಭಾವಿಸಿಕೊಂಡಿದ್ದೇನೆ.
ಪೋಲಿಸ್ ಕಾನ್ಸ್ಟೇಬಲ್ ಹುದ್ದೆಯ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆಗಳು.
ಸ್ನೇಹಿತರೆ ನಾವು ನೀವು ಒಮ್ಮೆಯಾದರೂ ಪಬ್ಲಿಕ್ ಹಾಗೂ ಪೊಲೀಸರಿಗೆ ಹಾಗೂ ಅಂತಹ ಜಗಳಗಳನ್ನು ನೋಡೇ ಇರುತ್ತೇವೆ, ನೋಡಿಲ್ಲವೆಂದರೂ ಅವರಿವರ ಹತ್ತಿರವಾದರೂ ಕೇಳೆ ಇರುತ್ತೇವೆ.
ಸ್ನೇಹಿತರೆ ಒಬ್ಬ ವ್ಯಕ್ತಿಗೆ ಸ್ನೇಹಿತರು ಎಷ್ಟು ಜನ ಇರುತ್ತಾರೆ ಅಷ್ಟೇ ಶತ್ರುಗಳು ಸಹ ಇದ್ದೇ ಇರುತ್ತಾರೆ ಅದರಂತೆಯೇ ಕೆಲವರಿಗೆ ಪೊಲೀಸ್ ಹಾಗೂ ಆ ಕೆಲಸ ಮಾಡುವವರನ್ನು ಕಂಡರೆ ಆಗುವುದಿಲ್ಲವೆಂದು ವರ್ತಿಸುತ್ತಿರುತ್ತಾರೆ ಏಕೆಂದರೆ ಸಮಾಜದಲ್ಲಿ ನಡೆಯುವಂತಹ ಎಷ್ಟೋ ಅನ್ಯಾಯಗಳನ್ನು ತಡೆಗಟ್ಟುವುದು ಪೊಲೀಸರೇ ಆಗಿರುವುದರಿಂದ ಅವರಿಗೆ ಈ ಪೊಲೀಸ್ ಅವರನ್ನು ಕಂಡರೆ ಆಗುವುದಿಲ್ಲ.
ನಮ್ಮಂತ ಬಡ ಜನರು ಕೂಡ ಪೋಲಿಸ್ ನವರನ್ನು ಕಂಡರೆ ಸಾಮಾನ್ಯವಾಗಿ ಹೆದರಿಕೊಳ್ಳುತ್ತಾರೆ ಏಕೆಂದರೆ ಏನು ತಪ್ಪು ಮಾಡದೆ ಇದ್ದರೂ ಸಹ ಅವರು ನಮ್ಮನ್ನು ಅರೆಸ್ಟ್ ಮಾಡಿ ಹಿಂಸೆ ಕೊಡುತ್ತಾರೆಂದು ಕೆಲವರು ತಪ್ಪು ತಿಳುವಳಿಕೆಯಿಂದಲೇ ಬದುಕುತ್ತಿದ್ದಾರೆ.
ಸ್ನೇಹಿತರೆ ಪೊಲೀಸ್ ಎಂಬುದು ಒಂದು ಹುದ್ದೆ ಎಂಬುದು ಎಷ್ಟು ಸತ್ಯವೋ ಹಾಗೆ ಪೊಲೀಸ್ ಎಂಬುದು ಒಂದು ಧೈರ್ಯ ಎಂಬುದೇ ಅಷ್ಟೇ ಸತ್ಯ.
ಹಾಗಂದ ಮಾತ್ರಕ್ಕೆ ಎಲ್ಲಾ ಪೊಲೀಸರು ಒಂದೇ ತರಹ ಇರುವುದಿಲ್ಲ ಎಂದು ನಿಮಗೆ ಪ್ರಶ್ನೆ ಬಂದಿರಬಹುದು ? ನಿಮ್ಮ ಈ ಪ್ರಶ್ನೆಗೆ ನನ್ನ ಉತ್ತರವೇನೆಂದರೆ ಒಬ್ಬ ಮನುಷ್ಯನ ಕೈಯಲ್ಲಿ ಐದು ಬೆರಳು ಕೂಡ ಒಂದೇ ಸಮನಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ ಅದರಂತೆ ಪೊಲೀಸ್ ಎಂಬ ಹುದ್ದೆಯಲ್ಲಿ ನ್ಯಾಯವಾಗಿ ಕೆಲಸ ಮಾಡುವವರು ಸಿಗುತ್ತಾರೆ ಅಥವಾ ದುಡ್ಡಿನ ಆಸೆಗೆ ತಮ್ಮನ್ನೇ ಮಾರಿಕೊಂಡಿರುವವರು ಸಹ ಸಿಗುತ್ತಾರೆ, ಈ ಕಾರಣಕ್ಕೆ ಎಷ್ಟೋ ಜನರಿಗೆ ಪೊಲೀಸರನ್ನು ಕಂಡರೆ ಆಗುವುದಿಲ್ಲ.
ಈ ಮಾತ್ರಕ್ಕೆ ನಾವು ಅವರನ್ನು ದ್ವೇಷಿಸುವುದು ಸರಿಯಲ್ಲ ಏಕೆಂದರೆ ಭೂಮಿಯಲ್ಲಿ ಕೆಟ್ಟ ಶಕ್ತಿ ಇದೆ ಎಂದರೆ ಒಂದು ಒಳ್ಳೆಯ ಶಕ್ತಿಯು ಕೂಡ ಖಂಡಿತವಾಗಿಯೂ ಇದ್ದೇ ಇರುತ್ತದೆ ಅದೇ ತರಹ ಪೊಲೀಸರಲ್ಲೂ ಸಹ ನಿಯತ್ತಿನಿಂದ ತಮ್ಮ ವೃತ್ತಿಗೆ ಗೌರವ ಕೊಟ್ಟು ಕೆಲಸ ಮಾಡುವಂತಹ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಇನ್ನು ಎಷ್ಟೋ ಜನರು ಇದ್ದಾರೆ.
ಯಾರೋ ಒಬ್ಬ ತಪ್ಪು ಮಾಡಿದ ಎಂಬ ಮಾತ್ರಕ್ಕೆ ಎಲ್ಲರೂ ಅದೇ ತಪ್ಪನ್ನು ಮಾಡುತ್ತಾರೆಂಬುದು ಹಾಗೂ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ನಮ್ಮ ಮೂರ್ಖತನವಾಗಿರುತ್ತದೆ.
ಸ್ನೇಹಿತರೆ ಒಮ್ಮೆಯಾದರೂ ಊಹಿಸಿಕೊಳ್ಳಿ ಪೊಲೀಸರು ತಮ್ಮ ಕೆಲಸವನ್ನು ಬಿಟ್ಟು ಅವರವರ ಮನೆಯವರೊಂದಿಗೆ ನೆಮ್ಮದಿಯಿಂದ ಕಾಲ ಕಳೆದಿದ್ದೇ ಆದರೆ ನಮ್ಮಂತ ಬಡಜನರ ಪರಿಸ್ಥಿತಿ ಶ್ರೀಮಂತ ಜನರಿಗೆ ಸಿಲುಕಿ ಅದೆಷ್ಟೋ ಅನ್ಯಾಯಕ್ಕೆ ಒಳಗಾಗುತ್ತಿದ್ದೆವು. ಇದನ್ನೆಲ್ಲವನ್ನು ತಡೆಗಟ್ಟುತ್ತಾ ಶ್ರೀಮಂತನಿಗೂ ಒಂದೇನೆಯ ಹಾಗೂ ಬಡವರಿಗೂ ಒಂದೇ ನ್ಯಾಯವನ್ನು ಒದಗಿಸುತ್ತ ಬರುತ್ತಿರುವ ಪೊಲೀಸರ ಮೇಲೆ ನಾವು ಕಳಂಕ ಹೊರಿಸುವುದು ಎಷ್ಟು ಸರಿ ಎಂದು ನೀವೇ ಹೇಳಿ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಮಾಡುತ್ತಿರುವವರ ಕಷ್ಟಗಳು :
ಸ್ನೇಹಿತರೆ ನಮಗೆ ಆಗಲಿ ಅಥವಾ ನಿಮಗೆ ಆಗಲಿ ನಮಗೆ ಕಷ್ಟವಾಗುವಂತಹ ಕೆಲಸದಲ್ಲಿ ನಮಗೆ ತಿಂಗಳಿಗೆ 50,000ಗಳನ್ನು ಸ್ಯಾಲರಿ ಆಗಿ ಕೊಟ್ಟರು ಸಹ ನಾವು ಆ ಕೆಲಸವನ್ನು ಹಿಂದೆ ಮುಂದೆ ನೋಡದೆ ಬಿಟ್ಟು ಹಾಕಿ ಬರುತ್ತೇವೆ ಏಕೆಂದರೆ ನಮಗೆ ಕೆಲಸ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಮೆಂಟಲ್ ಹೆಲ್ತ್ ಕೂಡ ಮುಖ್ಯವಾಗಿರುತ್ತದೆ.
ನಾನು ಈ ಮಾತನ್ನು ಈ ಸಂದರ್ಭದಲ್ಲಿ ಏಕೆ ಹೇಳಿದೆ ಎಂದರೆ ನಮಗೆ ಕಷ್ಟವಾದ ಕೆಲಸವನ್ನು ನಾವು ಬಿಟ್ಟು ಬರುತ್ತೇವೆ ಆದರೆ ಪೊಲೀಸ್ ಎಂಬ ನಿಷ್ಠಾವಂತ ಅಧಿಕಾರಿಗಳು ತಮಗೆ ಎಷ್ಟೇ ಕಷ್ಟವಾದರೂ ಸಹ ತಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಸಹ ಅವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುತ್ತಾರೆ, ಯಾವುದೇ ಕೆಲಸದಲ್ಲಾದರೂ ಇಷ್ಟರಿಂದ ಇಷ್ಟಕ್ಕೆ ಎಂದು ಸಮಯ ಇರುತ್ತದೆ ಉದಾರಣೆಗೆ ಶಿಕ್ಷಕರ ವೃತ್ತಿಯನ್ನು ತೆಗೆದುಕೊಳ್ಳುವುದಾದರೆ ಅವರು ಬೆಳಗ್ಗೆ ತರಗತಿಗೆ 10 ಗಂಟೆಗೆ ಬಂದು ನಾಲ್ಕು ಗಂಟೆಗೆ ಹೊರಡುತ್ತಾರೆ ಅಥವಾ ಪ್ರೈವೇಟ್ ಕಂಪನಿಯಲ್ಲಿ ವರ್ಕ್ ಮಾಡುವವರ ಹುದ್ದೆಯನ್ನು ತೆಗೆದುಕೊಂಡರೆ ಬೆಳಗ್ಗೆ 8 ಗಂಟೆಗೆ ಬಂದರು ಸಾಯಂಕಾಲ 6:00ಗೆ ಮನೆಗೆ ಹೋಗುತ್ತಾರೆ ಡಾ. ಹುದ್ದೆಯನ್ನು ತೆಗೆದುಕೊಂಡರು ಸಹ ಅವರು ಬೆಳಗ್ಗೆ 10 ಗಂಟೆಗೆ ಬಂದರೆ ಸಾಯಂಕಾಲ 3:30 ಅಥವಾ 4 ಗಂಟೆಗೆ ಹೊರಡುತ್ತಾರೆ ಅಷ್ಟೇ ಅಲ್ಲದೆ ಅವರು ಗೌರ್ಮೆಂಟ್ ನಲ್ಲಿ ವರ್ಕ್ ಮಾಡುತ್ತಿದ್ದರು ಸಹ ಪ್ರೈವೇಟ್ ಅಲ್ಲೂ ಕೂಡ ಅವರದ್ದೇ ಆದಂತಹ ಒಂದು ಹಾಸ್ಪಿಟಲ್ ಇರುತ್ತದೆ ಆ ಹಾಸ್ಪಿಟಲ್ ನಲ್ಲಿ ಸಂಜೆ 5:00ಯಿಂದ ರಾತ್ರಿ 10 ಗಂಟೆಯವರೆಗೂ ಕೆಲಸ ಮಾಡುತ್ತಿರುತ್ತಾರೆ ಅದಾದ ಮೇಲೆ ಇವರೆಲ್ಲರೂ ತಮ್ಮ ತಮ್ಮ ಮನೆಗೆ ಹೋಗಿ ಮನೆಯವರ ಜೊತೆ ಖುಷಿಯಾಗಿ ಇರುತ್ತಾರೆ ಆದರೆ ನಿಮಗೆ ತಿಳಿದಿರಲಿ ಉದಾಹರಣೆಗೆ ನಿಮ್ಮ ಮನೆಯಲ್ಲಿ ಜಗಳವಾಗುತ್ತಿದ್ದರೆ ನಿಮಗೆ ಮೊದಲಿಗೆ ನೆನಪಿಗೆ ಬರುವುದೇ ಪೊಲೀಸರಿಗೆ ಕಾಲ್ ಮಾಡಬೇಕು ಎಂದು 100 ಗೆ ಡಯಲ್ ಮಾಡುತ್ತೀರಾ, ನೀವು ಡಯಲ್ ಮಾಡಿದಾಗ ಅದು ರಾತ್ರಿ 2:00ಯಾಗಿದ್ದರೂ ಸಹ ಪೊಲೀಸರು ನಿಮಗೆ ಸಹಾಯ ಮಾಡಲು ಬಂದೇ ಬರುತ್ತಾರೆ ಅಲ್ಲಿಗೆ ತಿಳಿದುಕೊಳ್ಳಿ ಪೊಲೀಸ್ ಹಾಗೂ ಸೈನಿಕ ವೃತ್ತಿಯನ್ನು ಮಾಡುವುದು ಅಷ್ಟು ಸುಲಭವಾದ ಮಾತಲ್ಲ ಎಂದು.
ಎಲ್ಲರಿಗೂ ಮನಸ್ಸಿನಲ್ಲಿ ಪೊಲೀಸ್ ಎಂದ ತಕ್ಷಣ ಬರುವುದೇ ಅವರೇನು ಬಿಡು ಒಳ್ಳೆಯ ಕೆಲಸ ಸಿಕ್ಕಿದೆ, ಒಳ್ಳೆ ದುಡ್ಡು ಮಾಡುತ್ತಾರೆ ಹಾಗೂ ಸಮಾಜದಲ್ಲಿ ಒಳ್ಳೆ ಮರವಾದೆ ಕೂಡ ಸಿಗುತ್ತದೆ ಇನ್ನೇನು ಬೇಕು ಅವರಿಗೆ ಜೀವನ ಅವರ ಹಾಗೆ ನಮ್ಮದು ಇದ್ದರೆ ಎಷ್ಟೋ ಚೆನ್ನಾಗಿ ಇರುತ್ತಿತ್ತು ಎಂದು ಎಲ್ಲರಿಗೂ ಆಲೋಚನೆ ಬಂದೇಬರುತ್ತದೆ ಆದರೆ ಈ ತರಹ ಯೋಚನೆ ಮಾಡುವ ಯಾರು ಕೂಡ ಅವರಿಗೂ ಒಂದು ಫ್ಯಾಮಿಲಿ ಇರುತ್ತದೆ ಅವರು ಆ ಫ್ಯಾಮಿಲಿಯ ಜೊತೆಗೆ ಟೈಮ್ ಸ್ಪೆಂಡ್ ಮಾಡಲು ಆಗುವುದಿಲ್ಲ ಕೆಲಸದ ಸಮಯಗಳಲ್ಲಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಕೆಲಸ ಮಾಡುತ್ತಿರುತ್ತಾರೆ ಎಂಬುದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ.
ಸ್ನೇಹಿತರೆ ಈ ಹುದ್ದೆಯನ್ನು ಮಾಡಲು ಪೊಲೀಸರು ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಅವರ ಪ್ರಾಣ ಪಕ್ಷಿ ಯಾವಾಗ ಹಾರಿ ಹೋಗುತ್ತದೆ ಎಂಬುದನ್ನು ಯಾರಿಂದಲೂಹಿಸಲು ಸಾಧ್ಯವಾಗುವುದಿಲ್ಲ, ಈ ಕೆಲಸವು ಒಂದು ರೀತಿ ಸಾವಿನ ಜೊತೆ ಸರಸ ಹಾಡಿದಂತೆ ಇರುತ್ತದೆ.
ನಮ್ಮ ಹಳ್ಳಿಗಳಲ್ಲಿ ಇರುವಂತಹ ಪೊಲೀಸರಿಗೆ ಅಷ್ಟು ಕಷ್ಟದ ಕೆಲಸ ಇರುವುದಿಲ್ಲ ಆದರೆ ಪಟ್ಟಣಗಳಲ್ಲಿ ಕೆಲಸ ಮಾಡುವಂತಹ ಪೊಲೀಸರಿಗೆ ಸಾವು ಎಂಬುದು ಬೆನ್ನ ಹಿಂದೆಯೇ ಯಾವಾಗಲೂ ಇದ್ದೇ ಇರುತ್ತದೆ ಉದಾರಣೆಗೆ ಒಮ್ಮೆ ಒಬ್ಬ ಕಳ್ಳನನ್ನು ಹಿಡಿಯಲು ಹೋದಾಗ ಅವನು ಅವರಿಂದ ತಪ್ಪಿಸಿಕೊಳ್ಳಲು ಆ ಸಂದರ್ಭದಲ್ಲಿ ಅವನು ಏನು ಬೇಕಾದರೂ ಮಾಡುತ್ತಾನೆ ಅವರನ್ನು ಕೊಲೆ ಮಾಡುವುದಕ್ಕೂ ಸಹ ಹಿಂದೆ ಮುಂದೆ ನೋಡುವುದಿಲ್ಲ ಅಂತಹ ಕ್ರೂರಿಯನ್ನು ಹಿಡಿದು ಬಂದಿಸುವುದೆಂದರೆ ಅಷ್ಟು ಸುಲಭವಾಗಿ ಆಗುವುದಿಲ್ಲ.
ಅದಾದಮೇಲೆ ಈಗಿನ ಕಾಲದ ಕಳ್ಳರು ಹಾಗೂ ರೌಡಿಗಳು ಎಷ್ಟು ಜಾಣರಾಗಿದ್ದಾರೆ ಎಂದರೆ ತಾನು ಕದ್ದಿದ್ದೇನೆ ಅಥವಾ ತಾನು ಕೊಲೆ ಮಾಡಿದ್ದೇನೆ ಎಂಬುದಕ್ಕೆ ಒಂದು ಸಣ್ಣ ಸಾಕ್ಷಿಯನ್ನು ಕೂಡ ಬಿಡದೆ ಅಷ್ಟು ಜಾಗೃಕತೆಯಿಂದ ತಮ್ಮ ಕೆಲಸವನ್ನು ಮಾಡಿರುತ್ತಾರೆ ಅದನ್ನು ಕಂಡುಹಿಡಿಯುವುದು ಪೊಲೀಸರಿಗೆ ಒಂದು ದೊಡ್ಡ ಸವಾಲನ್ನು ಹೊಂದಿದಂತೆ ಆಗುತ್ತದೆ.
ರಾತ್ರಿ ಸಮಯದಲ್ಲಿ ಯಾರೇ ಫೋನ್ ಮಾಡಿದರೂ ಸಹ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಹುಷಾರಿಲ್ಲದೆ ಇದ್ದರೂ ಸಹ ಅವರ ಕಷ್ಟಗಳಿಗೆ ಸಹಾಯ ಮಾಡಲು ಪೊಲೀಸರು ಎಷ್ಟು ಗಂಟೆಯ ರಾತ್ರಿಯಾದರೂ ಸಹ ಹೋಗುತ್ತಾರೆ ಇಷ್ಟು ಕಷ್ಟದಲ್ಲೂ ಕೆಲಸ ಮಾಡುವ ಆ ವ್ಯಕ್ತಿ ನಿಜವಾಗಿಯೂ ಒಬ್ಬ ಸೈನಿಕನಿಗೆ ಸಮನಾಗಿರುತ್ತಾರೆ ಈ ಪೊಲೀಸ್ ಕೆಲಸವೂ ಸುಲಭವಾಗಿ ಅಥವಾ ಕಷ್ಟವೋ ಎಂಬುದನ್ನು ನೀವೇ ಯೋಚಿಸಿ.
Conclusion
ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಕೇಂದ್ರ ಸರ್ಕಾರದ ಉದ್ಯೋಗವಕಾಶಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ನೇಮಕಾತಿ ಪ್ರಕ್ರಿಯೆ ನಮ್ಮ ದೇಶದ ಯುವಕರಿಗೆ ಮತ್ತು ಯುವತಿಯರಿಗೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಒಂದು ದೊಡ್ಡ ಅವಕಾಶವನ್ನೂ ನೀಡುತ್ತದೆ. ಹತ್ತನೇ ತರಗತಿಯನ್ನು ಪಾಸ್ ಮಾಡಿರುವ ಪ್ರತಿಯೊಬ್ಬರು ಅರ್ಜಿ ಸಲ್ಲಿಸಬಹುದಾದ ಈ ಪ್ರಕ್ರಿಯೆಯು ಯಾವುದೇ ದೊಡ್ಡ ಡಿಗ್ರಿಗಳ ಅವಶ್ಯಕತೆಯನ್ನು ಇರಿಸಿಲ್ಲ, ಇದರಿಂದ ಸಾಮಾನ್ಯ ಶಿಕ್ಷಣವಿದ್ದರೂ ಸರ್ಕಾರಿ ಕೆಲಸವನ್ನು ಪಡೆಯುವ ಅವಕಾಶವನ್ನು ಇದು ನೀಡುತ್ತಿದೆ. ಈ ವಯೋಮಿತಿಯ ನಿಯಮಗಳು, SC, ST, OBC ಮತ್ತು GM ಅಭ್ಯರ್ಥಿಗಳಿಗೆ ವಿವಿಧ ಸಡಿಲಿಕೆಗಳನ್ನು ನೀಡುತ್ತವೆ, ಇದು ಶ್ರೇಣಿಯ ಎಲ್ಲಾ ಅಂತರವನ್ನು ಪೂರೈಸಲು ಪ್ರಯತ್ನಿಸುತ್ತದೆ.
ಈ ಹುದ್ದೆಗಳು ಯುವಕರು ಪ್ರಾರಂಭಿಕ ಹಂತದಲ್ಲಿ ಉದ್ಯೋಗವನ್ನು ಖಚಿತಪಡಿಸಿಕೊಂಡು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಗುರಿಗಳನ್ನು ಸಾಧಿಸಲು ಆಧಾರವನ್ನಾಗಿವೆ. ಇದಲ್ಲದೆ, ಸರ್ಕಾರದ ಉದ್ಯೋಗದ ಭದ್ರತೆ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಇದು ಅತ್ಯಂತ ಆಕರ್ಷಕವಾದ ಅವಕಾಶವಾಗಿದ್ದು, ಉದ್ಯೋಗಿಗಳು ಪ್ರಾರಂಭದ ವೇತನದಲ್ಲಿ 21,700 ರೂ. ಗಳಿಂದ 69,100 ರೂ. ಗಳವರೆಗೆ ಪಡೆಯಲು ಸಾಧ್ಯವಿದೆ. ಹೆಚ್ಚಿನ ಅನುಭವದೊಂದಿಗೆ ವೇತನ ಹೆಚ್ಚಳವೂ ಆಗುತ್ತದೆ.
ನೀವು ಓದಿದ ವಿದ್ಯಾವಂತರಾದರೂ ಕೂಡ, ಆರಂಭದಲ್ಲಿ ಒಂದು ಗೌರ್ಮೆಂಟ್ ಕೆಲಸವನ್ನು ಪಡೆಯುವುದರಿಂದ ಭದ್ರತೆಯೊಂದಿಗೆಯೇ ತೃಪ್ತಿಯುತ ಜೀವನವನ್ನೂ ರೂಪಿಸಬಹುದು. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವವರಲ್ಲಿ, ಅರ್ಜಿ ಶುಲ್ಕ ಸಾಮಾನ್ಯವಾಗಿ ಕನಿಷ್ಠವಾಗಿದೆ ಮತ್ತು ಕೆಲವು ವಿಶೇಷ ಸಮುದಾಯಗಳಿಗೆ ಉಚಿತವಾಗಿಯೂ ಇರುತ್ತದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಈ ಆದಾಯ ಸಾಮರ್ಥ್ಯವು ಹೆಚ್ಚು ಸಹಾಯಕವಾಗುತ್ತದೆ.
ಇದು ಕೇಂದ್ರ ಸರ್ಕಾರವು ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಕೈಗೊಂಡ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ.
ಇದೇ ತರಹ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು.