ನಾವು ಈ ಆರ್ಟಿಕಲ್ ನ ಮುಖಾಂತರ Paramedical Counseling ನ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ನಿಮಗೀಗಾಗಲೇ ತಿಳಿದಿರಬಹುದು ಕೆಲವು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಪಿಯುಸಿ ಮಾಡಲು ಹೋಗುತ್ತಾರೆ ಆದರೆ ಇನ್ನೂ ಕೆಲವು ವಿದ್ಯಾರ್ಥಿಗಳು ಡಿಪ್ಲೋಮೋ ಅಥವಾ ಪ್ಯಾರಾಮೆಡಿಕಲ್ ಕೋರ್ಸ್ ಗಳಿಗೆ ಹೋಗುತ್ತಾರೆ ಅಲ್ಲದೆ ಸೆಕೆಂಡ್ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಸಹ ಡಿಗ್ರಿ ಮಾಡುವುದನ್ನು ಬಿಟ್ಟು ಪ್ಯಾರಾಮೆಡಿಕಲ್ ಕಡೆಗೆ ಇಂಟರೆಸ್ಟ್ ತೋರಿಸುತ್ತಾರೆ. ಅಂತಹ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಈ ಆರ್ಟಿಕಲ್ ಉಪಯುಕ್ತವಾಗುತ್ತದೆ.
Paramedical Counseling ಬಗ್ಗೆ ಹೆಚ್ಚು ಮಾಹಿತಿ.
ಸ್ನೇಹಿತರೆ ಸೆಪ್ಟೆಂಬರ್ 23ರಂದು ಅಂದರೆ ಇವತ್ತು ಸುಮಾರು ಮಧ್ಯಾಹ್ನ 2 ಗಂಟೆಯ ನಂತರ ಎಲ್ಲರಿಗೂ Paramedical Counseling Board ನ ಕಡೆಯಿಂದ ಕೆಳಗೆ ನೀಡಿರುವ ಚಿತ್ರದಂತೆ ನಿಮಗೂ ಕೂಡ ಒಂದು ಮೆಸೇಜ್ ಬಂದಿರುತ್ತದೆ. ಆ ಮೆಸೇಜಲ್ಲಿ ರಿಸಲ್ಟ್ ಅನೌನ್ಸ್ ಆಗಿದೆ ಎಂದು ಬರೆದಿರುತ್ತದೆ. ನೀವು PMB ವೆಬ್ಸೈಟ್ ಗೆ ಹೋಗಿ ನಿಮಗೆ ಸಿಕ್ಕಿರುವ ಕಾಲೇಜ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
Selected Collage Check
ಇವಾಗ ನಿಮಗೆ ಸಿಕ್ಕಿರುವ ಕಾಲೇಜು ಯಾವುದು ಮತ್ತು ಯಾವ ಜಿಲ್ಲೆಯಲ್ಲಿದೆ ಮತ್ತು ಯಾವ ಕೋರ್ಸ್ ಹಾಗಿದೆ ಎಂಬುದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ತಿಳಿಯೋಣ ಬನ್ನಿ .
ಮೊದಲಿಗೆ ನಾನು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಕ್ಲಿಕ್ ಮಾಡಿದ ನಂತರ ಕೆಳಗಡೆ ನೋಡುತ್ತಿರುವ ಇಮೇಜ್ ನ ಹಾಗೆ ನಿಮಗೂ ಕೂಡ ಬಂದಿರುತ್ತದೆ.
ತದನಂತರ ಅಲ್ಲಿ ಕಾಣುವ Click Here to Apply ಎಂಬ ವರ್ಡ್ ಮೇಲೆ ಕ್ಲಿಕ್ ಮಾಡಿ. ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರವೇ ಅದು ಇನ್ನೊಂದು ಮುಖಪುಟಕ್ಕೆ ಹೋಗಲು ಪ್ರಾರಂಭಿಸುತ್ತದೆ.
ಅಲ್ಲಿ ನಿಮಗೆ ಎರಡು ಬಾಕ್ಸ್ ಕಾಣಿಸುತ್ತದೆ ಅದರಲ್ಲಿ ಮೊದಲನೆಯ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಎಂಟರ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ ನಂಬರ್ ಯಾವುದು ಎಂದರೆ ನೀವು Paramedical Counseling ಗೆ ಅಪ್ಲೈ ಮಾಡಿದಾಗ ಅವರು ಒಂದು ಸ್ಕ್ರಿಪ್ಟ್ ಅನ್ನು ನೀಡಿರುತ್ತಾರೆ, ನಿಮ್ಮ ಫೋಟೋ ಜೊತೆಗೆ ನಿಮ್ಮ ಡೀಟೇಲ್ಸ್ ಸಹ ಇರುತ್ತದೆ ಅಲ್ಲಿ ಅಪ್ಲಿಕೇಶನ್ ನಂಬರ್ ಎಂದು ಬರೆದಿರುತ್ತದೆ ಅಥವಾ ನಿಮಗೆ ಆಸ್ಕ್ರಿಪ್ಟ್ ಸಿಗದೇ ಇದ್ದಲ್ಲಿ ನಿಮಗೆ ಪ್ಯಾರಾಮೆಡಿಕಲ್ ಬೋರ್ಡ್ ವತಿಯಿಂದಲೇ ಒಂದು ಮೆಸೇಜ್ ಕಳುಹಿಸಿರುತ್ತಾರೆ .
ಆ ಮೆಸೇಜ್ ಕೆಳಗಡೆ ಕಾಣುವ ಚಿತ್ರದಂತೆ ಇರುತ್ತದೆ. ಅಲ್ಲಿ ನೀವು ನೋಡುತ್ತಿರಬಹುದು ಅಪ್ಲಿಕೇಶನ್ ನಂಬರ್ ಎಂದು ಬರೆದು ನಿಮ್ಮ ಅಪ್ಲಿಕೇಶನ್ ನಂಬರನ್ನು ಬರೆದಿರುತ್ತಾರೆ.
ಅದನ್ನ ಕಾಪಿ ಮಾಡಿಕೊಂಡು ಮೊದಲನೇ ಬಾಕ್ಸ್ ಆದಂತಹ ಅಪ್ಲಿಕೇಶನ್ ನಂಬರ್ ಎಂಬಲ್ಲಿ ಪೇಸ್ಟ್ ಮಾಡಿಕೊಳ್ಳಿ ತದನಂತರ ಎರಡನೇ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಡೇಟ್ ಆಫ್ ಬರ್ತ್ ಎಂಟರ್ ಮಾಡಿಕೊಳ್ಳಿ. ಡೇಟ್ ಆಫ್ ಬರ್ತ್ ಎಂಟರ್ ಮಾಡುವಾಗ ಯಾವುದೇ ಸ್ಲ್ಯಾಷ್ ಬಳಸಬೇಡಿ ಉದಾಹರಣೆಗೆ ನಾನು ಇಲ್ಲಿ ಬರೆದಿರುವ 01092006 ಡೇಟ್ ಆಫ್ ಬರ್ತ್ ತರವೇ ಎಂಟರ್ ಮಾಡಿಕೊಳ್ಳಿ. ನಂತರ ಲಾಗಿನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಲಾಗಿನ್ ಆಗಿ.
ಲಾಗಿನ್ ಆದ ನಂತರ ನಿಮಗೆ ಕೆಳಗಡೆ ಕಾಣುವ ಚಿತ್ರದಂತೆ ಕಾಣಿಸುತ್ತದೆ. ಅಲ್ಲಿ ನೀವು ನೋಡುತ್ತಿರಬಹುದು ನಿಮಗೆ ನಿಮ್ಮ ಅಪ್ಲಿಕೇಶನ್ ನಂಬರ್ ಕಾಣಸಿಗುತ್ತದೆ ಹಾಗೂ ಕೆಳಗಡೆ ಕಾಲೇಜ್ ಎಂದು ಬರೆದು ನಿಮಗೆ ಸಿಕ್ಕಿರುವ ಕಾಲೇಜ್ ನ ನೇಮ್ ಅನ್ನು ಹಾಗೂ ಅದರ ಡಿಸ್ಟ್ರಿಕ್ಟ್ ಅನ್ನು ಮೆನ್ಷನ್ ಮಾಡಿರುತ್ತದೆ.
ನೋಡಿದರಲ್ಲ ಸ್ನೇಹಿತರೆ ಇದೇ ತರಹ ನಿಮಗೆ ಸಿಕ್ಕಿರುವ ಕಾಲೇಜ್ ಯಾವುದು ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ ಆ ಕಾಲೇಜ್ ಇಷ್ಟವಾಗದಿದ್ದಲ್ಲಿ ದಿನಾಂಕ 24 9 2024 ರ ವರೆಗೆ ನೀವು ಈಗಾಗಲೇ ಆಪ್ಷನ್ ಎಂಟ್ರಿ ಮಾಡಿರುವುದನ್ನು ರಿಮೂವ್ ಮಾಡಿ ಹೊಸದಾಗಿ ನಿಮಗೆ ಬೇಕಾಗಿರುವ ಕಾಲೇಜ್ ಹಾಗೂ ಕೋರ್ಸ್ ಗಳನ್ನು ಚೇಂಜ್ ಮಾಡಿಕೊಳ್ಳಬಹುದಾಗಿದೆ.
ಗಮನದಲ್ಲಿ ಇಟ್ಟುಕ್ಕೊಳ್ಳಿ.
ಒಂದು ವಿಷಯವನ್ನು ಮಾತ್ರ ಸರಿಯಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಿ ನಿಮಗೇನಾದರೂ ಕೊಟ್ಟಿರುವ ಕಾಲೇಜ್ ಇಷ್ಟವಾಗದಿದ್ದಲ್ಲಿ ನೀವು ಪುನಃ ಆಪ್ಷನ್ ಎಂಟ್ರಿ ಯನ್ನು ಚೇಂಜ್ ಮಾಡಿಕೊಳ್ಳಬಹುದಾಗಿದೆ ಆದರೆ ಆ ಆಪ್ಷನ್ ಎಂಟ್ರಿಯನ್ನು ಚೇಂಜ್ ಮಾಡುವ ಕೊನೆ ದಿನಾಂಕ ಸೆಪ್ಟೆಂಬರ್ 24 2024 ಆಗಿರುತ್ತದೆ.
ಸ್ನೇಹಿತರೆ ನಿಮಗೀಗಾಗಲೇ ಬಂದಿರುವ ಮೆಸೇಜ್ ಕೆಳಗಡೆ ಚಿತ್ರದಲ್ಲಿ ತೋರಿಸಿರುವ ಹಾಗೆ ಇರುತ್ತದೆ. ಅದರಲ್ಲಿ ಅವರು ಸ್ಪಷ್ಟವಾಗಿ ಕ್ಲಾರಿಟಿ ಕೊಟ್ಟಿದ್ದಾರೆ ಇದು ಕೇವಲ Moc Round Paramedical Counseling ಮಾತ್ರವೆಂದು.
Moc Round Paramedical Counseling ಎಂದರೆ ಇದು ಕೇವಲ ಸ್ಯಾಂಪಲ್ ಅಷ್ಟೇ, ಉದಾಹರಣೆಗೆ ನೀವು ಮೊದಲು ಮೈಸೂರ್ ಕಾಲೇಜ್ ಗೆ First Preference ಕೊಟ್ಟಿರುತ್ತೀರಾ, Moc Round Paramedical Counseling ನಲ್ಲಿ ನೀವು ಯಾವ ಕಾಲೇಜಿಗೆ First Preference ಕೊಟ್ಟಿರುತ್ತಿರೋ ಅದು ನಿಮಗೆ ಲಭ್ಯವಿದೆ ಅಥವಾ ಲಭ್ಯವಿಲ್ಲವೆಂದು ಮಾತ್ರ ಹೇಳುವುದಕ್ಕೆ ಮಾಡಿರುವ ಕೌನ್ಸಿಲಿಂಗ್ ಇದಾಗಿದೆ.
ನಿಮಗೆ ನೀವು First Preference ಕೊಟ್ಟಿದ ಕಾಲೇಜ್ ಸಿಕ್ಕಿತ್ತೆಂದರೆ ನೀವು ಏನು ಚೇಂಜಸ್ ಮಾಡಿಕೊಳ್ಳಬೇಕು ?
ಒಂದು ವೇಳೆ ನಿಮಗೆ ನೀವು ಫಸ್ಟ್ ಪ್ರಿಫರೆನ್ಸ್ ಕೊಟ್ಟಿದ ಕಾಲೇಜ್ ಸಿಕ್ಕಲಿಲ್ಲವೆಂದರೆ ನೀವು ಕೆಳಗಡೆ ಚಿತ್ರದಲ್ಲಿ ನೋಡುತ್ತಿರುವ ಹಾಗೆ Click Here ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಬೇಕಾಗಿರುವ Priority ಸೆಟ್ ಮಾಡಿಕೊಂಡು ಚೇಂಜ್ ಮಾಡಿಕೊಳ್ಳಿ.ಈ ಚೇಂಜ್ ಮಾಡುವು ದಕ್ಕೆ ಕೊನೆಯ ದಿನಾಂಕವೆಂದರೆ ಸೆಪ್ಟೆಂಬರ್ 24 2024 ಆಗಿದೆ.
ನೀವು ಕಾಲೇಜ್ Priority ಚೇಂಜ್ ಮಾಡಿದ ನಂತರ ದಿನಾಂಕ 27 ಸೆಪ್ಟೆಂಬರ್ 2024 ರಂದು ನಿಮಗೆ ಫೈನಲ್ ಕಾಲೇಜ್ ಅನ್ನು ಒದಗಿಸಿಕೊಡುತ್ತದೆ.
ಒಂದು ವೇಳೆ ನಿಮಗೆ ಆ ದಿನ ನಿಮಗೆ ಇಷ್ಟವಾದ ಕಾಲೇಜ್ ಸಿಗಲಿಲ್ಲವೆಂದರೆ ನೀವು ಮಾಡಬೇಕಾದುದು ಏನು ?
1. ಮೊದಲನೆಯದಾಗಿ ಅವರು ನೀಡಿರುವ ಕಾಲೇಜನ್ನು ಸ್ವೀಕರಿಸಿ ಅಲ್ಲಿಯೇ ಹೋಗಿ ಓದ ತಕ್ಕದ್ದು.
2. ಅಥವಾ ಎರಡನೇ ರೌಂಡ್ ನ ಕೌನ್ಸಿಲಿಂಗ್ ಗೆ Wait ಮಾಡಬೇಕಾಗುತ್ತದೆ.
ಸ್ನೇಹಿತರೆ ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಿ, ಇವತ್ತು ಬಂದ ಮೆಸೇಜ್ ಅಂದರೆ 23 ಸೆಪ್ಟೆಂಬರ್ 20204 ರಂದು ಬಂದ ಮೆಸೇಜ್ ಫೈನಲ್ ಅಲ್ಲ, ನಿಮಗೆ ದಿನಾಂಕ 27 ಸೆಪ್ಟೆಂಬರ್ 2024 ರಂದು ಬರುವ ಮೆಸೇಜ್ ಫೈನಲ್ ಆಗಿರುತ್ತದೆ.
Conclusion
ಸ್ನೇಹಿತರೆ ನಿಮಗೀಗಾಗಲೇ ಈ ವಿಷಯದ ಬಗ್ಗೆ ಜ್ಞಾನ ಸಿಕ್ಕಿದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ದಿನಾಂಕ 27 ಸೆಪ್ಟೆಂಬರ್ 2024ರಂದು ನಿಮ್ಮ ಫೋನಿಗೆ ಒಂದು ಮೆಸೇಜ್ ಬರುತ್ತದೆ. ಆ ಮೆಸೇಜ್ ಬಂದ ನಂತರ ನೀವು Paramedical Counseling Board ಗೆ ಹೋಗಿ ನಿಮ್ಮ ಫೈನಲ್ ಕಾಲೇಜ್ ಯಾವುದೆಂದು ತಿಳಿದುಕೊಳ್ಳಿ.
ನಿಮಗೆ ಫೈನಲ್ ಕಾಲೇಜ್ ಸಿಕ್ಕ ನಂತರ ಒಂದು ವಾರದ ಒಳಗಡೆ ಆ ಕಾಲೇಜಿಗೆ ಭೇಟಿ ನೀಡಿ ಅಲ್ಲಿಗೆ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳನ್ನು ನೀಡಿ ಹಾಗೂ ಫೀಸ್ ಅನ್ನು ನೀಡಿ ಅಡ್ಮಿಶನ್ ಆಗಿ. Paramedical Counseling ಬೋರ್ಡ್ ಅಡ್ಮಿಶನ್ ಗೆ ಒಂದು ನಿಗದಿತ ಲಾಸ್ಟ ಡೇಟ್ ಅನ್ನು ಫಿಕ್ಸ್ ಮಾಡಿರುತ್ತದೆ. ಆ ಲಾಸ್ಟ್ ಡೇಟ್ ಒಳಗಡೆ ನೀವು ಅಡ್ಮಿಶನ್ ಆಗದಿದ್ದಲ್ಲಿ, ಮ್ಯಾನೇಜ್ಮೆಂಟ್ ಕೋಟದಲ್ಲಿ ಸೇರಬೇಕಾಗುತ್ತದೆ.
ಸ್ನೇಹಿತರೆ ಈ ಆರ್ಟಿಕಲ್ ನ ಮುಖಾಂತರ ನಿಮಗೆ ಮಾಹಿತಿ ಸಿಕ್ಕಿದೆ ಎಂದು ನಾನು ಅಂದುಕೊಂಡಿದ್ದೇನೆ. ನಿಮಗೆ ಪ್ಯಾರಾಮೆಡಿಕಲ್ ಬಗ್ಗೆ ಬೇರೆ ಯಾವ ಮಾಹಿತಿ ಬೇಕಾಗಿದ್ದಲ್ಲಿ ನನ್ನನ್ನು ಕಾಂಟಾಕ್ಟ್ ಮಾಡಿ.